ಬೆಂಗಳೂರು: ಕೇಂದ್ರ ಸರ್ಕಾರ ಮೇ 4 ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವ ಹಿನ್ನೆಲೆ ರಾಜ್ಯದಲ್ಲಿ ಯಾವ ರೀತಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕು ಎನ್ನುವ ಕುರಿತು ನಾಳೆ ಮದ್ಯ ಮಾರಾಟ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ ಎಂದು ಅಬಕಾರಿ ಸಚಿವ ನಾಗೇಶ್ ತಿಳಿಸಿದ್ದಾರೆ.
ದೂರವಾಣಿ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವರು, ಎಲ್ಲೆಲ್ಲಿ ಮದ್ಯ ಮಾರಾಟ ಮಾಡಬೇಕು ಎಂದು ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಆದರೆ, ರಾಜ್ಯದ ಗ್ರೀನ್ ಝೋನ್ನಲ್ಲಿ ಮದ್ಯ ಮಾರಾಟ ಇರುತ್ತದೆ. ಅಲ್ಲಿ ಶೇ.100 ರಷ್ಟು ಮದ್ಯ ಮಾರಾಟ ಆರಂಭಿಸಲಾಗುತ್ತದೆ. ಆದರೆ, ರೆಡ್ ಮತ್ತು ಆರೆಂಜ್ ಝೋನ್ ಗಳಲ್ಲಿ ಮದ್ಯ ಮಾರಾಟದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.