ಕರ್ನಾಟಕ

karnataka

ETV Bharat / state

7 ವರ್ಷದ ಪ್ರೀತಿಗೆ ಎಳ್ಳುನೀರು ಬಿಟ್ಟ ಯುವತಿ.. ಮನನೊಂದು ಯುವಕ ಮಾಡಿದ್ದೇನು? - ಮನನೊಂದು ಆತ್ಮಹತ್ಯೆ

ಪ್ರೀತಿಸಿದ ಹುಡುಗಿಗೋಸ್ಕರ ಮನೋಜ್ ಎಂಬ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ

By

Published : Sep 9, 2019, 3:00 PM IST

ಬೆಂಗಳೂರು : ಪ್ರೀತಿಸಿದ ಹುಡುಗಿಗೋಸ್ಕರ ಪ್ರಾಣ ಬಿಡಲು ಪ್ರೇಮಿಯೊಬ್ಬ ಮುಂದಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮನೋಜ್ ಎಂಬ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು.

ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಕೆಪಿ ಅಗ್ರಹಾರದ ನಿವಾಸಿಯಾದ ಮನೋಜ್, ಯುವತಿಯೋರ್ವಳನ್ನ 7 ವರ್ಷದಿಂದ ಪ್ರೀತಿಸುತ್ತಿದ್ದ. ಆದರೆ, ಇಬ್ಬರ ಮಧ್ಯೆ ಮನಸ್ತಾಪದಿಂದಾಗಿ ಯುವತಿ 7 ವರ್ಷದ ಪ್ರೀತಿಯನ್ನ ತ್ಯಜಿಸಿ ಹೋಗಿದ್ದಳು. ಇದರಿಂದ ಮನನೊಂದ ಮನೋಜ್​, ಯುವತಿಯ ಮನೆ ಎದುರು ತನ್ನ ಗಾಡಿಯಲ್ಲಿದ್ದ 5 ಲೀಟರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇದನ್ನು ಕಂಡ ಸ್ಥಳೀಯರು ಕೂಡಲೇ ಮನೋಜ್​ನನ್ನು ರಕ್ಷಣೆ ಮಾಡಿದ್ದಾರೆ. ಈ ಕುರಿತು ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details