ಕರ್ನಾಟಕ

karnataka

ETV Bharat / state

ಕೋವಿಡ್​ 2ನೇ ಅಲೆಯ 3.0 ಲಾಕ್​ಡೌನ್​:1,496 ವಾಹನ ಜಪ್ತಿ: 63 ಜನರ ವಿರುದ್ಧ ಎಫ್​ಐಆರ್​

ರಾಜ್ಯದಲ್ಲಿ ಲಾಕ್​​ಡೌನ್​ ಜಾರಿಯಲ್ಲಿದ್ದು, ಈ ವೇಳೆ ಬೆಂಗಳೂರಿನಲ್ಲಿ ಅನಗತ್ಯವಾಗಿ ಓಟಾಟ ನಡೆಸಿದ 1,496 ವಾಹನ ಜಪ್ತಿ ಮಾಡಲಾಗಿದೆ.

By

Published : May 25, 2021, 1:39 AM IST

Vehicles Seized in Bengaluru
Vehicles Seized in Bengaluru

ಬೆಂಗಳೂರು:ಕೊರೊನಾ ಮಹಾಮಾರಿ ವಿರುದ್ಧದ ಹೋರಾಟದ ಭಾಗವಾಗಿ ರಾಜಾದ್ಯಂತ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಹೀಗಾಗಿ ಅನಗತ್ಯವಾಗಿ ಓಡಾಟ ನಡೆಸುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.

ರಾಜ್ಯದಲ್ಲಿ ನಿನ್ನೆಯಿಂದ ಲಾಕ್​ಡೌನ್​ 3.0 ಜಾರಿಗೊಂಡಿದ್ದು, ಈ ವೇಳೆ ಅನಗತ್ಯವಾಗಿ ಓಡಾಟ ನಡೆಸಿರುವ ಅನೇಕ ವಾಹನ ಜಪ್ತಿ ಮಾಡಲಾಗಿದೆ. ಒಟ್ಟು 20 ಗಂಟೆಯಲ್ಲಿ 1,496 ವಾಹನ ಜಪ್ತಿ ಮಾಡಲಾಗಿದೆ. ಭಾನುವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 8ರವರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ.

ಇಷ್ಟೊಂದು ವಾಹನ ಜಪ್ತಿ

ಇದನ್ನೂ ಓದಿ: ಮೃತರ ಅಸ್ತಿ, ಚಿತಾಭಸ್ಮ ವಿಸರ್ಜಿಸಲು ಅನುಮತಿ ನೀಡಿ ಸರ್ಕಾರ ಆದೇಶ

ಕಾರ್ಯಾಚರಣೆ ವೇಳೆ 1,316 ದ್ವಿಚಕ್ರ ವಾಹನ, 79 ಆಟೋ, 101 ಕಾರು ಸೀಜ್ ಮಾಡಲಾಗಿದ್ದು, 63 ಜನರ ವಿರುದ್ಧ ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘನೆಯ ಕೇಸ್​ ಬುಕ್​ ಮಾಡಿ ಎನ್​ಡಿಎಂಎ ಅಡಿಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜೂನ್​ 7ರವರೆಗೆ ಲಾಕ್​ಡೌನ್​ ಮುಂದೂಡಿಕೆ ಮಾಡಲಾಗಿದೆ.

ABOUT THE AUTHOR

...view details