ಕರ್ನಾಟಕ

karnataka

ETV Bharat / state

ಕೊರೊನಾಗೆ ಲಾಕ್​ಡೌನ್​ ಪರಿಹಾರವಲ್ಲ, ಅದು ಕೇವಲ ನಿಯಂತ್ರಣಕ್ಕೆ ಒಂದು ಸಾಧನ: ಖಂಡ್ರೆ - ಸಂಪೂರ್ಣ ಲಾಕ್​ಡೌನ್​ ಘೋಷಣೆ

ಸರ್ಕಾರ ಲಾಕ್​ಡೌನ್​ ವಿಚಾರ ಪ್ರಸ್ತಾಪಿಸಿದಂತೆ ಜನರ ನೋವು-ನಲಿವಿನ ಕಡೆಗೂ ಗಮನ ಕೊಡಬೇಕು. ನಿತ್ಯ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಹೆಚ್ಚಳ, ಆಕ್ಸಿಜನ್ ಪೂರೈಕೆಗೆ ಸೂಕ್ತ ವ್ಯವಸ್ಥೆ, ರೆಮ್ಡೆಸಿವಿರ್ ಸೇರಿ ಇತರ ಔಷಧಗಳ ಸಮರ್ಪಕ ಪೂರೈಕೆ ಬಗ್ಗೆಯೂ ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಈಶ್ವರ್ ಖಂಡ್ರೆ ಒತ್ತಾಯ ಮಾಡಿದ್ದಾರೆ.

Lockdown is not a solution for Corona; Eshwara Khandre
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

By

Published : May 7, 2021, 10:38 PM IST

ಬೆಂಗಳೂರು:ಸರ್ಕಾರ ಲಾಕ್​ಡೌನ್​ ಘೋಷಿಸಿದ್ದು, ಅಗತ್ಯ ಇರುವವರಿಗೆ ಆರ್ಥಿಕ ನೆರವು ಹಾಗೂ ಆಹಾರ ಧಾನ್ಯ ನೀಡುವ ವಿಚಾರ ಪ್ರಸ್ತಾಪಿಸಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮಾಡಿರುವ ಅವರು, ಸರ್ಕಾರ ಮೇ 10 ರಿಂದ 24ರ ವರೆಗೆ ಸಂಪೂರ್ಣ ಲಾಕ್​ಡೌನ್​ ಘೋಷಿಸಿದೆ. ಆದರೆ, ಬಡವರಿಗೆ ಅನ್ನ, ವಸ್ತ್ರ, ವಸತಿ ಅತ್ಯಂತ ಮುಖ್ಯ. ಬಡವರಿಗೆ, ಆಟೋ, ಟ್ಯಾಕ್ಸಿ ಡ್ರೈವರ್​ಗಳಿಗೆ, ಬೀದಿಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರಿಗೆ ಯಾವ ರೀತಿಯ ಆರ್ಥಿಕ ನೆರವು & ಆಹಾರ ಧಾನ್ಯ ನೀಡುವ ಬಗ್ಗೆ ಪ್ರಸ್ತಾಪಿಸಿಲ್ಲ. ಕೂಡಲೇ ಈ ಕುರಿತಂತೆಯೂ ಸರ್ಕಾರ ಸ್ಪಷ್ಟಪಡಿಸಬೇಕು. ಸರ್ಕಾರ ಮೇ 10ರಿಂದ ಮೇ 24ರ ವರೆಗೆ ಲಾಕ್​ಡೌನ್​ ಘೋಷಿಸಿದೆ. ಆದರೆ, ನಿತ್ಯ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಹೆಚ್ಚಳ, ಆಕ್ಸಿಜನ್ ಪೂರೈಕೆಗೆ ಸೂಕ್ತ ವ್ಯವಸ್ಥೆ, ರೆಮ್ಡೆಸಿವಿರ್ ಸೇರಿ ಇತರ ಔಷಧಗಳ ಸಮರ್ಪಕ ಪೂರೈಕೆ ಬಗ್ಗೆಯೂ ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ಕೋವಿಡ್ ಚಿಕಿತ್ಸೆಗೆ ಅಗತ್ಯವಾದ ಔಷಧ (ಆ್ಯಂಟಿಬಯಾಟಿಕ್ಸ್ ಮತ್ತು ಪ್ಯಾರಾಸಿಟಮಲ್) ಕೊರತೆ ಆಗದಂತೆ ಈಗಲೇ ಎಚ್ಚರ ವಹಿಸಲಿ. ಕೊರೊನಾಗೆ ಲಾಕ್​ಡೌನ್​ ಪರಿಹಾರವಲ್ಲ. ಅದು ಕೇವಲ ನಿಯಂತ್ರಣಕ್ಕೆ ಒಂದು ಸಾಧನ. ಮಿಗಿಲಾಗಿ ಮುಂದಿನ ಅಲೆಯನ್ನು ಎದುರಿಸಲು ಪೂರ್ವಸಿದ್ಧತೆಗೆ ಸರ್ಕಾರಕ್ಕೆ ಸಿಗುವ ಕಾಲಾವಕಾಶ. ಕಳೆದ 1 ವರ್ಷದಿಂದ ನಿದ್ರಾವಸ್ಥೆಯಲ್ಲಿರುವ ಸರ್ಕಾರ ಈಗಲಾದರೂ 3ನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಿ, ಪ್ರಸಕ್ತ 2ನೇ ಅಲೆಯ ತೀವ್ರತೆ ನೋಡಿದರೆ, ರಾಜ್ಯಕ್ಕೆ ತುರ್ತಾಗಿ ಬೇಕಾಗಿರುವುದು ತಾತ್ಕಾಲಿಕ ಆಸ್ಪತ್ರೆಗಳು, ಆಕ್ಸಿಜನ್, ರೆಮ್ಡೆಸಿವಿರ್, ಪ್ಯಾರಾಸಿಟಮಲ್, ಆಂಟಿಬಯಾಟಿಕ್ಸ್, ವೆಂಟಿಲೇಟರ್ ಮತ್ತು ಐ.ಸಿ.ಯು. ಬೆಡ್​ಗಳು ಎಂದು ವಿವರಿಸಿದ್ದಾರೆ.

ಈ ಎಲ್ಲದರ ಕೊರತೆಯಿಂದ ಜನ ಹಾದಿ ಬೀದಿಯಲ್ಲಿ ಸಾಯುತ್ತಿದ್ದಾರೆ. ತಕ್ಷಣ ಸರ್ಕಾರ ಆರೋಗ್ಯ ಮೂಲಸೌಕರ್ಯ ಹೆಚ್ಚಳಕ್ಕೆ ಗಮನ ಹರಿಸಲಿ. ಈ ಲಾಕ್​ಡೌನ್​ ಅವಧಿಯಲ್ಲಿ ಎಷ್ಟು ಆಸ್ಪತ್ರೆ, ಹಾಸಿಗೆ ಹಾಗೂ ವೆಂಟಿಲೇಟರ್ ಸೌಲಭ್ಯ ಹೆಚ್ಚಿಸಲಾಗುತ್ತಿದೆ, ಐಸಿಯು ಹಾಗೂ ಆಕ್ಸಿಜನ್ ಬೆಡ್ ಎಷ್ಟು ಹೆಚ್ಚಳ ಮಾಡಲಾಗುತ್ತಿದೆ ಎಂಬ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ನೀಡಲಿ ಎಂದು ಅವರು ಒತ್ತಾಯಿಸಿದ್ದಾರೆ.

ಲಾಕ್​ಡೌನ್​ ಎಂದು ಬದಲಿಸಲಾಗಿದೆ:

ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದ್ದು, ಜನತಾ ಕರ್ಫ್ಯೂ ಹೆಸರನ್ನು "ಲಾಕ್‌ಡೌನ್" ಎಂದು ಬದಲಿಸಲಾಗಿದೆ. ಬಿಎಸ್ ಯಡಿಯೂರಪ್ಪನವರೇ, ಸೋಂಕಿನಿಂದ ಚೇತರಿಕೆಗೆ ಲಾಕ್‌ಡೌನ್ ಘೋಷಿಸಿದ್ದೀರಿ. ಆದರೆ, ಆರ್ಥಿಕ ಚೇತರಿಕೆಗೆ ಯಾವ ಕ್ರಮ ಕೈಗೊಂಡಿದ್ದೀರಿ? ಈಗಾಗಲೇ ಸಾಕಷ್ಟು ಹಾನಿಯಾಗಿದೆ. ಜನತೆಯ ನೆರವಿಗೆ ಯಾವ ಕಾರ್ಯಸೂಚಿಯನ್ನು ಹೊಂದಿದ್ದೀರಿ? ವೈದ್ಯಕೀಯ ವ್ಯವಸ್ಥೆ ಗಟ್ಟಿಗೊಳಿಸಲು ನಿಮ್ಮ ಕ್ರಮಗಳೇನು? ಎಂದು ಕೇಳಿದೆ.

ABOUT THE AUTHOR

...view details