ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜನಸಂಖ್ಯೆ ಹೆಚ್ಚಿದಂತೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿವೆ. ಇದಕ್ಕೆ ಕಾರಣ ವಾಹನಗಳ ದಟ್ಟಣೆ ಹಾಗೂ ಸಂಚಾರ ನಿಯಮ ಉಲ್ಲಂಘನೆ. ಈ ಸಾಲಿನಲ್ಲಿ ಬೆಂಗಳೂರಲ್ಲಿ ನಡೆದ ಒಟ್ಟಾರೆ ಅಪಘಾತಗಳ ಮಾಹಿತಿ ಇಲ್ಲಿದೆ.
2019ರಲ್ಲಿ ನಡೆದ ಅಪಘಾತ ಪ್ರಕರಣಗಳ ಪಟ್ಟಿ ಈ ಟಿವಿ ಭಾರತ್ಗೆ ಲಭ್ಯವಾಗಿದ್ದು, ಒಟ್ಟು 503 ಮಂದಿ ಸಾವನ್ನಪ್ಪಿದ್ರೆ, 2819 ಮಂದಿ ಗಾಯವಾಗಿದ್ದಾರೆ. ಹಾಗೆ 3123 ಪ್ರಕರಣ ದಾಖಲಾಗಿವೆ.
ಸಿಲಿಕಾನ್ ಸಿಟಿಯಲ್ಲಿ ಈ ವರ್ಷ ನಡೆದ ಅಪಘಾತಗಳೆಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ
ಸಿಲಿಕಾನ್ ಸಿಟಿ ಎಂದಾಕ್ಷಣ ಅಲ್ಲಿ ಜನರು ಜಾಸ್ತಿ ಅಪಘಾತಗಳೂ ಜಾಸ್ತಿ. ಈ ಕಾರಣಗಳೀಂದಲೇ ನೂತನ ಮೋಟಾರು ಕಾಯ್ದೆಯನ್ನ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಆದರೂ ಅಪಘಾತಗಳನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಲ್ಲಿ 2019 ರ ಸಾಲಿನಲ್ಲಿ ನಡೆದ ಒಟ್ಟಾರೆ ಅಪಘಾತಗಳ ಮಾಹಿತಿ ಇಲ್ಲಿದೆ.
ಅಪಘಾತಕ್ಕೆ ಈ ಸಾಲಿನಲ್ಲಿ ಬೆಂಗಳೂರಲ್ಲಿ ಉಂಟಾದ ಸಾವು ನೋವು
ಪ್ರಕರಣ ಹಾಗೂ ಸಾವಿನ ವಿವರ:
- ಬಿಎಂಟಿಸಿ : 25ಮಂದಿ ಸಾವು, 85 ಮಂದಿಗೆ ಗಾಯ, ಒಟ್ಟು 101ಪ್ರಕರಣ
- ಕೆಎಸ್ಆರ್ಟಿಸಿ ಬಸ್: 11ಸಾವು, 58ಮಂದಿಗೆ ಗಾಯ, ಒಟ್ಟು 28 ಪ್ರಕರಣ
- ಫ್ಯಾಕ್ಟರಿ ಬಸ್: 1ಸಾವು ಒಟ್ಟು ,6 ಪ್ರಕರಣ
- ಖಾಸಗಿ ಬಸ್ : 12ಸಾವು, 50ಗಾಯ, 78 ಪ್ರಕರಣ
- ಲಾರಿ: 74ಸಾವು, 170 ಗಾಯ, 282 ಪ್ರಕರಣ
- ಲಾರಿ: 62ಸಾವು, 853 ಗಾಯ, 850 ಪ್ರಕರಣ
- ಟ್ಯಾಕ್ಸಿ : 11ಸಾವು,130 ಗಾಯ, ಒಟ್ಟು 129 ಪ್ರಕರಣ
- ಜೀಪು : 4ಸಾವು, 23 ಗಾಯ, ಒಟ್ಟು 21 ಪ್ರಕರಣ
- ಆಟೋ ರಿಕ್ಷಾ: 23 ಸಾವು, 126 ಗಾಯ, 139 ಪ್ರಕರಣ
- ಮೋಟಾರ್ ಸೈಕಲ್: 112 ಸಾವು, 636 ಗಾಯ, 675 ಪ್ರಕರಣ
- ಸ್ಕೂಟರ್ : 27 ಸಾವು, 234 ಗಾಯ, 238 ಪ್ರಕರಣ
- ಟೆಂಪೋ : 37 ಸಾವು, 138 ಗಾಯ, 208 ಪ್ರಕರಣ
- ವ್ಯಾನ್: 1ಸಾವು, 21 ಗಾಯ, 20 ಪ್ರಕರಣ
- ಮ್ಯಾಕ್ಸಿ ಕ್ಯಾಬ್: 9 ಸಾವು, 47ಗಾಯ, 54 ಪ್ರಕರಣ
- ಅಪರಿಚಿತ ವಾಹನ: 45 ಸಾವು, 116 ಗಾಯ, 151 ಪ್ರಕರಣ
- ಮಿಲಿಟರಿ ವಾಹನ: 0ಸಾವು, 2ಗಾಯ,1 ಪ್ರಕರಣ
- ಟ್ರಾಕ್ಟರ್: 13ಸಾವು, 26 ಗಾಯ, 31ಪ್ರಕರಣ
- ಟ್ಯಾಂಕರ್: 18 ಸಾವು, 33 ಗಾಯ, 64ಪ್ರಕರಣ