ಬೆಂಗಳೂರು: ನಗರದ ಪುರಾತನ ದೇವಾಲಯವಾದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಅಭಿವೃದ್ಧಿ ಕಾಮಗಾರಿ ಯೋಜನೆಯನ್ನು ಐದು ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳುವ ಬಗ್ಗೆ ಮೇಯರ್ ಗಂಗಾಂಬಿಕೆ ಹಾಗೂ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಗವಿಗಂಗಾಧರೇಶ್ವರ ದೇವಸ್ಥಾನ ಮತ್ತು ಕೆಂಪಾಂಬುದಿ ಕೆರೆ ಉನ್ನತೀಕರಣಕ್ಕೆ ಸ್ಥಳೀಯರ ಆಗ್ರಹ - undefined
ಮೇಯರ್ ಗಂಗಾಂಬಿಕೆ ಹಾಗೂ ಪಾಲಿಕೆ ಅಧಿಕಾರಿಗಳು ಪುರಾತನ ದೇವಾಲಯವಾದ ಗವಿಗಂಗಾಧರೇಶ್ವರ ದೇವಸ್ಥಾನ ಮತ್ತು ಕೆಂಪಾಬುದಿ ಕೆರೆ ಅಭಿವೃದ್ಧಿ ಕಾಮಗಾರಿಯ ತಪಾಸಣೆಯನ್ನು ನಡೆಸಿದರು.
ಮೇಯರ್ ಗಂಗಾಂಬಿಕೆ
ನಂತರ, ಕೆಂಪಾಬುದಿ ಕೆರೆ ಅಭಿವೃದ್ಧಿ ಕಾಮಗಾರಿಯ ತಪಾಸಣೆಯನ್ನು ನಡೆಸಿದರು. ಈ ವೇಳೆ ಹತ್ತು ಕೋಟಿ ಖರ್ಚು ಮಾಡಿದರೂ, ಕೆರೆಯ ಸುತ್ತ ದುರ್ವಾಸನೆ ತಪ್ಪಿಲ್ಲ, ಕೆರೆ ನೀರೊಳಗೆ ಕೊಳಚೆ ನೀರು ಸೇರ್ಪಡೆಯಾಗ್ತಿದೆ ಎಂದು ದೂರಿದರು. ತಕ್ಷಣವೇ ಮಲಿನ ನೀರು ಕೆರೆಗೆ ಹರಿಯದಂತೆ ಸರಿಪಡಿಸುವಂತೆ ಮೇಯರ್ ಅಧಿಕಾರಿಗಳಿಗೆ ಆದೇಶಿಸಿದರು.
ಅಲ್ಲದೆ 40 ಲಕ್ಷ ರೂ. ಕಾಮಗಾರಿ ಬಾಕಿ ಇದ್ದು, ಸಂಗೀತ ಕಾರಂಜಿ, ಬೋಟಿಂಗ್, ವಾಯುವಿಹಾರಕ್ಕೆ ಅನುಕೂಲವಾಗುವಂತೆ ನೀರಿನ ವ್ಯವಸ್ಥೆ, ಬೆಂಚ್ಗಳ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ತಿಳಿಸುವುದಾಗಿ ಮೇಯರ್ ಗಂಗಾಂಬಿಕೆ ತಿಳಿಸಿದರು.