ಬೆಂಗಳೂರು: ಲಾರಿ ಚಾಲಕರಿಗೆ ಸಹಾಯಧನ ಘೋಷಣೆಗೆ ಒತ್ತಾಯ ಎಲ್ಲೆಡೆ ಕೇಳಿ ಬಂದಿದ್ದು, ಇದೀಗ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಲಾರಿ ಚಾಲಕರಿಗೆ ಸಹಾಯಧನ ಘೋಷಣೆಗೆ ಒತ್ತಾಯ ರಾಜ್ಯ ಸರ್ಕಾರ ಲಾರಿ ಚಾಲಕರನ್ನು ಕಡೆಗಣಿಸಿದೆ. ತಿಂಗಳಿಗೆ 500-600 ಕೋಟಿ ರೂ. ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತೇವೆ. ಆದರೂ ಸರ್ಕಾರ ಲಾರಿ ಚಾಲಕರಿಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಕೂಡಲೇ ಲಾರಿ ಚಾಲಕರಿಗೆ 5 ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಮೆಡಿಕಲ್ ಇನ್ಸುರೆನ್ಸ್ ನೀಡಬೇಕು. ಆರು ತಿಂಗಳು ಟ್ಯಾಕ್ಸ್ ವಿನಾಯಿತಿ ಕೊಡಬೇಕು. ಪರಿಹಾರ ಘೋಷಣೆ ಮಾಡಿಲ್ಲವಾದರೆ ಜೂನ್ 1ರಿಂದ ರಾಜ್ಯಾದ್ಯಂತ ಲಾರಿ ಸಂಚಾರ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಲಾರಿಗಳಲ್ಲಿ ಆಕ್ಸಿಜನ್, ಗ್ಯಾಸ್ ಇತರೆ ಅಗತ್ಯ ವಸ್ತುಗಳ ಸಾಗಾಣಿಕೆ ನಡೆಯುತ್ತಿದೆ. ಸರ್ಕಾರ ಪರಿಹಾರ ಘೋಷಣೆ ಮಾಡದೇ ಹೋದಲ್ಲಿ ಅಗತ್ಯ ವಸ್ತುಗಳ ಸಾಗಾಣಿಕೆ ನಿಲ್ಲಿಸುತ್ತೇವೆ ಎಂದು ಲಾರಿ ಮಾಲೀಕರ ಸಂಘದಿಂದ ಸ್ಪಷ್ಟವಾಗಿ ಹೇಳುತ್ತೇನೆ ಎಂದು ಅಧ್ಯಕ್ಷ ಷಣ್ಮುಗಪ್ಪ ರಾಜ್ಯ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ:ರಾಜ್ಯ ರಾಜಧಾನಿಯಲ್ಲಿ ತಗ್ಗಿದ ಕೊರೊನಾ ಅಬ್ಬರ: 9,463 ಹೊಸ ಪ್ರಕರಣ ಪತ್ತೆ