ಕರ್ನಾಟಕ

karnataka

ETV Bharat / state

ಸ್ಯಾಂಡಲ್​​ವುಡ್​ಗೆ​​ ಡ್ರಗ್ಸ್​ ನಂಟು ಆರೋಪ ಪ್ರಕರಣ: ತನಿಖೆ ಕೈಬಿಡುವಂತೆ ​​ಸಂಜನಾ ಆಪ್ತರ ಒತ್ತಾಯ? - actress sanjana news

ಚಂದನವನದಲ್ಲಿ ಡ್ರಗ್ಸ್​ ಮಾಫಿಯಾ ಆರೋಪ ಬರುತ್ತಿದ್ದಂತೆ ಡ್ರಗ್ಸ್​ ಜಾಲದಲ್ಲಿ ಭಾಗಿಯಾಗಿರುವ ನಟಿ ಸಂಜನಾ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಬಹಳ ಕಸರತ್ತು ನಡೆಸಿದ್ದಾರೆ. ತಮಗೆ ಗೊತ್ತಿರುವ ಹೈ-ಫೈ ವ್ಯಕ್ತಿಗಳ ಕೈಯಲ್ಲಿ ತನಿಖಾಧಿಕಾರಿಗಳಿಗೆ ಒತ್ತಡ ಹಾಕಲು ಯತ್ನಿಸಿದ್ದಾರೆ. ಈ ಎಲ್ಲಾ ಮಾಹಿತಿ ಸಂಜನಾರ ಕಾಲ್ ರೆಕಾರ್ಡ್ ಮೂಲಕ ತಿಳಿದುಬಂದಿದೆ ಎನ್ನಲಾಗ್ತಿದೆ.

Lot of things came out from CCB Investigation
ಸ್ಯಾಂಡಲ್​​ವುಡ್​​ ಡ್ರಗ್ ಪ್ರಕರಣ; ತನಿಖೆ ಕೈಬಿಡುವಂತೆ ​​ಸಂಜನಾ ಆಪ್ತರ ಒತ್ತಾಯ

By

Published : Sep 13, 2020, 10:32 AM IST

ಬೆಂಗಳೂರು: ಸ್ಯಾಂಡಲ್​​ವುಡ್​ಗೆ‌ ಡ್ರಗ್ಸ್​ ನಂಟು ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ಸಂಜನಾ ಗಲ್ರಾನಿಯ ಕರಾಮತ್ತು ಒಂದೊಂದಾಗಿ ತನಿಖೆ ವೇಳೆ ಬಯಾಲಾಗ್ತಿದೆ.

ತಾನು ಡ್ರಗ್ಸ್​ ಮಾಫಿಯಾದಲ್ಲಿ ಭಾಗಿಯಾಗಿಲ್ಲ, ನನ್ನ ಭವಿಷ್ಯ ಹಾಳಾಯ್ತು, ಸಿನಿಮಾ ಇಂಡಸ್ಟ್ರಿನಲ್ಲಿ ಮತ್ತೆ ಅವಕಾಶ ಸಿಗಲ್ಲವೆಂದು ಸಿಸಿಬಿ ಅಧಿಕಾರಿಗಳ ಎದುರು ರಂಪಾಟ ನಡೆಸಿರುವ ನಟಿ ಸಂಜನಾರ ಅಸಲಿತನವನ್ನು ತನಿಖಾಧಿಕಾರಿಗಳು ಸಾಕ್ಷಿ ಸಮೇತ ಕಲೆ ಹಾಕ್ತಿದ್ದಾರೆ. ಚಂದನವನದಲ್ಲಿ ಡ್ರಗ್ಸ್​ ಮಾಫಿಯಾ ವಿಚಾರ ಕೇಳಿ ಬರುತ್ತಿದ್ದಂತೆ ಡ್ರಗ್ಸ್​ ಜಾಲದಲ್ಲಿ ಭಾಗಿಯಾಗಿರುವ ನಟಿ ಸಂಜನಾ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಬಹಳ ಕಸರತ್ತು ನಡೆಸಿದ್ದಾರೆ. ತಮಗೆ ಗೊತ್ತಿರುವ ಹೈ-ಫೈ ವ್ಯಕ್ತಿಗಳ ಕೈಯಲ್ಲಿ ತನಿಖಾಧಿಕಾರಿಗಳಿಗೆ ಒತ್ತಡ ಹಾಕಲು ಯತ್ನಿಸಿದ್ದಾರೆ ಎಂದು ಹೇಳಲಾಗ್ತಿದೆ. ಈ ಎಲ್ಲಾ ಮಾಹಿತಿ ಸಂಜನಾರ ಕಾಲ್ ರೆಕಾರ್ಡ್ ಮೂಲಕ ತಿಳಿದುಬಂದಿದೆ.

ಆದ್ರೆ ತನಿಖಾಧಿಕಾರಿಗಳು ಯಾವುದಕ್ಕೂ ಬಗ್ಗದೆ ನಟಿ ಸಂಜನಾ ಡ್ರಗ್ಸ್​ ಪ್ರಕರಣದಲ್ಲಿ ಭಾಗಿಯಾಗಿರುವುದಕ್ಕೆ ಪಕ್ಕಾ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಮಾತ್ರವಲ್ಲದೇ ಸಂಜನಾ ಮನೆಯ ಮೇಲೆ ದಾಳಿ ಮಾಡಿದಾಗ ಸಿಕ್ಕಂತಹ ಚೆಕ್​​ಗಳು ಸಿಕ್ಕಿವೆ. ಇವುಗಳನ್ನು ನಟಿಗೆ ನೀಡಿದ ವ್ಯಕ್ತಿಗಳಿಗೆ ಇದು ಮುಳುವಾಗಲಿದೆ. ಹೌದು, ಪ್ರತಿಷ್ಠಿತ ರಾಜಕಾರಣಿಗಳು, ಕೆಲ ಹಿರಿಯಾಧಿಕಾರಿಗಳು, ಪ್ರತಿಷ್ಠಿತ ಬಿಲ್ಡರ್ಸ್​​​ಗಳ ಹೆಸರಿನಲ್ಲಿ ಸಂಜನಾ ಹೆಸರಿಗೆ ಚೆಕ್ ಬಂದಿವೆ ಎಂದು ಹೇಳಲಾಗ್ತಿದೆ. ವಿನಾಕಾರಣ ಚೆಕ್ ಕೊಡಲು ಸಾಧ್ಯವಿಲ್ಲ, ಹೀಗಾಗಿ ಆರೋಪಿಯ ಮತ್ತಷ್ಟು ಜಾಲವನ್ನು ಸಿಸಿಬಿ ಕಲೆ ಹಾಕುತ್ತಿದ್ದಾರೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂಜನಾ ಮದುವೆ ವಿಚಾರ ಸಂಬಂಧ, ವೈದ್ಯ ಪಾಷಾನನ್ನು ಕೂಡಾ ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ. ಪಾಷಾ ಕೂಡಾ ಕೋಟಿ ಒಡೆಯ, ಕೋಟಿ ಆದಾಯದ ಮೂಲವೇನು ಅನ್ನೋದರ ತನಿಖೆ ಕೂಡ ಮುಂದುವರೆಯಲಿದೆ.

ಸದ್ಯ ಸಿಸಿಬಿ ಪೊಲೀಸರ ವಶದಲ್ಲಿರುವ ಸಂಜನಾ ಕಸ್ಟಡಿ ನಾಳೆಗೆ ಅಂತ್ಯವಾಗಲಿದೆ. ಆದ್ರೆ, ಸದ್ಯ ಸಂಜನಾ ಆಪ್ತ ಫಾಜಿಲ್ ಹಾಗೂ ಇನ್ನಿತರೆ ವ್ಯಕ್ತಿಗಳು ತಲೆಮರೆಸಿಕೊಂಡಿರುವ ಕಾರಣ ಮತ್ತಷ್ಟು ದಿನ ಸಂಜನಾರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ‌.

ABOUT THE AUTHOR

...view details