ಬೆಂಗಳೂರು: ನಾಳೆಯಿಂದ 14 ದಿನಗಳ ಕಾಲ ಕರ್ನಾಟಕ ಸಂಪೂರ್ಣ ಲಾಕ್ಡೌನ್ ಆಗಲಿರುವ ಕಾರಣ ಐಟಿ-ಬಿಟಿ ಕ್ಷೇತ್ರವಾದ ಮಹಾದೇವಪುರಕ್ಕೆ ಕೆಲಸವನ್ನು ಹುಡುಕಿಕೊಂಡು ಬಂದಿದ್ದ ಸಾವಿರಾರು ಕುಟುಂಬಗಳು ಮನೆ ಬಾಡಿಗೆ ಕಟ್ಟಲೂ ಆಗದೇ ಈಗ ಮತ್ತೆ ತಮ್ಮ ಊರಿನತ್ತ ಮುಖ ಮಾಡಿದ್ದಾರೆ.
ನಾಳೆಯಿಂದ ಕರ್ನಾಟಕ ಸಂಪೂರ್ಣ ಬಂದ್ ಆಗುವುದರಿಂದ ಮತ್ತು ಬೆಂಗಳೂರಿನಲ್ಲಿ ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆ ಜನ ತಮ್ಮೂರಿಗೆ ತೆರಳುತ್ತಿದ್ದಾರೆ. ಮತ್ತೊಂದೆಡೆ ಕಂಪನಿಗಳು, ಕಾರ್ಖಾನೆಗಳು ಲಾಕ್ಡೌನ್ಗೆ ಸಿಲುಕಿ ಬಾಗಿಲು ಮುಚ್ಚಿವೆ. ಇದರಿಂದ ಕೆಲಸವಿಲ್ಲದೆ, ಸಂಪಾದನೆ ಇಲ್ಲದೆ ಕಂಗೆಟ್ಟ ಜನ ಮನೆ ಖಾಲಿ ಮಾಡಿ ಊರುಗಳತ್ತ ಗಂಟು ಮೂಟೆ ಕಟ್ಟಿಕೊಂಡು ಹೊರಡುತ್ತಿದ್ದಾರೆ.