ಬೆಂಗಳೂರು:ರಾಜ್ಯದಲ್ಲಿ ಈ ಬಾರಿ ವರುಣಾಘಾತವು ಜೀವ ಹಾನಿಗಳ ಜತೆಗೆ ಲಕ್ಷಾಂತರ ಮಂದಿಯ ಮನೆ ಮಠ, ಬೆಳೆ, ಕೃಷಿ ಭೂಮಿಗಳನ್ನು ನಾಮಾವಶೇಷಗೊಳಿಸಿದೆ. ಜೊತೆಗೆ ಮಳೆಯಾರ್ಭಟವು ಸಾವಿರಾರು ಜಾನುವಾರುಗಳ ಪ್ರಾಣವನ್ನು ಅಪೋಶನಗೈದಿದೆ. ಪಶುಸಂಗೋಪನೆ ಇಲಾಖೆ ಕಂದಾಯ ಇಲಾಖೆಗೆ ಸಲ್ಲಿಸಿರುವ ಜಾನುವಾರುಗಳ ಹಾನಿ, ನಷ್ಟದ ವರದಿ ಇಲ್ಲಿದೆ.
ದಶಕಗಳ ಬಳಿಕದ ಮಹಾಮಳೆ ರಾಜ್ಯದಲ್ಲಿ ಭೀಕರ ಅತಿವೃಷ್ಠಿಯನ್ನು ಸೃಷ್ಟಿಸಿದೆ. ಮಳೆಯ ಅಬ್ಬರಕ್ಕೆ ಹಿಂದೆಂದೂ ಕಾಣದ ಪ್ರಾಣ ಹಾನಿ ಸಂಭವಿಸಿದೆ. ಮಾನವ ಸಾವಿನ ಜತೆಗೆ ಸಾವಿರಾರು ಮೂಕ ಪ್ರಾಣಿಗಳು ಪ್ರವಾಹದ ಆರ್ಭಟಕ್ಕೆ ಕೊಚ್ಚಿಹೋಗಿವೆ. ಪಶುಸಂಗೋಪನೆ ಇಲಾಖೆ ಪ್ರವಾಹ ಹಾನಿ ಸಂಬಂಧ ವರದಿಯನ್ನು ಕಂದಾಯ ಇಲಾಖೆಗೆ ಸಲ್ಲಿಸಿದ್ದು, ಎನ್ ಡಿಆರ್ಎಫ್ ಮಾರ್ಗಸೂಚಿಯನ್ವಯ ಸುಮಾರು 9 ಕೋಟಿ ರೂ. ನೆರವು ಕೇಳಿದೆ.
ಪ್ರವಾಹ ಪೀಡಿತ ತಾಲೂಕುಗಳಲ್ಲಿ ರಾಜ್ಯ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನ ವಿವಿ ಆಸ್ತಿಗಳು ಹಾನಿಗೊಳಗಾಗಿವೆ. ಒಟ್ಟು 4.41 ಕೋಟಿ ರೂ. ಮೊತ್ತದ ಆಸ್ತಿ ಹಾನಿಗೊಳಗಾಗಿರುವ ಬಗ್ಗೆ ಇಲಾಖೆ ವರದಿ ನೀಡಿದೆ.
ಇನ್ನು ಅದೇ ರೀತಿ 73 ತಾಲೂಕುಗಳಲ್ಲಿ ನೆರೆಯಿಂದ ಮೀನುಗಾರಿಕೆಯ ವಿವಿಧ ಚಟುವಟಿಕೆಗಳಿಗೆ ಅಪರವಾದ ಹಾನಿಯಾಗಿದ್ದು, ಸುಮಾರು 2.33 ಕೋಟಿ ರೂ. ನೆರವು ಕೋರಲಾಗಿದೆ.
ಜಾನುವಾರುಗಳ ಔಷಧಗಳಿಗಾಗಿನ ನೆರವು: