ಕರ್ನಾಟಕ

karnataka

ETV Bharat / state

ಅಗತ್ಯ ವಸ್ತು ಬೆಲೆ ಏರಿಕೆ ತಾತ್ಕಾಲಿಕ: ಪೂರೈಕೆ ಕೊರತೆಯೇ ಇದಕ್ಕೆ ಕಾರಣವಂತೆ - ಲಾಕ್​ಡೌನ್​,ಕೊರೊನಾ ಸಮಸ್ಯೆ

ಕೊರೊನಾ ಲಾಕ್​ಡೌನ್​ ಪರಿಣಾಮದಿಂದಾಗಿ ಜನರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಇನ್ನು ಅಗತ್ಯ ವಸ್ತುಗಳ ಮಾರಾಟ ಮಾಡುವ ಕಿರಾಣಿ ಅಂಗಡಿಗಳ ಮಾಲೀಕರ ಕಥೆ ಕೂಡ ಇದೇ ಆಗಿದೆ.

Essential material price increases are temporary
ಅಗತ್ಯ ವಸ್ತು ಬೆಲೆ ಏರಿಕೆ ತಾತ್ಕಾಲಿಕ

By

Published : May 21, 2020, 11:58 AM IST

ಬೆಂಗಳೂರು:ಕೊರೊನಾ ಬಹುತೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದ್ದು, ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಸಮರ್ಪಕವಾಗದ ಕಾರಣ ಬೆಲೆ ಹೆಚ್ಚಳವಾಗುತ್ತಿದ್ದು, ಪೂರೈಕೆ ಸಮರ್ಪಕವಾಗಿ ನಡೆಯುವವರೆಗೆ ಬೆಲೆ ಏರಿಕೆ ಬಿಸಿ ಇರಲಿದೆ.

ಅಗತ್ಯ ವಸ್ತು ಬೆಲೆ ಏರಿಕೆ ತಾತ್ಕಾಲಿಕ

ನಗರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಿಂದಲೂ ಅಗತ್ಯ ವಸ್ತುಗಳು ಬರುತ್ತಿದ್ದವು. ಲಾಕ್​ಡೌನ್ ಹಿನ್ನೆಲೆಯಲ್ಲಿ ಹಲವು ದಿನ ಪೂರೈಕೆ ಸರಿಯಾಗಿ ಇರಲಿಲ್ಲ. ಇದರಿಂದಾಗಿ ಸಂಗ್ರಹದ ಕೊರತೆಯಾಗಿ ಬೆಲೆ ಏರಿಕೆಯಾಗಿತ್ತು. ಈಗ ಕೊಂಚ ಮಟ್ಟಿನ ಪೂರೈಕೆ ಆರಂಭವಾಗಿದ್ದು, ಉತ್ತಮ ಸಂಗ್ರಹವಿದೆ. ಮುಂದಿನ ದಿನಗಳಲ್ಲಿ ಬೆಲೆ ಮೊದಲ ಸ್ಥಿತಿ ತಲುಪಬಹುದು ಎನ್ನುವ ವಿಶ್ವಾಸವನ್ನು ಕಿರಾಣಿ ಅಂಗಡಿ ಮಾಲೀಕರು ವ್ಯಕ್ತಪಡಿಸಿದ್ದಾರೆ.

ಕೊರೊನಾ ಅಟ್ಟಹಾಸದಿಂದಾಗಿ ಜನಜೀವನ ಬಹುತೇಕ ಅಸ್ಥಿರಗೊಂಡಿದೆ. ಆರಂಭದ ದಿನದಿಂದಲೂ ಉಳಿದವರು ಬಾಗಿಲು ಮುಚ್ಚಿದ್ದರೂ ಅಗತ್ಯ ವಸ್ತುಗಳನ್ನು ಪೂರೈಸುವ ಔಷಧ ಮಳಿಗೆಗಳು, ಕಿರಾಣಿ ಅಂಗಡಿಗಳು ತೆರೆದೇ ಇದ್ದವು. ಇದರಿಂದ ಇವರಿಗೆ ವ್ಯಾಪಾರ ನಷ್ಟವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಪೂರೈಕೆ ಇಲ್ಲದ ಹಿನ್ನೆಲೆ ಕಿರಾಣಿ ಮಳಿಗೆಯವರು ಅನಿವಾರ್ಯವಾಗಿ ಬೆಲೆ ಹೆಚ್ಚಿಸಿದ್ದಾರೆ. ಪ್ರತಿ ವಸ್ತುವಿನ ಬೆಲೆ ಕೆಜಿಗೆ 5ರಿಂದ 8 ರೂ. ಹೆಚ್ಚಳವಾಗಿದೆ. ಕೊರೊನಾ ಆಘಾತದಿಂದ ಪ್ರತಿಯೊಂದು ಕ್ಷೇತ್ರವೂ ಚೇತರಿಸಿಕೊಳ್ಳಬೇಕಿದೆ. ಮುಂದಿನ ಐದಾರು ತಿಂಗಳು ಇದೇ ಸ್ಥಿತಿ ಇರಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಗುಣಮಟ್ಟದ ವಸ್ತುಗಳ ಪೂರೈಕೆ ಆಗುತ್ತಿಲ್ಲ. ಬರುತ್ತಿರುವ ವಸ್ತುವನ್ನು ಕೊಂಡು ಮಾರಬೇಕಾದ ಸ್ಥಿತಿಯಿದೆ. ಕೊಂಚ ಬೆಲೆ ಏರಿಕೆ ಆಗಿರುವುದು ಸಹಜ. ಹಳ್ಳಿಗಳಿಂದ ಆಹಾರ ಪದಾರ್ಥಗಳು ಸಮರ್ಪಕವಾಗಿ ತಲುಪುತ್ತಿಲ್ಲ. ಅಗತ್ಯ ವಸ್ತುಗಳ ವಿಚಾರದಲ್ಲಿ ಪೂರೈಕೆಯಲ್ಲಿ ಆದ ವ್ಯತ್ಯಯ ಇಷ್ಟೊಂದು ಕಷ್ಟಕ್ಕೆ ಕಾರಣವಾಗಿದೆ. ಇದು ತಾತ್ಕಾಲಿಕ ದರ ಏರಿಕೆಯಷ್ಟೆ. ಆಹಾರ ಸಾಮಗ್ರಿ ಪೂರೈಕೆ ಸರಪಳಿ ಸರಿಯಾಗುತ್ತಿದ್ದಂತೆ ಬೆಲೆ ಇಳಿಕೆಯಾಗಲಿದೆ ಎನ್ನಲಾಗುತ್ತಿದೆ.

ಲಾಕ್​ಡೌನ್​​ನಿಂದ ಆಹಾರ ವಸ್ತುಗಳನ್ನು ಪೂರೈಸುವ ಕಾರ್ಖಾನೆಗಳು ಬಾಗಿಲು ಹಾಕಿದ್ದು, ಅಗತ್ಯ ಪ್ರಮಾಣದ ಸರಕು ಸಿಗುತ್ತಿರಲಿಲ್ಲ. ಆದರೆ ಈಗ ಕೊಂಚ ಸಡಿಲಿಕೆಯಾಗಿದ್ದು, ವಸ್ತುಗಳು ಪೂರೈಕೆ ಆಗುತ್ತಿದೆ. ವಸ್ತುಗಳ ಬೆಲೆ ಇಳಿಕೆಯಾಗಬಹುದು. ನಮ್ಮ ಹಾಗೂ ಗ್ರಾಹಕರ ಮತ್ತು ಬೆಳೆಗಾರರ ನಡುವೆ ಸರಿಯಾದ ಸಂವಹನ ಆಗಲಿಲ್ಲ. ಮಧ್ಯವರ್ತಿಗಳು ಒಂದಿಷ್ಟು ಅನುಕೂಲ ಮಾಡಿಕೊಂಡರು. ಪ್ರತಿ ವಸ್ತುವಿನ ಮೇಲೆ ಬೆಲೆ ಹೆಚ್ಚಳವಾಗಿದೆ ಎನ್ನುತ್ತಾರೆ ಕಿರಾಣಿ ಅಂಗಡಿ ಮಾಲೀಕ ವಿನಯ್​​ಕುಮಾರ್​​ ಆವಲಹಳ್ಳಿ.

ABOUT THE AUTHOR

...view details