ಕರ್ನಾಟಕ

karnataka

By

Published : May 10, 2019, 10:45 AM IST

ETV Bharat / state

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ :  ಮೊದಲ ದಿನ ಐದು ಮಂದಿ ನಾಮಪತ್ರ ಸಲ್ಲಿಕೆ

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ 63 ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಮೊದಲ ದಿನ ಐದು ಮಂದಿ ನಾಮಪತ್ರ ಸಲ್ಲಿಕೆ

ಬೆಂಗಳೂರು :ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಗುರುವಾರ ಅಧಿಸೂಚನೆ ಹೊರಬಿದ್ದಿದ್ದು, ಮೊದಲ‌ ದಿನ ಸುಮಾರು ಐದು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಗುರುವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ‌ ದಿನವೇ ಸುಮಾರು ಐದು ಮಂದಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ರಾಜ್ಯ ಚುನಾಚಣಾ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ತಿಳಿಸಿದ್ದಾರೆ. ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇ 17ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಮೇ 20 ಕೊನೆಯ ದಿನವಾಗಿದ್ದು, ಮೇ 29ರಂದು ಮತದಾನ ನಡೆಯಲಿದೆ. ಮರು ಮತದಾನ ಇದ್ದರೆ ಮೇ 31ರಂದು ನಡೆಸಲಾಗುವುದು. ಮೇ 31ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿಯ ಎರಡು ವಾರ್ಡ್, ತುಮಕೂರು ಪಾಲಿಕೆಯ ಒಂದು ವಾರ್ಡ್, ಬೆಳಗಾವಿ ಜಿಲ್ಲೆಯ ಎರಡು ಪುರಸಭೆ, ಬೆಂಗಳೂರಿನ ಹೆಬ್ಬಗೋಡಿ ನಗರಸಭೆ ಉಪಚುನಾವಣೆಗೂ ಅಧಿಸೂಚನೆ ಪ್ರಕಟವಾಗಿದೆ.

ರಾಜ್ಯದಲ್ಲಿ 2019ರ ಮಾರ್ಚ್ ತಿಂಗಳಿನಿಂದ ಜುಲೈ ತಿಂಗಳವರೆಗೆ ಅವಧಿ ಮುಕ್ತಾಯವಾಗುವ 103 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕಾಗಿತ್ತು. ಆದರೆ, ಬೆಂಗಳೂರು, ಕಲಬುರಗಿ, ಧಾರವಾಡದಲ್ಲಿನ ಹೈಕೋರ್ಟ್ ಪೀಠದಲ್ಲಿ ವಾರ್ಡ್‌ವಾರು ಮೀಸಲಾತಿ ಮತ್ತು ವಾರ್ಡ್‌ಗಳ ಪುನರ್ ರಚನೆ ಸಂಬಂಧ 39 ನಗರ ಸ್ಥಳೀಯ ಸಂಸ್ಥೆಗಳ ವ್ಯಾಜ್ಯಗಳಿವೆ. ಅಲ್ಲದೆ ಕುಂದಗೋಳ ವಿಧಾನಸಭಾ ಉಪ ಚುನಾವಣೆ ಇರುವ ಕಾರಣ ಕುಂದಗೋಳ ಪಟ್ಟಣ ಪಂಚಾಯತ್ ಹೊರತು ಪಡಿಸಿ ಉಳಿದ 63 ನಗರ ಸ್ಥಳೀಯ ಸಂಸ್ಥೆಗಳಿಗೆ ಮೇ 29ರಂದು ಚುನಾವಣೆ ನಡೆಯಲಿದೆ.

63 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಎಂಟು ನಗರಸಭೆ, 33 ಪುರಸಭೆ ಮತ್ತು 22 ಪಟ್ಟಣ ಪಂಚಾಯತ್‌ಗಳಾಗಿವೆ. ಬಿಬಿಎಂಪಿ ವ್ಯಾಪ್ತಿಯ ಸಗಾಯಿಪುರ ವಾರ್ಡ್, ಕಾವೇರಿಪುರ ವಾರ್ಡ್, ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ನಂ.22, ಬೆಳಗಾವಿ ಜಿಲ್ಲೆಯ ಸದಲಗ ಪುರಸಭೆಯ ವಾರ್ಡ್ ನಂ.19 ಮತ್ತು ಮುಗಳಖೋಡ ಪುರಸಭೆ ವಾರ್ಡ್ ನಂ.2ರ ಸದಸ್ಯರ ನಿಧನದಿಂದ ಹಾಗೂ ಬೆಂಗಳೂರಿನ ಹೆಬ್ಬಗೋಡಿ ನಗರಸಭೆ ವಾರ್ಡ್ ನಂ.26ರ ಸದಸ್ಯರ ರಾಜೀನಾಮೆಯಿಂದಾಗಿ ಉಪಚುನಾವಣೆ ನಡೆಸಲಾಗುತ್ತಿದೆ.

For All Latest Updates

TAGGED:

ABOUT THE AUTHOR

...view details