ಕರ್ನಾಟಕ

karnataka

ETV Bharat / state

ಚಿಕ್ಕಪೇಟೆ ಮೆಟ್ರೊ ನಿಲ್ದಾಣದ ಮುಂದೆಯೇ ನಡೆಯಿತು ಲೈವ್ ದರೋಡೆ: ವೀಡಿಯೋ.. - Robbery chikpet metro station

ಪೊಲೀಸ್ ಠಾಣೆ ಕೂಗಳತೆ ದೂರದಲ್ಲಿ ಚಿಕ್ಕಪೇಟೆಯ ಮೆಟ್ರೊ ನಿಲ್ದಾಣದ ಬಳಿ ನಿಂತು ಮುಖಕ್ಕೆ ಮಾಸ್ಕ್ ಹಾಕಿಕೊಂಡು ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಡ್ರ್ಯಾಗರ್ ತೋರಿಸಿ ಬೆದರಿಸಿದ್ದಾರೆ. ‌ಮೊಬೈಲ್ ಹಾಗೂ ಹಣ ಕೊಡುವಂತೆ ಧಮಕಿ ಹಾಕಿ‌ ಕಸಿದು ಪರಾರಿಯಾಗಿದ್ದಾರೆ‌‌.

robbery
ದರೋಡೆ

By

Published : Oct 20, 2020, 10:38 PM IST

ಬೆಂಗಳೂರು:ಸಾವಿರಾರು ಜನ ಓಡಾಡುವ ರಸ್ತೆಯಲ್ಲೇ ಬೆಳ್ಳಂ ಬೆಳಗ್ಗೆ ರಾಜಾರೋಷವಾಗಿ ದರೋಡೆ ಮಾಡಿರುವ ಘಟನೆ, ಕಲಾಸಿಪಾಳ್ಯ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸ್ ಠಾಣೆ ಕೂಗಳತೆ ದೂರದಲ್ಲಿ ಚಿಕ್ಕಪೇಟೆಯ ಮೆಟ್ರೊ ನಿಲ್ದಾಣದ ಬಳಿ ನಿಂತು ಮುಖಕ್ಕೆ ಮಾಸ್ಕ್ ಹಾಕಿಕೊಂಡು ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಚಾಕು ತೋರಿಸಿ ಬೆದರಿಸಿದ್ದಾರೆ. ಬಳಿಕ ‌ಮೊಬೈಲ್ ಹಾಗೂ ಹಣ ಕೊಡುವಂತೆ ಧಮಕಿ ಹಾಕಿ‌ ಕಸಿದುಕೊಂಡು ಪರಾರಿಯಾಗಿದ್ದಾರೆ‌‌. ಆರೋಪಿಗಳ ಈ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಿಕ್ಕಪೇಟೆ ಮೆಟ್ರೊ ನಿಲ್ದಾಣದ ಮುಂದೆ ನಡೆದ ದರೋಡೆ

ಲಾಕ್​ಡೌನ್ ಸಂದರ್ಭದಲ್ಲಿ ನಡೆದಿರುವ ಘಟನೆ‌ ಇದಾಗಿದೆ. ಹಳೆಯ ಘಟನೆ ಎಂಬ ಪ್ರಾಥಮಿಕ ಮಾಹಿತಿ ದೊರೆತಿದೆ. ವಿಡಿಯೋದಲ್ಲಿರುವವರ ಬಗ್ಗೆ ಮಾಹಿತಿ ಕಲೆಹಾಕಲು ಸೂಚಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಎಂ. ಪಾಟೀಲ್ ತಿಳಿಸಿದ್ದಾರೆ.

ABOUT THE AUTHOR

...view details