ಬೆಂಗಳೂರು:ರಾಜ್ಯದಲ್ಲಿ ಮಂಗಳವಾರ ಲೋಕೋಪಯೋಗಿ, ಪಂಚಾಯತ್ ಅಭಿವೃದ್ಧಿ, ಬೆಸ್ಕಾಂ, ಕರ್ನಾಟಕ ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧದ 6 ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಕುರಿತು ಲೋಕಾಯುಕ್ತ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ಒಟ್ಟು 35 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದು, ಈ ವೇಳೆ ಕೋಟ್ಯಂತರ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಲೋಕಾಯುಕ್ತ ರೈಡ್: ಲಕ್ಷಾಂತರ ನಗದು, ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆ ಬೆಂಗಳೂರು ನಗರದ ಕೆ.ಆರ್ ವೃತ್ತದಲ್ಲಿರುವ ಬೆಸ್ಕಾಂನ ಮುಖ್ಯ ಕಚೇರಿಯ ಚೀಫ್ ಜನರಲ್ ಮ್ಯಾನೇಜರ್(ಓಪಿ) ಎಂ.ಎಲ್. ನಾಗರಾಜ್ ಅವರಿಗೆ ಸೇರಿದ 7 ಸ್ಥಳಗಳಲ್ಲಿ ಶೋ‘ಕಾರ್ಯ ಕೈಗೊಂಡು ಅವರಿಗೆ ಸಂಬಂಧಿಸಿದ ಅಂದಾಜು 5.35 ಕೋಟಿ ರೂ. ಮೌಲ್ಯದ 13 ನಿವೇಶನಗಳು, 2 ಮನೆ, ಕೃಷಿ ಜಮೀನು, 6.77 ಲಕ್ಷ ರೂ. ಚರಾಸ್ತಿ, 16.44 ಲಕ್ಷ ರೂ. ನಗದು, 13.50 ಲಕ್ಷ ರೂ. ಚಿನ್ನಾಭರಣಗಳು ಮತ್ತು ಗೃಹೋಪಯೋಗಿ ವಸ್ತುಗಳು ಸೇರಿ 63.66 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು ಜಿಲ್ಲೆಯ ದೇವನಹಳ್ಳಿ ತಾಲೂಕಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಡಿ.ಎಂ. ಪದ್ಮನಾಭ ಅವರಿಗೆ ಸೇರಿದ 5.35 ಕೋಟಿ ಮೌಲ್ಯದ ಎರಡು ಮನೆ, 8-18 ಎಕರೆ ಕೃಷಿ ಜಮೀನು ಮತ್ತು ಒಂದು ಫಾರ್ಮ್ ಹೌಸ್, 2.62 ಲಕ್ಷ ರೂ.ದ ಚರಾಸ್ತಿ, 17.24 ಲಕ್ಷ ರೂ. ನಗದು, 28.75 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, ಇತರೆ ವಸ್ತುಗಳು ಸೇರಿ 5.98 ಕೋಟಿ ರೂ.ಗಳನ್ನು ಜಪ್ತಿಮಾಡಿದ್ದಾರೆ.
ಎಇಇ ಲೋಕಾ ಬಲೆಗೆ:ರಾಮನಗರ ಜಿಲ್ಲೆಯ ಪ್ರಭಾರ ಇ.ಇ ಕೆಆರ್‌ಇಡಿಎಲ್ ಕಚೇರಿಯ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಸೈಯದ್ ಮುನೀರ್ ಅಹಮದ್ ಅವರಿಗೆ ಸೇರಿರುವ 4.10 ಕೋಟಿ ರೂ. ಬೆಲೆಬಾಳುವ 2 ನಿವೇಶನ, 7 ಮನೆ ಮತ್ತು ಜಮೀನು ಹಾಗೂ 8.54 ಲಕ್ಷ ರೂ. ಮೌಲ್ಯದ ಚರಾಸ್ತಿ, 73.47 ಲಕ್ಷ ರೂ. ನಗದು, 21 ಲಕ್ಷ ರೂ. ಚಿನ್ನಾಭರಣ, 35 ಲಕ್ಷ ರೂ. ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು 1.38 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಲೋಕಾಕಾರಿಗಳು ವಶಪಡಿಸಿಕೊಂಡಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ: ಲಕ್ಷಾಂತರ ನಗದು, ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆ ರಾಮನಗರದಲ್ಲಿ ಎರಡು ಪ್ರಕರಣ:ತಾವರೆಕೆರೆ ಹೋಬಳಿಯ ಚನ್ನೇನಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯ ಎಚ್.ಎಸ್. ಸುರೇಶ್ ಅವರ 21.27 ಕೋಟಿ ರೂ. ಬೆಲೆಬಾಳುವ 16 ನಿವೇಶನ, 1 ಮನೆ ಮತ್ತು 7.6 ಎಕರೆ ಜಮೀನು ಹಾಗೂ 11.97 ರೂ. ಮೌಲ್ಯದ ಚರಾಸ್ತಿ, 2.11 ಕೋಟಿ ರೂ. ನಗದು, 2.07 ಕೋಟಿ ರೂ. ಸೇರಿ ಒಟ್ಟು 4.30 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಇನ್ನೂ ನಗರ ಮತ್ತು ಯೋಜನೆ, ಆನೇಕಲ್ ಯೋಜನಾ ಪ್ರಾಕಾರದ ಸದಸ್ಯ ಕಾರ್ಯದರ್ಶಿ ಮತ್ತು ಜಂಟಿ ನಿರ್ದೇಶಕ ಮಂಜೇಶ್. ಬಿ ಅವರಿಗೆ ಸೇರಿರುವ 1.20 ಕೋಟಿ ರೂ. ಬೆಲೆಬಾಳುವ 11 ನಿವೇಶನ, 1 ಮನೆ ಮತ್ತು 5.07 ಲಕ್ಷ ರೂ. ಮೌಲ್ಯದ ಚರಾಸ್ತಿಘಿ, 35.97 ಲಕ್ಷ ರೂ. ನಗದು, 77.16 ಲಕ್ಷ ರೂ, ಗೃಹೋಪಯೋಗಿ ವಸ್ತುಗಳನ್ನು ಸೇರಿ ಒಟ್ಟು 1.98 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಪತ್ತೆಯಾಗಿವೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಾಲ್ಕು ಕಡೆ ಬೆಸ್ಕಾಂ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ:ತಾಲೂಕಿನ ಬೆಸ್ಕಾಂ ಜನರಲ್ ಮ್ಯಾನೇಜರ್ ನಾಗರಾಜ್ ಅವರ ಸಂಬಂಧಪಟ್ಟ ಶ್ರೀ ಲಕ್ಷ್ಮಿ ವೆಂಕಟೇಶ್ವರ ಶಿಕ್ಷಣ ಸಂಸ್ಥೆ, ಕೂಡ್ಲಿಗಿ ತಾಲೂಕಿನಲ್ಲಿ ಬಾಡಗಿ ವಾಸವಿದ್ದ ಮನೆ ಮತ್ತು ಗುಡೆಕೋಟೆಯಲ್ಲಿರುವ ಪೆಟ್ರೋಲ್ ಬಂಕ್ ಮತ್ತು ವಿರುಪಾಪುರ ಹತ್ತಿರ ಇರುವ ಮತ್ತೊಂದು ಪೆಟ್ರೋಲ್ ಬಂಕ್ ಮೇಲೆ ನಾಲ್ಕು ಕಡೆ ಲೋಕಾಯುಕ್ತರು ದಾಳಿ ಮಾಡಿ ಸತತ 12 ಗಂಟೆಗೂ ಹೆಚ್ಚು ಕಾಲ ಸಂಬಂಧಿಸಿದ ದಾಖಲೆ ಪರಿಶೀಲನೆ ಮಾಡಿದ್ದಾರೆ.
ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮನೆ ಮೇಲೆ ಲೋಕಾ ದಾಳಿ:ಲೋಕೋಪಯೋಗ ಇಲಾಖೆ ಎಂಜಿನಿಯರ್ ಸತೀಶ್‌ಬಾಬು ಅವರ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಅವರಿಗೆ ಸಂಬಂಧಪಟ್ಟ 3.70 ಕೋಟಿ ರೂ. ಬೆಲೆಬಾಳುವ 1 ನಿವೇಶನ, ಎರಡು ಮನೆ ಮತ್ತು 15 ಎಕರೆ ಜಮೀನು ಹಾಗೂ 9 ಲಕ್ಷ ರೂ. ಮೌಲ್ಯದ ಚರಾಸ್ತಿ, 64.62 ಲಕ್ಷ ರೂ. ನಗದು, 8.70 ಲಕ್ಷ ರೂ. ಸೇರಿ ಒಟ್ಟು 82.32 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಲೋಕಾಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಇವರು ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯಲ್ಲಿ ಮನೆಯನ್ನು ಹೊಂದಿದ್ದಾರೆ. ಸತೀಶ್ ಬಾಬುಗೆ ಸೇರಿದ ಮನೆ ಮೇಲೆ ದಾಳಿ ನಡೆಸಲಾಗಿದೆ. ಈ ಹಿಂದೆ ಚಿತ್ರದುರ್ಗದಲ್ಲಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬೆಂಗಳೂರು ಮತ್ತು ಚಿತ್ರದುರ್ಗದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸಂಜೆವರೆಗೆ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೊರೊನಾ ಪಾಸಿಟಿವ್ : ನಿಗದಿತ ಕಾರ್ಯಕ್ರಮ ರದ್ದು