ಹೊಸಕೋಟೆ: ಮುಂಜಾನೆ ಬೇಗ ಏಳೋದು ಅಂದ್ರೆ ಹೆಚ್ಚಿನ ಜನರಿಗೆ ಆಲಸ್ಯದ ವಿಷಯ. ಆದ್ರೆ ಸಂಡೇ ಬಂತೆಂದರೆ ಈ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಜನ ಕಿ.ಮೀ.ಗಟ್ಟಲೆ ಕಾದು ನಿಲ್ತಾರೆ. ಯಾಕೆ ಅಂತೀರಾ? ಬಿಸಿ ಬಿಸಿ ದಮ್ ಬಿರಿಯಾನಿ ಸವಿಯೋಕೆ ಇಲ್ಲಿ ಜನ ಮುಗಿಬೀಳ್ತಾರೆ.
ಹೊಸಕೋಟೆ: ಆನಂದ್ ದಮ್ ಬಿರಿಯಾನಿ ಸವಿಯಲು ಮುಗಿಬಿದ್ದ ಜನ - dhum biriyani latest news
ಹೊಸಕೋಟೆ ಹೆದ್ದಾರಿ ಬದಿಯಲ್ಲಿರೋ ಆನಂದ್ ದಮ್ ಬಿರಿಯಾನಿ ಸವಿಯಲು ಬಿರಿಯಾನಿ ಸೆಂಟರ್ ಎದುರು ಜನ ಮುಗಿಬೀಳುತ್ತಿದ್ದಾರೆ.
ಹೊಸಕೋಟೆ ಹೆದ್ದಾರಿ ಬದಿಯಲ್ಲಿರೋ ಆನಂದ್ ದಮ್ ಬಿರಿಯಾನಿ ಸವಿಯಲು ಯುವಕ-ಯುವತಿಯರು ಮುಂಜಾನೆ 5 ಗಂಟೆಗೆ ಬರ್ತಾರೆ. 2 ಕಿ.ಮೀ.ಗೂ ಅಧಿಕ ದೂರ ಸರತಿ ಸಾಲಿನಲ್ಲಿ ನಿಂತು ಬಿರಿಯಾನಿ ಸವಿಯಲು ಮುಗಿಬಿಳೋದೇ ಇಲ್ಲಿನ ವಿಶೇಷ. ಟೀ-ಕಾಫಿ ಅಂಗಡಿಗಳು ತೆಗೆಯುವುದಕ್ಕೂ ಮುನ್ನ ದಮ್ ಬಿರಿಯಾನಿ ಅಂಗಡಿಗಳು ಇಲ್ಲಿ ತೆರೆಯುತ್ತವೆ. ವೀಕೆಂಡ್ ಮೂಡ್ನಲ್ಲಿ ನಂದಿ ಹಿಲ್ಸ್ ಸೇರಿದಂತೆ ಪ್ರವಾಸಿ ತಾಣಗಳಿಗೆ ಲಾಂಗ್ ಡ್ರೈವ್ ಬರೋ ಯುವಕ-ಯುವತಿಯರು ನಂದಿ ಹಿಲ್ಸ್ನಲ್ಲಿ ಸನ್ ರೈಸ್ ನೋಡಿಕೊಂಡು ನಂತರ ಹೊಸಕೋಟೆಗೆ ಬಂದು ಬಿರಿಯಾನಿ ಸವಿಯುತ್ತಾರೆ.
ಲಾಕ್ಡೌನ್ಗೂ ಮುನ್ನ ಸಾಕಷ್ಟು ಪ್ರಸಿದ್ಧಿಯಾಗಿದ್ದ ಹೊಸಕೋಟೆ ಬಿರಿಯಾನಿ, ಲಾಕ್ಡೌನ್ ಆದ ಕಾರಣ ಕಳೆದ ಮೂರ್ನಾಲ್ಕು ತಿಂಗಳುಗಳ ಕಾಲ ಬಂದ್ ಆಗಿತ್ತು. ಹೀಗಾಗಿ ಬೆಳ್ಳಂಬೆಳಗ್ಗೆ ಬಿಸಿ ಬಿಸಿ ಬಿರಿಯಾನಿ ಸವಿಯುವುದನ್ನು ಮಿಸ್ ಮಾಡಿಕೊಂಡಿದ್ದ ಬಿರಿಯಾನಿ ಪ್ರಿಯರು ಬಿರಿಯಾನಿ ಸೆಂಟರ್ ಒಪನ್ಗಾಗಿ ಕಾದು ಕುಳಿತಿದ್ರು. ಅದೇ ರೀತಿ ಕಳೆದ ಎರಡು ವಾರದಿಂದ ಬಿರಿಯಾನಿ ಸೆಂಟರ್ ಒಪನ್ ಆಗಿದ್ದು, ಇದೀಗ ಗುಂಪು ಗುಂಪಾಗಿ ಸಾವಿರಾರು ಮಂದಿ ಬಿರಿಯಾನಿ ಸವಿಯಲು ಆಗಮಿಸುತ್ತಿದ್ದಾರೆ. ಹೆದ್ದಾರಿ ಬದಿಯಲ್ಲಿ ಹೆಚ್ಚಿನ ಜನರು ಜಮಾವಣೆಯಾಗುತ್ತಿದ್ದು, ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಬಿರಿಯಾನಿ ಸವಿಯಲು ಮುಂದಾಗ್ತಿದ್ದಾರೆ.