ಕರ್ನಾಟಕ

karnataka

ETV Bharat / state

ಕೊರೊನಾ ವೈರಸ್ ಎಫೆಕ್ಟ್: ನಾಳೆಯಿಂದ ಇಲ್ಲೆಲ್ಲ ಎಲ್​ಕೆಜಿ, ಯುಕೆಜಿ ಶಾಲೆಗಳಿಗೆ ರಜೆ

ಕೊರೊನಾ ವೈರಸ್ ಬಿಸಿ ಈಗ ಶಾಲಾ ಮಕ್ಕಳಿಗೂ ತಟ್ಟಿದೆ. ಆರೋಗ್ಯ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಯ ಮುಖ್ಯಕಾರ್ಯದರ್ಶಿಗಳು ಮಾತುಕತೆ ನಡೆಸಿದ್ದು, ಮುಂದಿನ‌ ಆದೇಶದವರೆಗೆ ಎಲ್‌ಕೆಜಿ, ಯುಕೆಜಿ ತರಗತಿ ನಡೆಸದಂತೆ ಆದೇಶ ಹೊರಡಿಸಲಾಗಿದೆ.

corona
ಕೊರೊನಾ ವೈರಸ್

By

Published : Mar 8, 2020, 11:59 PM IST

ಬೆಂಗಳೂರು :ಕೊರೊನಾ ವೈರಸ್ ಬಿಸಿ ಈಗ ಶಾಲಾ ಮಕ್ಕಳಿಗೂ ತಟ್ಟಿದೆ. ಆರೋಗ್ಯ ಇಲಾಖೆಯು ಪ್ರಾಥಮಿಕ ಶಿಕ್ಷಣ ಇಲಾಖೆಯ ಮುಖ್ಯಕಾರ್ಯದರ್ಶಿಗಳು ಮಾತುಕತೆ ನಡೆಸಿದ್ದು, ಮುಂದಿನ‌ ಆದೇಶದವರೆಗೆ ಎಲ್‌ಕೆಜಿ, ಯುಕೆಜಿ ತರಗತಿ ನಡೆಸದಂತೆ ಆದೇಶಿಸಲಾಗಿದೆ.

ಕೊರೊನಾ ವೈರಸ್ ಮುನ್ನೆಚ್ಚರಿಕೆ ಕ್ರಮವನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಗ್ರಾಮೀಣ ಭಾಗಗಳಲ್ಲಿ ಬಿಬಿಎಂಪಿಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಎಲ್‌ಕೆಜಿ ಮತ್ತು ಯುಕೆಜಿ ನರ್ಸರಿ ವಿಭಾಗಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.

ಈ ಬಗ್ಗೆ ಪ್ರಾಥಮಿಕ‌ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್, ಆರೋಗ್ಯ ಆಯುಕ್ತರ ಸಲಹೆ ಮೇರೆಗೆ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಗಳ ಎಲ್‌ಕೆಜಿ, ಯುಕೆಜಿ ಶಾಲೆಗಳಿಗೆ ನಾಳೆಯಿಂದ ರಜೆ ಘೋಷಿಸಲಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

ABOUT THE AUTHOR

...view details