ಕರ್ನಾಟಕ

karnataka

ETV Bharat / state

ಡಿಸಿಎಂ ಸ್ಥಾನ ವಂಚಿತ ಅಶೋಕ್​ಗೆ ಮತ್ತೊಂದು ಶಾಕ್: ಸಾಮ್ರಾಟನ ಕೈ ತಪ್ಪಿದ ಬೆಂಗಳೂರು ಉಸ್ತುವಾರಿ - List of Ministers

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟಗೊಂಡಿದೆ. ಬಹು ಬೇಡಿಕೆಯ ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಇರಿಸಿಕೊಂಡಿದ್ದಾರೆ.

ಆರ್.ಅಶೋಕ್

By

Published : Sep 16, 2019, 7:57 PM IST

ಬೆಂಗಳೂರು: ಉಪ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದರಿಂದ ಮುನಿಸಿಕೊಂಡಿರುವ ಆರ್. ಅಶೋಕ್​ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೊಂದು ಶಾಕ್ ನೀಡಿದ್ದಾರೆ. ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಅಶೋಕ್​ಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ನೀಡಿ ಅಶೋಕ್ ಆಸೆಗೆ ತಣ್ಣೀರೆರಚಿದ್ದಾರೆ.

ಕಡೆಗೂ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟಗೊಂಡಿದೆ. ಬಹು ಬೇಡಿಕೆಯ ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಇರಿಸಿಕೊಂಡಿದ್ದಾರೆ. ಈಗಾಗಲೇ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಹಾಗು ಆರ್.ಅಶೋಕ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು ಇಬ್ಬರಲ್ಲಿ ಯಾರಿಗೆ ಬೆಂಗಳೂರು ಉಸ್ತುವಾರಿ ಕೊಟ್ಟರೂ ಸಮಸ್ಯೆ ಹೆಚ್ಚಲಿದೆ ಎನ್ನುವ ಕಾರಣಕ್ಕೆ ಇಬ್ಬರಿಗೂ ಬೆಂಗಳೂರಿನ ಉಸ್ತುವಾರಿ ನೀಡುವ ಗೋಜಿಗೆ ಹೋಗದೇ ತಮ್ಮ ಬಳಿಯೇ ಇರಿಸಕೊಂಡಿದ್ದಾರೆ. ಸಿಎಂ ನಡೆಯಿಂದಾಗಿ ಈಗಾಗಲೇ ಬೇಸರಗೊಂಡಿದ್ದ ಅಶೋಕ್​ಗೆ ಮತ್ತಷ್ಟು ನಿರಾಸೆಯಾದಂತಾಗಿದೆ.

ಇನ್ನು ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟಕ್ಕೆ ಸೇರಿಕೊಳ್ಳಲು ಯಶಸ್ವಿಯಾಗಿ ಉಪ ಮುಖ್ಯಮಂತ್ರಿ ಸ್ಥಾನವನ್ನೂ ಪಡೆದುಕೊಂಡಿರುವ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲೆಯಲ್ಲಿ ಅಧಿಪತ್ಯ ಸಾಧಿಸಲು ಮುಂದಾಗಿದ್ದು ಸಚಿವ ಸ್ಥಾನ ವಂಚಿತ ಉಮೇಶ್ ಕತ್ತಿ ಹಾಗು ಸವದಿ ನಡುವೆ ಆಂತರಿಕ ಕಲಹ ಹುಟ್ಟುಹಾಕಿದ್ದು ಸುಳ್ಳಲ್ಲ, ಬೆಳಗಾವಿ ಉಸ್ತುವಾರಿ ಸವದಿಗೆ ನೀಡಿದಲ್ಲಿ ಮುನಿಸಿಕೊಂಡ ಉಮೇಶ್ ಕತ್ತಿಯ ಆಕ್ರೋಶ ಮತ್ತಷ್ಟು ಹೆಚ್ಚಲಿದೆ ಎನ್ನುವ ಕಾರಣಕ್ಕೆ ಅವರನ್ನು ಬೆಳಗಾವಿಯಿಂದ ದೂರ ಇಟ್ಟು ಬಳ್ಳಾರಿ ಉಸ್ತುವಾರಿ ಕೊಟ್ಟಿದ್ದಾರೆ.

ಉಪ ಮುಖ್ಯಮಂತ್ರಿ ಸ್ಥಾನದ ಮತ್ತೋರ್ವ ಆಕಾಂಕ್ಷಿಯಾಗಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಬಳ್ಳಾರಿ ಜಿಲ್ಲೆ ಉಸ್ತುವಾರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೂ ರಾಯಚೂರು ಜಿಲ್ಲೆ ಉಸ್ತುವಾರಿ ಜೊತೆ ಚಿತ್ರದುರ್ಗವನ್ನು ನೀಡಿ ಸಮಾಧಾನಪಡಿಸುವ ಪ್ರಯತ್ನ ನಡೆಸಲಾಗಿದೆ. ಇದರಿಂದಾಗಿ ಅಶೋಕ್, ಸವದಿ ಮತ್ತು ಶ್ರೀರಾಮುಲು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಗಳ ಹಂಚಿಕೆಯಲ್ಲಿಯೂ ಅಸಮಧಾನ ಹೊಂದುವ ಸಾಧ್ಯತೆ ಇದೆ ಎನ್ನಲಾಗಿದೆ.

ಯಾರಿಗೆ ಯಾವ ಜಿಲ್ಲೆ ಉಸ್ತುವಾರಿ:

  • ಬಿ.ಎಸ್.ಯಡಿಯೂರಪ್ಪ -ಬೆಂಗಳೂರು ನಗರ
  • ಗೋವಿಂದ ಕಾರಜೋಳ -ಬಾಗಲಕೋಟೆ, ಕಲಬುರಗಿ
  • ಡಾ.ಸಿ.ಎನ್ ಅಶ್ವತ್ಥನಾರಾಯಣ್- ರಾಮನಗರ, ಚಿಕ್ಕಬಳ್ಳಾಪುರ
  • ಲಕ್ಷ್ಮಣ ಸವದಿ- ಬಳ್ಳಾರಿ, ಕೊಪ್ಪಳ
  • ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ, ದಾವಣಗೆರೆ
  • ಆರ್.ಅಶೋಕ್ -ಬೆಂಗಳೂರು ಗ್ರಾಮಾಂತರ, ಮಂಡ್ಯ
  • ಜಗದೀಶ್ ಶೆಟ್ಟರ್- ಬೆಳಗಾವಿ, ಹುಬ್ಬಳ್ಳಿ ಧಾರವಾಡ
  • ಶ್ರೀರಾಮುಲು -ರಾಯಚೂರು,ಚಿತ್ರದುರ್ಗ
  • ಸುರೇಶ್ ಕುಮಾರ್ -ಚಾಮರಾಜನಗರ
  • ವಿ.ಸೋಮಣ್ಣ -ಮೈಸೂರು, ಮಡಿಕೇರಿ
  • ಸಿ.ಟಿ. ರವಿ - ಚಿಕ್ಕಮಗಳೂರು
  • ಬಸವರಾಜ ಬೊಮ್ಮಾಯಿ - ಉಡುಪಿ, ಹಾವೇರಿ
  • ಕೋಟಾ ಶ್ರೀನಿವಾಸ ಪೂಜಾರಿ - ಮಂಗಳೂರು
  • ಜೆ.ಸಿ.ಮಾಧುಸ್ವಾಮಿ - ತುಮಕೂರು,ಹಾಸನ
  • ಸಿ.ಸಿ.ಪಾಟೀಲ್- ಕೋಲಾರ
  • ಪ್ರಭು ಚೌವ್ಹಾಣ್- ಬೀದರ್,ಯಾದಗಿರಿ
  • ಶಶಿಕಲಾ ಜೊಲ್ಲೆ- ಉತ್ತರ ಕನ್ನಡ

ABOUT THE AUTHOR

...view details