ಬೆಂಗಳೂರು:ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಸಮರ ಮುಂದುವರೆಸಿದ್ದಾರೆ. ಬೆಂಗಳೂರು ಕಂದಾಯ ಭವನ ಕಚೇರಿಯಲ್ಲಿ ಲಂಚ ಪಡೆದುಕೊಳ್ಳುವಾಗ ವಿಶೇಷ ಶಿರಸ್ತೇದಾರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕಂದಾಯ ಭವನ ಕಚೇರಿಯಲ್ಲಿ ವಿಶೇಷ ಶಿರಸ್ತೇದಾರ್ ಆಗಿರುವ ಶ್ರೀಕಾಂತ್ ಲೋಕಾಯುಕ್ತ ಬಲೆಗೆ ಬಿದ್ದವರು. ದೂರುದಾರದಿಂದ 45 ಸಾವಿರ ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ.