ಆನೇಕಲ್:ಗ್ರಾಮೀಣ ಭಾಗದ ಕ್ರೀಡೆಗಳು ನಶಿಸುತ್ತಿರುವ ಸಂದರ್ಭದಲ್ಲಿ ಮಧ್ಯಮ ವರ್ಗದ ಕ್ರೀಡೆಗೆ ಯುವಕರು ಆಕರ್ಷಿತರಾಗುತ್ತಿದ್ದಾರೆ. ವೇಗವಾಗಿ ಸೆಳೆದ ಕ್ರಿಕೆಟ್ ಆಟ ಒಂದೆಡೆಯಾದರೆ ಪ್ರೊ.ಕಬಡ್ಡಿ ಪಂದ್ಯಗಳು ಮತ್ತೊಂದು ಕಡೆ ಎಲ್ಲ ತರಹದ ಆಟಗಾರರನ್ನು ಸೆಳೆಯಿತು.
ಆನೇಕಲ್ನಲ್ಲಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿದ ಲೂಸ್ ಮಾದ - undefined
ನಾಗನಾಯಕನಹಳ್ಳಿ ಎಂ.ಆರ್. ಸ್ಪೋರ್ಟ್ಸ್ ಅರೇನಾ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿದ ನಟ ಲೂಸ್ ಮಾದ.
ಲೂಸ್ ಮಾದ
ಆನೇಕಲ್ ತಾಲೂಕಿನ ಮರಸೂರು ಗೇಟ್ ಬಳಿಯಲ್ಲಿ ನಾಗನಾಯಕನಹಳ್ಳಿ ಎಂ.ಆರ್. ಸ್ಪೋಟ್ಸ್ ಅರೇನಾ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಯನ್ನು ಚಲನಚಿತ್ರ ನಟ ಲೂಸ್ ಮಾದ (ಯೋಗಿ), ಟಗರು ಚಲನಚಿತ್ರದ ನಟಿ ತ್ರಿವೇಣಿ, ಖ್ಯಾತ ವೈದ್ ಡಾ.ಮೋಹನ್, ಅಂತರಾಷ್ಟ್ರೀಯ ಕ್ರೀಡಾಪಟು ನಂಜುಡಪ್ಪ ಚಾಲನೆ ನೀಡಿದರು.
ಯೋಗಿ ಮಾತನಾಡಿ, ಸತತ ಪ್ರಯತ್ನದಿಂದ ಇಂಥ ಗರಡಿಯಲ್ಲಿ ತರಬೇತಿ ಪಡೆದು ಸಾಧನೆ ಮಾಡಿ ರಾಜ್ಯಕ್ಕೆ ಹೆಸರು ತರಲಿ ಎಂದು ಹಾರೈಸಿದರು.