ಕರ್ನಾಟಕ

karnataka

ETV Bharat / state

LIVE UPDATE: ಬೆಂಗಳೂರು ಟೆಕ್​ ಶೃಂಗ ಸಭೆಯನ್ನುದ್ದೇಶಿಸಿ ಪಿಎಂ ಮೋದಿ ಭಾಷಣ

Bangalore Tech Summit, Bangalore Tech Summit 2020 inaugurated, Bangalore Tech Summit 2020 inaugurated by PM Modi, Bangalore Tech Summit 2020 news, ಬೆಂಗಳೂರು ಟೆಕ್ ಶೃಂಗಸಭೆ, ಬೆಂಗಳೂರು ಟೆಕ್ ಶೃಂಗಸಭೆ 2020ಗೆ ಚಾಲನೆ, ಬೆಂಗಳೂರು ಟೆಕ್ ಶೃಂಗಸಭೆ 2020ಗೆ ಪ್ರಧಾನಿ ಮೋದಿಯಿಂದ ಚಾಲನೆ, ಬೆಂಗಳೂರು ಟೆಕ್ ಶೃಂಗಸಭೆ 2020 ಸುದ್ದಿ,
ಬೆಂಗಳೂರು ಟೆಕ್ ಶೃಂಗಸಭೆ 2020ಗೆ ಪ್ರಧಾನಿ ನರೇಂದ್ರ ಮೋದಿಯಿಂದ ಚಾಲನೆ

By

Published : Nov 19, 2020, 10:11 AM IST

Updated : Nov 19, 2020, 1:55 PM IST

11:24 November 19

ಬೆಂಗಳೂರು ಟೆಕ್​ ಶೃಂಗ ಸಭೆ ಉದ್ದೇಶಿಸಿ ಪಿಎಂ ಮೋದಿ ಭಾಷಣ

ಬೆಂಗಳೂರು ಟೆಕ್​ ಶೃಂಗ ಸಭೆಯನ್ನುದ್ದೇಶಿಸಿ ಪಿಎಂ ಮೋದಿ ಭಾಷಣ
  • ಇದೊಂದು ಐತಿಹಾಸಿಕ ಟೆಕ್ ಸಮ್ಮಿಟ್
  • ಐದು ವರ್ಷಗಳ ಹಿಂದೆ ನಾವು ಡಿಜಿಟಲ್ ಇಂಡಿಯಾ ಪರಿಚಯಿಸಿದೆವು
  • ಈಗ ಡಿಜಿಟಲ್ ಇಂಡಿಯಾ ಅಂದರೆ ನಮ್ಮ ಜನರ ಜೀವನ ಶೈಲಿಯಾಗಿದೆ
  • ನಮ್ಮ ದೇಶ ಡಿಜಿಟಲ್ ಅಭಿವೃದ್ಧಿಗೆ ಸಾಕ್ಷಿಯಾಗಿದೆ
  • ಈ‌ ಕಾರಣದಿಂದ ಜನರ ಬದುಕು ಬದಲಾಗಿದೆ
  • ನಮ್ಮ ಸರ್ಕಾರ ತಾಂತ್ರಿಕ ಮಾರುಕಟ್ಟೆ ಅಭಿವೃದ್ದಿ ಪಡಿಸಿದೆ
  • ನಮ್ಮ ಸರ್ಕಾರ ಟೆಕ್ನಾಲಜಿಗೆ ಆದ್ಯತೆ ಕೊಟ್ಟಿದೆ
  • ಕೃಷಿಕ ಸಮುದಾಯವೂ ಈ ತಾಂತ್ರಿಕ ಅಭಿವೃದ್ದಿಯನ್ನು ಕಂಡಿದೆ
  • ಕೋವಿಡ್ ಕಾಲದಲ್ಲಿ ತಾಂತ್ರಿಕೆಯೇ ಆಡಳಿತ ನಡೆಸಿದೆ
  • ಆಯುಷ್ಮಾನ್ ಭಾರತ್ ತಾಂತ್ರಿಕ ಅಭಿವೃದ್ಧಿಯ ಕೂಸು
  • ನಮ್ಮ ಸರ್ಕಾರಕ್ಕೆ ಡೆಟಾ ಅನಾಲಿಸಿಸ್ ಮಾಡೋ ತಾಕತ್ತಿದೆ
  • ಬಡವರಿಗೆ ತಾಂತ್ರಿಕ ವಲಯಕ್ಕೆ ಪ್ರವೇಶ ‌ಇರಲಿಲ್ಲ
  • ಆದರೆ ಈಗ ಬಡವರು ಕೂಡ ತಂತ್ರಜ್ಞಾನದ ಭಾಗವೇ ಆಗಿದ್ದಾರೆ
  • ಆಡಳಿತ, ಬದುಕು, ಅಭಿವೃದ್ಧಿ ಹೀಗೆ ಎಲ್ಲದರಲ್ಲೂ ತಂತ್ರಜ್ಞಾನ ಕೀ ರೋಲ್ ಪ್ಲೇ ಮಾಡ್ತಿದೆ
  • ಸಣ್ಣ ಅವಧಿಯಲ್ಲೇ ತಂತ್ರಜ್ಞಾನ ಹಿಡಿತ ಸಾಧಿಸಿಕೊಂಡಿದೆ
  • ತಂತ್ರಜ್ಞಾನ ತನ್ನದೇ ಆದ ಸಾಂಸ್ಕೃತಿಕತೆಯನ್ನು ಕಂಡುಕೊಂಡಿದೆ
  • ಮುಂದಿನ ದಿನಗಳು ತಂತ್ರಜ್ಞಾನವನ್ನೇ ಆಧರಿಸಿಕೊಂಡಿರಲಿದೆ
  • ಸಂಕಷ್ಟ ಸಮಯದಲ್ಲಿ ಪ್ರತಿಭೆಯನ್ನು ಹೊರಹಾಕುವುದು ಬಹಳ ಕಷ್ಟದ ವಿಚಾರ
  • ಆದರೆ ನಾವು ಅದನ್ನೂ ಸಾಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದೇವೆ
  • ಗ್ಲೋಬಲ್ ಡೈವರ್ಸಿಟಿ (ಜಾಗತಿಕ ವೈವಿಧ್ಯತೆ) ಈಗ ಟೆಕ್ನಾಲಜಿ ಮೇಲೆ ಅವಲಂಬಿತವಾಗಿದೆ
  • ಪ್ರತಿ ಕ್ಷೇತ್ರದಲ್ಲೂ ಈಗ ಟೆಕ್ನಾಲಜಿ ಅನಿವಾರ್ಯತೆ ಆಗಿದೆ
  • ಕೊರೋನಾ ಕಾಲದಲ್ಲಿ ನಾವು ನೋಡಿದ್ದು ' ರಸ್ತೆಯ ತಿರುವು ಮಾತ್ರ, ಆದರೆ ಅದೇ ಕೊನೆಯಲ್ಲ" (ಏ ಥೋ ರಾಸ್ತೆಕಾ ಏಕ್ ಬೆಂಡ್ ಥಾ, ಲೆಕಿನ್ ಎಂಡ್ ನಹೀ)
  • ಇದು ಮತ್ತೊಂದು ಆರಂಭವಾಗಲಿ ಬಹಳ ಮುಂದೆ ಹೋಗುವ ಅಗತ್ಯ ಇದೆ
  • ನಾವು ಮಾಹಿತಿ ತಂತ್ರಜ್ಞಾನದ ಮಧ್ಯ ಕಾಲಘಟ್ಟದಲ್ಲಿದ್ದೇವೆ
  • ಕೈಗಾರಿಕೆಗಳು ದಿನದಿಂದ ದಿನಕ್ಕೆ ಬೆಳೆಯುತ್ತಿವೆ
  • ಡಿಜಿಟಲ್ ಇಂಡಿಯಾವನ್ನು ಇನ್ನು ಮುಂದೆ ಯಾವುದೇ ಸಾಮಾನ್ಯ ಸರ್ಕಾರದ ಉಪಕ್ರಮವಾಗಿ ನೋಡಲಾಗುವುದಿಲ್ಲ
  • ಡಿಜಿಟಲ್ ಇಂಡಿಯಾ ಜೀವನದ ವಿಧಾನವಾಗಿದೆ- ಮೋದಿ ಬಣ್ಣನೆ
  • ಡಿಜಿಟಲ್ ಇಂಡಿಯಾ ಬಡವರಿಗೆ ಸಹಾಯ ಮಾಡುತ್ತಿದೆ
  • ಮೊದಲು ತಂತ್ರಜ್ಞಾನಕ್ಕೆ ನಮ್ಮ ಆಡಳಿತ ಮಾದರಿಯಾಗಿದೆ
  • ತಂತ್ರಜ್ಞಾನವು ಒಂದೇ ಕ್ಲಿಕ್‌ನಲ್ಲಿ ಲಕ್ಷಾಂತರ ರೂಪಾಯಿ ಸಹಾಯವನ್ನು ತಂದಿದೆ
  • ಭಾರತವು ವಿಶ್ವದ ಅತ್ಯುತ್ತಮ ಆರೋಗ್ಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ
  • ಹೆಚ್ಚಿನ ಸೇವೆ ವಿತರಣೆಯನ್ನು ಸಮರ್ಥವಾಗಿ ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರವು ಡೇಟಾ ವಿಶ್ಲೇಷಣೆಯ ಶಕ್ತಿಯನ್ನು ಬಳಸಿದೆ
  • 25 ವರ್ಷಗಳ ಹಿಂದೆ ಇಂಟರ್ನೆಟ್ ಭಾರತಕ್ಕೆ ಬಂದಿತ್ತು
  • ಇಂಟರ್ನೆಟ್ ಚಂದಾದಾರರಲ್ಲಿ ಅರ್ಧದಷ್ಟು ಜನರು 4 ವರ್ಷಗಳ ಹಿಂದೆ ಸೇರಿದ್ದಾರೆ
  • ತಂತ್ರಜ್ಞಾನವು ಜನರ ಜೀವನವನ್ನು ಬದಲಿಸಿದೆ
  • ತಂತ್ರಜ್ಞಾನದಿಂದ ಇಂದು ನಾವು ಬಡವರಿಗೆ ಸಹಾಯ ಮಾಡಬಹುದಾಗಿದೆ
  • ನಾವು ತಂತ್ರಜ್ಞಾನಕ್ಕೆ ಧನ್ಯವಾದ ಹೇಳಬೇಕು
  • ನಾವು ಎಲ್ಲಾ ಮನೆಗಳಿಗೆ ವಿದ್ಯುತ್ ಒದಗಿಸಿರುವುದಕ್ಕೆ ತಂತ್ರಜ್ಞಾನವೇ ಕಾರಣ
  • ಕಡಿಮೆ ಸಮಯದಲ್ಲಿ ದೊಡ್ಡ ಜನಸಂಖ್ಯೆಗೆ ಲಸಿಕೆ ನೀಡಲು ತಂತ್ರಜ್ಞಾನದಿಂದ ಸಾಧ್ಯವಾಗಲಿದೆ ಎಂದು ಮೋದಿ ಹೇಳಿದರು

11:15 November 19

ಸಿಎಂ ಯಡಿಯೂರಪ್ಪ ಭಾಷಣ

ಸಿಎಂ ಯಡಿಯೂರಪ್ಪ ಭಾಷಣ
  • ಸರ್ಕಾರದ ಪರವಾಗಿ ಪ್ರಧಾನಿ ಮೋದಿ ಅವರಿಗೆ ಸ್ವಾಗತ ಮಾಡುತ್ತೇನೆ
  • ಪ್ರಧಾನಿ ಮೋದಿ ಆತ್ಮ ನಿರ್ಭರ ಭಾರತ ಆಗಬೇಕು ಎಂದಿದ್ದಾರೆ
  • ರಾಜ್ಯ ಇದನ್ನ ಸಹಕಾರ ಮಾಡುವುದಕ್ಕೆ ಎಲ್ಲ ರೀತಿಯಿಂದಲೂ ಕಟಿ ಬದ್ಧವಾಗಿದೆ
  • ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗುತ್ತಿದೆ
  • ರಾಜ್ಯ ಸರ್ಕಾರ ನಿಷ್ಠೆಯಿಂದ 1 ಟ್ರಿಲಿಯನ್ ಆರ್ಥಿಕತೆಗೆ ಬೇಕಾದ ಎಲ್ಲ ಸಹಕಾರ ನೀಡಲಿದೆ
  • ರಾಜ್ಯ ಆರ್ಥಿಕತೆ ಬಳವರ್ಧನೆಗೆ ಸಾಕಷ್ಟು ಯೋಜನೆಗಳನ್ನ ನೀಡಿದೆ
  • ಬಯೋ ಟೆಕ್ ಬಲವರ್ಧನೆಗೆ 2 ದಶಕಳಿಂದ ಯೋಜನೆ ರೂಪಿಸಿದೆ
  • ಡೇಟಾ ಆರ್ಥಿಕತೆಗೆ ರಾಜ್ಯ ಮುಂದಾಗಲಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್​ಗೆ ಹೇಳಿದ ಸಿಎಂ

10:47 November 19

ಪ್ರಧಾನಿ ಕನಸಾದ 1 ಟ್ರಿಲಿಯನ್ ಆರ್ಥಿಕತೆಗೆ ಕರ್ನಾಟಕ ದೊಡ್ಡ ಕೊಡುಗೆ ನೀಡಲಿದೆ: ಡಿಸಿಎಂ

ಡಿಸಿಎಂ ಅಶ್ವತ್ಧ ನಾರಾಯಣ್ ಭಾಷಣ
  • ಡಿಸಿಎಂ ಹಾಗೂ ಐಟಿ ಬಿಟಿ ಸಚಿವ ಅಶ್ವತ್ಥ ನಾರಾಯಣ್ ಭಾಷಣ
  • ದೇಶದ ಐಟಿ ಬಿಟಿ ವಲಯ ಆತ್ಮ ನಿರ್ಭರ್​ ಭಾರತಕ್ಕೆ ಸಹಕಾರಿಯಾಗಲಿದೆ
  • ಕರ್ನಾಟಕ ಸರ್ಕಾರ ಐಟಿ ಬಿಟಿ ವಲಯ ಬೆನ್ನಿಗೆ ನಿಂತಿದೆ
  • ಮಹಾಮರಿ y2k ರೀತಿ ಇದೆ.
  • ಇದನ್ನ ಐಟಿ ಬಿಟಿ ವಲಯ ಬದಲಾಯಿಸುತ್ತದೆ
  • 2020-25 ಐಟಿ ಬಿಟಿ ಪಾಲಿಸಿ ಈ ಕಾರಣಕ್ಕೆ ಪರಿಚಯಿಸಿದ್ದು
  • ಸಿಂಗಲ್ ವಿಂಡೋ ಹಾಗೂ ಇನ್ನಿತರ ಬದಲಾವಣೆ ಅತೀ ಶೀಘ್ರದಲ್ಲಿ ಆಗಲಿದೆ
  • 5g ತಂತ್ರಜ್ಞಾನ ಸಂಪರ್ಕ ತೊಡಕು ಸರಿಮಾಡಲಿದೆ
  • 5 ವರ್ಷದಲ್ಲಿ ರಾಜ್ಯ 100 ಮಿಲಿಯನ್ ಡಾಲರ್ ಆರ್ಥಿಕತೆಗೆ ಮುಟ್ಟಲಿದೆ
  • ಈ ಸಾಧನೆ ಪ್ರಧಾನಿ ಕನಸಾದ 1 ಟ್ರಿಲಿಯನ್ ಆರ್ಥಿಕತೆಗೆ ದೊಡ್ಡ ಕೊಡುಗೆ ಆಗಲಿದೆ ಎಂದ ಡಿಸಿಎಂ

10:43 November 19

ಸಚಿವ ಜಗದೀಶ್ ಶೆಟ್ಟರ್ ಭಾಷಣ

ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭಾಷಣ
  • ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭಾಷಣ
  • ಕರ್ನಾಟಕ ಮೊದಲ ದಿನದಿಂದ ವಿವಿಧ ಕಾರ್ಯಕ್ರಮಗಳಿಂದ ಕೈಗಾರಿಕೆಗಳ ಬೆನ್ನಿಗೆ ನಿಂತಿದೆ
  • ಹೆಮ್ಮೆಯ ವಿಚಾರ ಅಂದ್ರೆ 1.6 ಲಕ್ಷ ಕೋಟಿ ಹೂಡಿಕೆ ಕರ್ನಾಟಕಕ್ಕೆ ಬಂದಿದೆ
  • ಕರ್ನಾಟಕ ಮೊದಲ ರಾಜ್ಯ ವಿಶ್ವದ ಆರ್ಥಿಕತೆ ಬದಲಾವಣೆ ಬಗ್ಗೆ ಅರ್ಥ ಮಾಡಿಕೊಂಡು ವಿವಿಧ ಕಾರ್ಯಕ್ರಮ ಹಾಗೂ ಯೋಜನೆಗಳನ್ನ ಜನಕ್ಕೆ ನೀಡಿದೆ
  • ಬಿಟಿಎಸ್​-2020ಯಲ್ಲಿ ಹೇಳಿದ ಸಚಿವ ಜಗದೀಶ್​ ಶೆಟ್ಟರ್​

10:15 November 19

ವಿಷನ್ ಗ್ರೂಪ್ ಅಧ್ಯಕ್ಷರ ಭಾಷಣ

ವಿಷನ್ ಗ್ರೂಪ್ ಅಧ್ಯಕ್ಷರಿಂದ ಭಾಷಣ

ದೀಪ ಬೆಳಗುವ ಮೂಲಕ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ಸಿಎಂ ಚಾಲನೆ

ಚಾಲನೆ ನೀಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಇತರ ಗಣ್ಯರು

ಬಿಟಿಎಸ್​-2020ಗೆ ಚಾಲನೆ ನೀಡಿದ ಬಳಿಕ ವಿಷನ್ ಗ್ರೂಪ್ ಅಧ್ಯಕ್ಷರಿಂದ ಭಾಷಣ

ವಿಷನ್​ ಗ್ರೂಪ್​ ಅಧ್ಯಕ್ಷ ಕ್ರಿಸ್ ಗೋಪಾಲ್ ಕೃಷ್ಣನ್ ಪ್ರಾಸ್ತಾವಿಕ ಭಾಷಣ

09:42 November 19

23ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆ 2020ಗೆ ಪ್ರಧಾನಿ ನರೇಂದ್ರ ಸಿಎಂ ಚಾಲನೆ

ದೀಪ ಹಚ್ಚುವ ಮೂಲಕ ಬೆಂಗಳೂರು ಟೆಕ್​ ಶೃಂಗ ಉದ್ಘಾಟಿಸಿದ ಸಿಎಂ ಯಡಿಯೂರಪ್ಪ
  • ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರು ತಂತ್ರಜ್ಞಾನ ಮೇಳ
  • ಖಾಸಗಿ ಹೋಟೆಲ್​ನಲ್ಲಿ ನಡೆಯಲಿರುವ ಬೆಂಗಳೂರು ಟೆಕ್‌ ಶೃಂಗಸಭೆ - 2020
  • ಬಿಟಿಎಸ್-2020 ಉದ್ಘಾಟಿಸಿದ ಸಿಎಂ ಯಡಿಯೂರಪ್ಪ
  • ಬಿಟಿಎಸ್ - 2020 ಮೇಳದ ಉಸ್ತುವಾರಿ ವಹಿಸಿಕೊಂಡಿರುವ ಡಿಸಿಎಂ ಅಶ್ವತ್ಧ ನಾರಾಯಣ್
  • ಇದು ವರ್ಚುವಲ್ ತಂತ್ರಜ್ಞಾನ ಮೇಳ
  • ನಿನ್ನೆ ಈ ಕಾರ್ಯಕ್ರಮದ ಸಿದ್ಧತೆಗಳನ್ನ ಪರಿಶೀಲಿಸಿದ ಡಿಸಿಎಂ ಅಶ್ವತ್ ನಾರಾಯಣ್
  • ಟಿಎಸ್ 2020 ಸಮ್ಮಿಟ್ ನಲ್ಲಿ ಭಾಗವಹಿಸುವ ಮುಖ್ಯ ಅತಿಥಿಗಳು
  • ನರೇಂದ್ರ ಮೋದಿ, ಮಾನ್ಯ ಪ್ರಧಾನ ಮಂತ್ರಿಗಳು
  • ಸ್ಕಾಟ್ ಮಾರಿಸ್ಸನ್, ಮಾನ್ಯ ಪ್ರಧಾನ ಮಂತ್ರಿಗಳು, ಆಸ್ಟ್ರೇಲಿಯಾ
  • ಗೈ ಪರ್ನೆಲಿನ್, ಮಾನ್ಯ ಉಪಾಧ್ಯಕ್ಷರು, ಸ್ವಿಜರ್​​ಲ್ಯಾಂಡ್​​
  • ಬಿಎಸ್ ಯಡಿಯೂರಪ್ಪ, ಮಾನ್ಯ ಮುಖ್ಯಮಂತ್ರಿಗಳು
  • ಶಿವ ಶಂಕರ್ ಪ್ರಸಾದ್, ತಂತ್ರಜ್ಞಾನ, ಕಾನೂನು ಸಚಿವರು, ಭಾರತ ಸರ್ಕಾರ
  • ಅಶ್ವತ್ಥ ನಾರಾಯಣ್, ಉಪ ಮುಖ್ಯಮಂತ್ರಿ & ತಂತ್ರಜ್ಞಾನ ಸಚಿವರು, ಕರ್ನಾಟಕ ಸರ್ಕಾರ
  • ಜಗದೀಶ್ ಶೆಟ್ಟರ್, ದೊಡ್ಡ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವರು
  • ಸಭೆಯಲ್ಲಿ ಭಾಗವಹಿಸಲಿರುವ ಕೆಲ ಪ್ರಮುಖ ದೇಶಗಳು
  • ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಬೆಹರೈನ್, ಕೆನಡಾ, ಡೆನ್ಮಾರ್ಕ್, ಫಿನ್​​ಲ್ಯಾಂಡ್​, ಫ್ರಾನ್ಸ್, ಇಸ್ರೇಲ್, ಜಪಾನ್, ಲುಥೇನಿಯಾ, ನೆದರ್ಲೆಂಡ್, ನ್ಯೂಜಿಲ್ಯಾಂಡ್​, ಸಿಂಗಾಪುರ್, ಸ್ವೀಡನ್, ಸ್ವಿಜರ್ಲ್ಯಾಂಡ್, ಥೈವಾನ್, ಅಮೆರಿಕ, ಬ್ರಿಟನ್ ದೇಶಗಳು ಭಾಗಿ
Last Updated : Nov 19, 2020, 1:55 PM IST

ABOUT THE AUTHOR

...view details