ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಹಿನ್ನೆಲೆ ಹಣ್ಣಿನ ರಾಜನ ವ್ಯಾಪಾರಕ್ಕೆ ಪೆಟ್ಟು - mango fruit news

ಕೋವಿಡ್-19 ಆತಂಕದ ನಡುವೆ ಮಾವು ಮಾರಾಟ ಹೇಗಿದೆ ಗೊತ್ತಾ? ಈಗ ಮಾವು ಮಾರಾಟದಿಂದ ಲಾಭ ಆಗುತ್ತಿದೆಯಾ?

Lockdown effect on mango fruit
ಮಾವಿನ ಹಣ್ಣಿನ ಸೀಜನ್ ಆರಂಭ

By

Published : May 15, 2020, 8:13 AM IST

ಮಾವಿನ ಹಣ್ಣಿನ ಸೀಜನ್ ಆರಂಭ

ಮಾವಿನ ಹಣ್ಣಿನ ಸೀಜನ್ ಈಗ ಆರಂಭವಾಗಿದೆ. ಮೊದಲ ಮಳೆ ಬಿದ್ದಿದ್ದು, ಇದಾದ ಬಳಿಕ ಹುಳಿ ಹಣ್ಣುಗಳು ಕಡಿಮೆಯಾಗಿ, ಸಿಹಿ ಹಣ್ಣು ಮಾರುಕಟ್ಟೆಗೆ ಬರುವ ಸಮಯ ಆಗಿದೆ. ಆದರೆ, ಕೋವಿಡ್-19 ಮಹಾಮಾರಿಗೆ ಹೆದರಿರುವ ಜನ ಮನೆಯಿಂದ ಕಡಿಮೆ ಸಂಖ್ಯೆಯಲ್ಲಿ ಹೊರ ಬರುತ್ತಿದ್ದಾರೆ. ಕೆಲವೊಂದು ನಿರ್ಬಂಧ, ಲಾಕ್​ಡೌನ್ ಕೆಲ ಕ್ಷೇತ್ರದ ಮೇಲೆ ಈಗಲೂ ಬಿಗಿಯಾಗಿರುವ ಹಿನ್ನೆಲೆ ಅರ್ಧದಷ್ಟು ನಾಗರಿಕರು ಮಾತ್ರ ನಗರದಲ್ಲಿ ಓಡಾಡಿಕೊಂಡಿದ್ದಾರೆ. ಕಾರ್ಮಿಕರಲ್ಲಿ ಹೆಚ್ಚಿನವರು ಹುಟ್ಟೂರಿಗೆ ತೆರಳಿದ್ದಾರೆ. ಬಸ್ ಸಂಚಾರವಿಲ್ಲ, ಆಟೊ, ಟ್ಯಾಕ್ಸಿ ದುಬಾರಿಯಾಗಿದೆ. ಇದರಿಂದ ಜನ ಕಳೆದ ಮೂರು ತಿಂಗಳಿಂದ ಸರಿಯಾಗಿ ಕೆಲಸ ಇಲ್ಲದೇ, ಸಂಬಳ ಸಿಗದೇ, ಅರ್ಧ ಸಂಬಳ ಪಡೆದು ಬದುಕು ಸಾಗಿಸುತ್ತಿದ್ದಾರೆ. ಹೀಗಿರುವಾಗ ಅಗತ್ಯ ವಸ್ತುಗಳನ್ನು ಕೊಳ್ಳುವುದೇ ದುಸ್ಥರವಾಗಿರುವಾಗ ಮಾವಿನ ಹಣ್ಣನ್ನು ದುಬಾರಿ ಬೆಲೆಗೆ ಕೊಟ್ಟು ಕೊಳ್ಳುವ ಆಸಕ್ತಿ ಕೂಡ ತೋರಿಸುತ್ತಿಲ್ಲ.

ಮಾಲ್​ಗಳು, ಮಳಿಗೆಗಳು ಹಾಗೂ ತಳ್ಳುಗಾಡಿಯಲ್ಲಿ ಮಾವಿನ ಹಣ್ಣು ಮಾರುವ ಕಾರ್ಯ ನಡೆದಿದೆ. ಇನ್ನು ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಕೂಡ ಹಣ್ಣಿನ ಮಾರಾಟ ಆಗುತ್ತಿದೆ. ಆದರೆ, ಜನರ ಮೇಲೆ ಬಿದ್ದಿರುವ ಆರ್ಥಿಕ ಹೊಡೆತ ಹಾಗೂ ಕೊರೊನಾ ಆತಂಕ ಮಾವಿನ ಹಣ್ಣಿನತ್ತ ಎಲ್ಲಿಯೂ ಸುಳಿಯದಂತೆ ಮಾಡಿದೆ. ಆರಂಭಿಕ ದಿನ ಆಗಿರುವ ಹಿನ್ನೆಲೆ ಬೆಲೆ ದುಬಾರಿಯಿದೆ. ಗ್ರಾಮೀಣ ಭಾಗದಿಂದ ಪೂರೈಕೆ ಉತ್ತಮವಾಗಿ ಇಲ್ಲದ ಹಿನ್ನೆಲೆ ಸಂಗ್ರಹದ ಕೊರತೆಯಿದೆ. ಜನರ ಆತಂಕ ದೂರವಾಗದ ಹಿನ್ನೆಲೆ ವ್ಯಾಪಾರ ಅಷ್ಟಕ್ಕಷ್ಟೆ.

ವ್ಯಾಪಾರ ಇಲ್ಲ:

ಕಳೆದ ವರ್ಷಕ್ಕೆ ಹೋಲಿಸಿದರೆ ವ್ಯಾಪಾರ ಚೆನ್ನಾಗಿಲ್ಲ. ಈ ರೀತಿ ಆದರೆ ಬದುಕು ಹೇಗೆ ನಡೆಸಲು ಸಾಧ್ಯ? ರೇಟು ಹೆಚ್ಚಾಗಿದೆ. ಬೆಳೆ ಹೆಚ್ಚಾಗಿದೆ. ಮಾರುಕಟ್ಟೆಗೆ ಬರುತ್ತಿಲ್ಲ. ಕೊಳ್ಳುವವರು ಇಲ್ಲದೇ ಸಮಸ್ಯೆ ಆಗುತ್ತಿದೆ. ಕನಿಷ್ಠ ಪ್ರತಿ ಕೆ.ಜಿ. ಮೇಲೆ 5 ರೂ. ಸಿಕ್ಕರೂ ಸಾಕೆಂದು ನೋಡುತ್ತಿದ್ದೇವೆ. ಆದರೆ, ಸಿಗುತ್ತಿಲ್ಲ ಎಂದು ಬೆಂಗಳೂರಿನ ರೇಸ್ಕೋರ್ಸ್ ರಸ್ತೆ ಸಮೀಪ ತಳ್ಳುಗಾಡಿ ಮೂಲಕ ಮಾವಿನ ಹಣ್ಣು ಮಾರುತ್ತಿರುವ ಹನುಮಂತಪುರ ನಿವಾಸಿ ಚಂದ್ರಶೇಖರ್ ಅಭಿಪ್ರಾಯ ಪಟ್ಟಿದ್ದಾರೆ.

ಮಾವಿನ ಹಣ್ಣಿನ ಸೀಜನ್ ಆರಂಭ

ಗಾಂಧಿ ಬಜಾರ್ ಸಮೀಪ ತಳ್ಳುಗಾಡಿಯಲ್ಲಿ ಮಾವಿನ ಹಣ್ಣು ಮಾರುತ್ತಿರುವ ವ್ಯಾಪಾರಿ ಒಬ್ಬರ ಪ್ರಕಾರ, ಜನ ಹೊರಗೆ ಬರುತ್ತಿಲ್ಲ. ಆದರೂ ಹಣ್ಣು ಚೆನ್ನಾಗಿದೆ. ನಿತ್ಯ ನಿರೀಕ್ಷಿಸಿದಷ್ಟು ವ್ಯಾಪಾರ ಆಗುತ್ತಿದೆ. ಕಳೆದ ವರ್ಷ ಬೆಳೆ ಕಡಿಮೆ ಇತ್ತು. ಈ ವರ್ಷ ಹೆಚ್ಚಿದೆ. ವ್ಯಾಪಾರಸ್ಥರೂ ಕಡಿಮೆ ಇದ್ದಾರೆ. ನಮ್ಮ ವ್ಯಾಪಾರ ಚೆನ್ನಾಗಿಯೇ ಇದೆ ಎನ್ನುತ್ತಾರೆ.

ಹೊಸಕೆರೆಹಳ್ಳಿ ಬಸ್ ನಿಲ್ದಾಣ ಮುಂಭಾಗದ ವ್ಯಾಪಾರಿ ವಿಶ್ವಾಸ್ ಪ್ರಕಾರ, ಮಾವಿನ ಫಸಲು ಚೆನ್ನಾಗಿ ಬಂದಿದೆ. ಆದರೆ, ಬೆಂಗಳೂರಿಗೆ ಪೂರೈಕೆ ಮಾಡಲಾಗದೇ ರೈತರು ತಮ್ಮ ತೋಟದಲ್ಲೇ ಬೇಜಾರಾಗಿ ಸುರಿಯುತ್ತಿದ್ದಾರೆ. ಕೊರೊನಾಗೆ ಜನ ಹೆದರಿ ಕೊಳ್ಳುತ್ತಿಲ್ಲ ಎನ್ನುವುದು ನಿಜ. ಕಳೆದ ಸಾರಿಗೆ ಹೋಲಿಸಿದರೆ ವ್ಯಾಪಾರ ಕೊಂಚ ಕಡಿಮೆ. ಮುಂದೆ ಇನ್ನೂ ಎರಡು ತಿಂಗಳಿದೆ. ಅಲ್ಲದೇ ಈ ಸಂದರ್ಭ ಬೇರೆ ಹಣ್ಣು ಬರುವುದು ಕಡಿಮೆ ಆಗಲಿದೆ. ಇದರಿಂದ ಮಾವಿಗೆ ಬೇಡಿಕೆ ಬರಲಿದೆ ಎನ್ನುವ ವಿಶ್ವಾಸವಿದೆ ಎನ್ನುತ್ತಾರೆ.

ಲಾಕ್​ಡೌನ್​ ಹಿನ್ನೆಲೆ ಹಣ್ಣಿನ ರಾಜನ ವ್ಯಾಪಾರಕ್ಕೆ ಪೆಟ್ಟು

ಒಟ್ಟಾರೆ ಈ ಸಾರಿ ಮಾವಿನ ಹಣ್ಣು ಕೋವಿಡ್-19 ನಿಂದಾಗಿ ಕೊಂಚ ಹುಳಿಯಾಗಿದೆ. ವ್ಯಾಪಾರಿಗಳು ಕಡಿಮೆ ಪ್ರಮಾಣದಲ್ಲಿ ಹಣ್ಣನ್ನು ತರಿಸಿ ಮಾರುತ್ತಿರುವುದರಿಂದ ರೈತರಿಗೂ ಅನುಕೂಲವಾಗುತ್ತಿಲ್ಲ. ಮೇ 17ರ ನಂತರದ ಲಾಕ್​ಡೌನ್​ ಸ್ಥಿತಿ ಆಧರಿಸಿ ಮಾವು ಬೆಳೆ, ಮಾರಾಟದ ಭವಿಷ್ಯ ನಿಲ್ಲಲಿದೆ.

ABOUT THE AUTHOR

...view details