ಕರ್ನಾಟಕ

karnataka

ETV Bharat / state

ಕರ್ನಾಟಕದಲ್ಲಿ ನಾಳೆಯಿಂದ ರಿಕ್ಷಾ, ಬಸ್, ರೈಲು​ ಸಂಚಾರ... 4 ರಾಜ್ಯಗಳಿಂದ ಪ್ರವೇಶಕ್ಕೆ ನಿರ್ಬಂಧ

ಮುಂದಿನ ಲಾಕ್​ ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ. ನಾಳೆಯಿಂದ ರಾಜ್ಯಾದ್ಯಂತ ಬಸ್​ ಮತ್ತು ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ಹೇಳಿದ್ದಾರೆ. ತಮಿಳುನಾಡು, ಕೇರಳ, ಗುಜರಾತ್​, ಮಹಾರಾಷ್ಟ್ರ ರಾಜ್ಯಗಳಿಂದ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಲಾಕ್​ಡೌನ್​ 4.0 ಮಾರ್ಗಸೂಚಿಗಳು
ಲಾಕ್​ಡೌನ್​ 4.0 ಮಾರ್ಗಸೂಚಿಗಳು

By

Published : May 18, 2020, 1:06 PM IST

Updated : May 18, 2020, 5:44 PM IST

ಬೆಂಗಳೂರು: ರಾಜ್ಯದ ಸರ್ಕಾರದ ಮಾರ್ಗಸೂಚಿಗಳು ಕುರಿತು ಸಿಎಂ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ. ಮುಂದಿನ ಹಂತದ ಲಾಕ್ ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ತಿಳಿಸಿದ ಅವರು, ನಾಳೆಯಿಂದ ರಾಜ್ಯಾದ್ಯಂತ ರಿಕ್ಷಾ, ಬಸ್​, ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

  • ಮೇ 31 ರ ವರೆಗೆ ನಾಲ್ಕು ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ನೋ ಎಂಟ್ರಿ
  • ತಮಿಳುನಾಡು, ಗುಜರಾತ್​, ಮಹಾರಾಷ್ಟ್ರ, ಕೇರಳ ರಾಜ್ಯದಿಂದ ಬರುವವರಿಗೆ ಪ್ರವೇಶವಿಲ್ಲ
  • ಮೇ 31 ವರೆಗೆ ಲಾಕ್‌ಡೌನ್ ಮುಂದುವರಿಕೆ
  • ಕಂಟೈನ್ಮೆಂಟ್ ‌ಝೋನ್​ನಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್
  • ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಆರಂಭ
  • ಖಾಸಗಿ ವಾಹನ ಓಡಾಟಕ್ಕೆ ಅವಕಾಶ
  • ಪ್ರತಿ ಭಾನುವಾರ ಸಂಪೂರ್ಣ ಲಾಕ್​ಡೌನ್
  • ಒಂದು ಬಸ್​ನಲ್ಲಿ 30 ಜನ ಮಾತ್ರ ಪ್ರಯಾಣ
  • ಮಾಸ್ಕ್ ಧರಿಸುವುದು ಕಡ್ಡಾಯ
  • ಆಟೋ, ಟ್ಯಾಕ್ಸಿಯಲ್ಲಿ ಡ್ರೈವರ್ ಬಿಟ್ಟು ಇಬ್ಬರು ಮಾತ್ರ ಪ್ರಯಾಣಿಸಲು ಅನುಮತಿ, ಮ್ಯಾಕ್ಸಿ ಕ್ಯಾಬ್​ನಲ್ಲಿ ಮೂವರಿಗೆ ಅವಕಾಶ
  • ಸಲೂನ್ ಶಾಪ್​ ತೆರೆಯಲು ಅವಕಾಶ
  • ಪಾರ್ಕ್​ಗಳಲ್ಲಿ ಬೆಳಗ್ಗೆ 7 ರಿಂದ 9 ವರೆಗೆ ಸಂಜೆ 5-7 ಗಂಟೆವರೆಗೆ ಅವಕಾಶ
  • ರಾಜ್ಯಾದ್ಯಂತ ಕಂಟೈನ್ಮೆಂಟ್ ಪ್ರದೇಶ ಬಿಟ್ಟು ಎಲ್ಲಾ ಪ್ರದೇಶಗಳಲ್ಲಿ ಸಂಚಾರಕ್ಕೆ ಅನುಮತಿ
  • ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ನಿಷೇಧಾಜ್ಞೆ
  • ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡಲು ಅನುಮತಿ
  • ಹೋಟೆಲ್​ಗಳಲ್ಲಿ ಆಹಾರ ಪಾರ್ಸೆಲ್ ಕೊಡಲು ಅವಕಾಶ
  • ಖಾಸಗಿ ಬಸ್ ಸಂಚಾರಕ್ಕೆ ಅನುಮತಿ
  • ಬಸ್​ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ
  • ಕಾನೂನು ಬಾಹಿರ ವರ್ತನೆ ಮಾಡಿದ್ರೆ ಕ್ರಿಮಿನಲ್ ಕೇಸ್
  • ನಾಳೆಯಿಂದ ರಸ್ತೆಗೆ ಇಳಿಯಲಿರುವ 200 ಬಸ್​ಗಳು
  • ನಮ್ಮ ಮೆಟ್ರೋ ಸಂಚಾರಕ್ಕೆ ನಿರ್ಬಂಧ ಮುಂದುವರಿಕೆ
  • ಹೊರ ರಾಜ್ಯಗಳಿಂದ ಬರುವವರಿಗೆ ಕ್ವಾರ‌ಂಟೈನ್ ಕಡ್ಡಾಯ
  • ಷರತ್ತು ಬದ್ಧವಾಗಿ ಮದುವೆ ಕಾರ್ಯಗಳು ನಡೆಯಲು ಅನುಮತಿ
  • ನಾಳೆಯಿಂದ ಮಾಲ್, ಸಿನಿಮಾ, ಹೋಟೆಲ್ ಬಿಟ್ಟು ಎಲ್ಲಾ ಅಂಗಡಿಗಳು ತೆರೆಯಬಹುದು
  • ಹೊರ ರಾಜ್ಯಗಳಿಂದ ಬರುವವರಿಗೆ ಹಂತ ಹಂತವಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ
  • ರಾಜ್ಯದ ಒಳಗೆ ರೈಲು ಓಡಾಟಕ್ಕೆ ಅವಕಾಶ
    ಸಿಎಂ ಸುದ್ದಿಗೋಷ್ಠಿ
Last Updated : May 18, 2020, 5:44 PM IST

ABOUT THE AUTHOR

...view details