ಕರ್ನಾಟಕ

karnataka

ETV Bharat / state

ಚುನಾವಣೆಯಲ್ಲಿ ಹಣದ ಹೊಳೆ: ರಾಜ್ಯದಲ್ಲಿ ಈವರೆಗೆ ಜಪ್ತಿಯಾದ ಮದ್ಯ, ನಗದು ಎಷ್ಟು ಗೊತ್ತಾ?! - undefined

ಮತದಾರರಿಗೆ ರಾಜಕೀಯ ಪಕ್ಷಗಳು ಹಲವು ರೀತಿಯ ಆಮಿಷವೊಡ್ಡುತ್ತಿವೆ. ಹೀಗಾಗಿ ಅಲರ್ಟ್​ ಆಗಿರುವ ಅಧಿಕಾರಿಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಚುನಾವಣಾಧಿಕಾರಿಗಳ ತಂಡ ಇಲ್ಲಿವರೆಗೆ ವಶಪಡಿಸಿಕೊಂಡ ವಸ್ತುಗಳ ಅಂಕಿ-ಅಂಶ ನೊಡಿದರೆ ಬೆರಗಾಗುವಂತಿದೆ.

ಜಪ್ತಿ

By

Published : Apr 15, 2019, 4:41 PM IST

ಬೆಂಗಳೂರು : 2019 ರ ಲೋಕಸಭಾ ಚುನಾವಣೆ ಹಿನ್ನೆಲೆ ಎಲ್ಲೆಡೆ ಚುನಾವಣೆ ರಂಗೇರುತ್ತಿದೆ. ರಾಜ್ಯದ ನಾನಾ ಕಡೆ ರಾಜಕಾರಣಿಗಳು ಭರ್ಜರಿ ಮತಯಾಚನೆ ಮಾಡ್ತಿದ್ದಾರೆ. ಆದ್ರೆ ಮತದಾರರಿಗೆ ಹಲವು ಆಮಿಷಗಳನ್ನು ರಾಜಕೀಯ ಪಕ್ಷಗಳು ಒಡ್ಡುತ್ತಿವೆ. ಹೀಗಾಗಿ ಚುನಾವಣಾಧಿಕಾರಿಗಳ ತಂಡ ಭರ್ಜರಿ ಕಾರ್ಯಾಚರಣೆಗಳ ಮೂಲಕ ಕೋಟ್ಯಂತರ ರೂಪಾಯಿ ಹಣ, ಸಾವಿರಾರು ಲೀಟರ್​ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಹೌದು, ಚುನಾವಣೆಗಾಗಿ ವಿಶೇಷವಾಗಿ 1,512 ಫ್ಲೈಯಿಂಗ್ ಸ್ಕ್ವಾಡ್ಸ್, 1,837 ಸ್ಪಾಟಿಕ್ ಸ್ಕ್ವಾಡ್​ಗಳು, 320 ಅಬಕಾರಿ ತಂಡಗಳು,180 ವಾಣಿಜ್ಯ ತೆರಿಗೆ ತಂಡಗಳು ಹಾಗೂ ಖಾಕಿ ಪಡೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ತಂಡಗಳು ಮತದಾನ ಘೋಷಣೆಯಾದ ದಿನದಿಂದ‌ ಈವರೆಗೆ ಬರೋಬ್ಬರಿ 15,22,99,772 ರೂ. ನಗದು, 61,73,318 ರೂ. ಮೌಲ್ಯದ 17,000 ಲೀಟರ್ ಮದ್ಯ, 1,42,200 ರೂ. ಮೌಲ್ಯದ 135 ಕೆಜಿ ಮಾದಕ ದ್ರವ್ಯ, 2,17,5,779 ರೂ. ಮೌಲ್ಯದ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇತ್ತ ಆದಾಯ ತೆರಿಗೆ ಇಲಾಖೆಯಿಂದ 14,95,55,810 ರೂ. ನಗದು, 6,51,34,780 ರೂ. ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯಿಂದ 35,32,57,475 ರೂ. ಮೌಲ್ಯದ 8, 71,163 ಲೀ. ಮದ್ಯ, 4,48000 ರೂ. ಮೌಲ್ಯದ 14.9 ಕೆಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ಇಲಾಖೆ ಈವರೆಗೆ 2,324 ಗಂಭೀರ ಪ್ರಕರಣ, 3,339 ಮದ್ಯದ ಪರವಾನಿಗೆಯನ್ನ ಉಲ್ಲಂಘಿಸಿದ ಪ್ರಕರಣಗಳು, 8 ಎನ್​ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಅನ್ವಯ 10,054 ಪ್ರಕರಣ, 1,237 ವಿವಿಧ ಮಾದರಿಯ ವಾಹನ, 95,422 ಶಸ್ರ್ತಾಸ್ತ್ರಗಳ ಜಮೆ, 8 ಶಸ್ತ್ರಾಸ್ತ್ರಗಳ ವಶ, 10 ಶಸ್ತ್ರಾಸ್ತ್ರಗಳ ಪರವಾನಿಗೆಯನ್ನ ರದ್ದುಗೊಳಿಸಿದ್ದಾರೆ.

ಸಿಆರ್​ಪಿಸಿ ಕಾಯ್ದೆಯಡಿ 44,648 ಪ್ರಕರಣ ದಾಖಲಾಗಿದ್ದು, ಈ ಪ್ರಕರಣಗಳಡಿ 47,139 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನೂ ಸಹ ಪಡೆಯಲಾಗಿದೆ. 39,343 ಜಾಮೀನು ರಹಿತ ವಾರೆಂಟ್​ಗಳನ್ನ ಜಾರಿ ಮಾಡಲಾಗಿದೆ. ಒಟ್ಟಾರೆ ಗೆಲುವಿನ ಭರಾಟೆಯಲ್ಲಿ ಕಾನೂನು ಮೀರಿ ನಡೆಯುತ್ತಿರುವವರ ಮೇಲೆ ಅಧಿಕಾರಿಗಳು ಕಣ್ಣಿಟ್ಟಿರುವುದು ಮಾತ್ರ ಸತ್ಯ.

For All Latest Updates

TAGGED:

ABOUT THE AUTHOR

...view details