ಕರ್ನಾಟಕ

karnataka

ETV Bharat / state

ಇಂದು ಮಧ್ಯ ರಾತ್ರಿಯಿಂದಲೇ ಲಾಕ್​​ಡೌನ್ ನಿಯಮ ಸಡಿಲಿಕೆ: ಯಾವ್ಯಾವ ಕ್ಷೇತ್ರಕ್ಕೆ ವಿನಾಯಿತಿ?

ಸರ್ಕಾರವು ರಾಜ್ಯದಲ್ಲಿ ಲಾಕ್​​​ಡೌನ್ ನಿಯಮದಲ್ಲಿ ಸಡಿಲಿಕೆಗೆ ಮುಂದಾಗಿದ್ದು, ಇಂದು ಮಧ್ಯ ರಾತ್ರಿಯಿಂದಲೇ ಲಾಕ್​​​​ಡೌನ್ ಸಡಿಲಿಕೆ ಆಗಲಿದೆ ಎಂದು ತಿಳಿಸಲಾಗಿದೆ. ಅಂತಾರಾಜ್ಯ ಜಲ್ಲಿ ವಾಹನ ಓಡಾಡಕ್ಕೆ ಅವಕಾಶ ನೀಡಲಾಗಿದ್ದು, ಕೃಷಿ ಮತ್ತು ಮೀನುಗಾರಿಕೆ ವಲಯಕ್ಕೆ ಸಂಪೂರ್ಣ ಅನುಮತಿ ನೀಡಲಾಗಿದೆ.

Lockdown rule loosened from midnight today
ಇಂದು ಮಧ್ಯ ರಾತ್ರಿಯಿಂದ ಲಾಕ್​​ಡೌನ್ ನಿಯಮ ಸಡಿಲಿಕೆ

By

Published : Apr 22, 2020, 5:45 PM IST

ಬೆಂಗಳೂರು: ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ, ಕೆಲಸ ಹಾಗೂ ಅಗತ್ಯ ಸೇವೆಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರವು ರಾಜ್ಯದಲ್ಲಿ ಲಾಕ್​​​ಡೌನ್ ನಿಯಮದಲ್ಲಿ ಸಡಿಲಿಕೆ ಮಾಡಿದ್ದು, ಇಂದು ರಾತ್ರಿಯಿಂದಲೇ ಲಾಕ್​​​​ಡೌನ್ ಸಡಿಲಿಕೆ ಆಗಲಿದೆ ಎಂದು ತಿಳಿಸಲಾಗಿದೆ.

ಕಾರ್ಯ ನಿರ್ವಹಣೆಗೆ ಸಡಿಲಿಕೆ ಪಡೆದ ಕ್ಷೇತ್ರಗಳೆಂದರೆ, ಪೇಪರ್, ರಸಗೊಬ್ಬರ, ಎಪಿಎಂಸಿ ಮಾರ್ಕೆಟ್ ಸಂಪೂರ್ಣ ತೆರೆಯಲಿವೆ. ಕೃಷಿ ನೀರಾವರಿಗೆ ಯಾವುದೇ ನಿರ್ಬಂಧವಿಲ್ಲ. ಅಂತಾರಾಜ್ಯ ಜಲ್ಲಿ ವಾಹನ ಓಡಾಡಕ್ಕೂ ಅವಕಾಶ ನೀಡಲಾಗಿದೆ. ಕೃಷಿ ಮತ್ತು ಮೀನುಗಾರಿಕೆ ವಲಯಕ್ಕೆ ಸಂಪೂರ್ಣ ಅನುಮತಿ ಕಲ್ಪಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದ್ದರೆ ಇದ್ಯಾವುದೂ ಕಂಟೈನ್​ಮೆಂಟ್​ ಝೋನ್ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಲಾಗಿದೆ.

ಟೀ-ಕಾಫಿ ಪ್ಲಾಂಟೇಷನ್​​​​​​ಗೆ ಅನುಮತಿ ಕೊಟ್ಟಿದ್ದು, ಪಾಸ್ ಇದ್ದವರಿಗಷ್ಡೇ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಶೇ.50 ರಷ್ಟು ಕಾರ್ಮಿಕರಿಗೆ ಅನುವು ಮಾಡಿಕೊಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಕಾಮಗಾರಿಗೆ ಅವಕಾಶ ಕಲ್ಪಿಸಿದ್ದು, ಹೈನುಗಾರಿಕೆ ಮತ್ತು ಪಶು ಸಂಗೋಪನೆಗೆ ಅನುಮತಿ ನೀಡಲಾಗಿದೆ.

ಇಂದು ಮಧ್ಯ ರಾತ್ರಿಯಿಂದ ಲಾಕ್​​ಡೌನ್ ನಿಯಮ ಸಡಿಲಿಕೆ

ಹೋಟೆಲ್​​​​​​​ಗಳಲ್ಲಿ ಪಾರ್ಸೆಲ್ ಸೇವೆಗಳಿಗೆ ಅವಕಾಶವನ್ನು ನೀಡಲಾಗಿತ್ತು, ಈಗ ಅಧಿಕೃತಗೊಳಿಸಲಾಗಿದೆ. ಬ್ಯಾಂಕುಗಳ ನಿರ್ವಹಣೆ ಕಾರ್ಯ ಮುಂದುವರಿಕೆ ಆಗಲಿದ್ದು, ಆರೋಗ್ಯ ಕ್ಷೇತ್ರದ ಎಲ್ಲಾ ಚಟುವಟಿಕೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಕೋರಿಯರ್ ಸೇವೆಗೆ ಅನುಮತಿ ನೀಡಲಾಗಿದೆ. ಮನರೇಗಾ ಯೋಜನೆಯಡಿ ಕೆಲಸಕ್ಕೆ ಅವಕಾಶ ಕಲ್ಪಿಸಿದ್ದು, ನಿಯಮಾನುಸಾರ ಕೆಲಸಕ್ಕೆ ಸೂಚನೆ ಕೊಡಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ನಿರ್ವಹಣೆಗೆ ಸಮ್ಮತಿಸಲಾಗಿದೆ. ನೀರಾವರಿಗೆ ಸಂಬಂಧಿಸಿದ ಕೆಲಸಕ್ಕೆ ಅವಕಾಶ ‌ನೀಡಲಾಗಿದೆ.

ಯಾವ ಸೇವೆಗಳು ಇರಲ್ಲ: ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ಇಲ್ಲ. ಶಾಪಿಂಗ್ ಮಾಲ್, ಸಿನಿಮಾ ಥಿಯೇಟರ್ ತೆರೆಯುವುದಿಲ್ಲ, ಸದ್ಯಕ್ಕೆ ಶಾಲಾ ಕಾಲೇಜು ತೆರೆಯುವಂತಿಲ್ಲ. ಟ್ಯಾಕ್ಸಿ ಆಟೋ ಬಸ್ ಸಂಚಾರ ಬಂದ್ ಇರಲಿದೆ. ವಾಣಿಜ್ಯ ಮತ್ತು ಕೈಗಾರಿಕೆಗೆ ಅವಕಾಶ ನೀಡಿಲ್ಲ. ಎಲ್ಲಾ ಸ್ಪೋರ್ಟ್ಸ್, ಅಕಾಡೆಮಿಗಳು ತೆರೆಯುತ್ತಿಲ್ಲ. ಮೃತರ ಅಂತಿಮ ಸಂಸ್ಕಾರದಲ್ಲಿ 20 ಜನರಕ್ಕಿಂತ ಹೆಚ್ಚು ಭಾಗವಹಿಸುವಂತಿಲ್ಲ. ದೇವಸ್ಥಾನ, ಮಠ ಮಂದಿರಗಳಿಗೆ ಸಡಿಲಿಕೆ ಇರಲ್ಲ.

ABOUT THE AUTHOR

...view details