ಕರ್ನಾಟಕ

karnataka

ಲಾಕ್​ಡೌನ್ ವಿಸ್ತರಣೆ ನಿರ್ಧಾರ ನಾಳೆ ಪ್ರಕಟ: ಸಿಎಂ ಯಡಿಯೂರಪ್ಪ

By

Published : May 21, 2021, 12:42 PM IST

ಇಂದು ಸಂಜೆ ಸಚಿವರ ಸಭೆ ಕರೆದಿದ್ದು, ಲಾಕ್​ಡೌನ್ ವಿಸ್ತರಣೆ ಕುರಿತು ಚರ್ಚೆ ಮಾಡಲಾಗುತ್ತದೆ. ಲಾಕ್​ಡೌನ್ ಜವಾಬ್ದಾರಿ ಹೊತ್ತ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿ ನಂತರ ಈ ಕುರಿತು ನಾಳೆ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ.

lockdown-extension-decision-will-be-announced-tomorrow-cm
ಲಾಕ್​ಡೌನ್ ವಿಸ್ತರಣೆ ನಿರ್ಧಾರ ನಾಳೆ ಪ್ರಕಟ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ 14 ದಿನ ಕಠಿಣ ಮಾರ್ಗಸೂಚಿ ಒಳಗೊಂಡ ಕೊರೊನಾ ಲಾಕ್​ಡೌನ್ ಇನ್ನು ಮೂರು ದಿನದಲ್ಲಿ ಮುಗಿಯಲಿದ್ದು, ಲಾಕ್​ಡೌನ್ ವಿಸ್ತರಣೆ ಬಗ್ಗೆ ನಾಳೆ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಸಂಜೆ ಸಚಿವರ ಸಭೆ ಕರೆದಿದ್ದೇನೆ. ಲಾಕ್​ಡೌನ್ ವಿಸ್ತರಣೆ ಕುರಿತು ಸಂಜೆ ಚರ್ಚೆ ಮಾಡಲಾಗುತ್ತದೆ. ಲಾಕ್​ಡೌನ್ ಜವಾಬ್ದಾರಿ ಹೊತ್ತ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿ ನಂತರ ವಿಸ್ತರಣೆ ಕುರಿತು ನಾಳೆ ತೀರ್ಮಾನ ಮಾಡುತ್ತೇವೆ ಎಂದರು.

ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಸಂದರ್ಭ

ಇತ್ತೀಚೆಗೆ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚುತ್ತಿದೆ. ಪ್ರಧಾನಿಗಳು ಈಗಾಗಲೇ ಜಿಲ್ಲಾಧಿಕಾರಿಗಳ ಸಭೆ ಕರೆದು ಮಾತನಾಡಿದ್ದಾರೆ. ಅನೇಕ ಸೂಚನೆ ಕೊಟ್ಟು ತಹಬದಿಗೆ ತರಲು ಓಡಾಡುತ್ತಿದ್ದಾರೆ. ರಾಜ್ಯದಲ್ಲಿಯೂ ನಾವು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಹೇಳಿದರು.

ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ:

ಇದಕ್ಕೂ ಮುನ್ನ ವೋಲ್ವೋ ಗ್ರೂಪ್ ಇಂಡಿಯಾ ವತಿಯಿಂದ ಎಂಡೋಕ್ರೈನಾಲಜಿ ಸೆಂಟರ್​ನಲ್ಲಿ ನೂತನವಾಗಿ ನಿರ್ಮಿಸಿರುವ 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್​ನ್ನು ಸಿಎಂ ಉದ್ಘಾಟಿಸಿದರು. ಈ ವೇಳೆ ವಸತಿ ಸಚಿವ ವಿ.ಸೋಮಣ್ಣ, ಸಂಸದ ಪಿ.ಸಿ. ಮೋಹನ್, ಶಾಸಕ ಎಸ್.ರಘು, ವೋಲ್ವೋ ಗ್ರೂಪ್ ಇಂಡಿಯಾ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಉಪಸ್ಥಿತರಿದ್ದರು.

ABOUT THE AUTHOR

...view details