ಬೆಂಗಳೂರು: ವಿದ್ಯುತ್ ತಗುಲಿ ಲೈನ್ಮ್ಯಾನ್ ಒಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಆರ್ ಟಿ ನಗರ ವ್ಯಾಪ್ತಿಯಲ್ಲಿ ನಡೆದಿದೆ.
ವಿದ್ಯುತ್ ತಂತಿ ತಗುಲಿ ಲೈನ್ಮ್ಯಾನ್ ಸ್ಥಳದಲ್ಲೇ ಸಾವು - Lineman death
ವಿದ್ಯುತ್ ತಂತಿ ತಗುಲಿ ಲೈನ್ಮ್ಯಾನ್ ಮೃತಪಟ್ಟ ಘಟನೆ ಆರ್ ಟಿ ನಗರ ವ್ಯಾಪ್ತಿಯಲ್ಲಿ ನಡೆದಿದೆ. ಈ ನಡುವೆ ಲೈನ್ಮ್ಯಾನ್ ಮೃತಪಟ್ಟರೂ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಬಾರದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಅಶೋಕ್ ಮೃತ ದುರ್ದೈವಿ. ಇತ್ತೀಚೆಗೆ ಸುರಿದ ಭಾರಿ ಗಾಳಿ ಮಳೆಗೆ ವಿದ್ಯುತ್ ತಂತಿ ತುಂಡರಿಸಿ ಬಿದ್ದಿದೆ. ಇದರ ಬಗ್ಗೆ ಆರ್ ಟಿ ನಗರ ಬೆಸ್ಕಾಂ ಕಚೇರಿಗೆ ದೂರು ಬಂದಿತ್ತು. ದೂರಿನ ಅನ್ವಯ ವಿದ್ಯುತ್ ತಂತಿ ಸರಿಪಡಿಸುವ ವೇಳೆ ವಿದ್ಯುತ್ ತಾಗಿ ಲೈನ್ಮ್ಯಾನ್ ಅಶೋಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಲೈನ್ಮ್ಯಾನ್ ಅಜಾಗರೂಕತೆಯೇ ಈ ಅವಘಡಕ್ಕೆ ಕಾರಣವೆಂದು ಬೆಸ್ಕಾಂ ಅಧಿಕಾರಿಗಳು ಹೇಳುತಿದ್ದಾರೆ. ಇನ್ನು ಅಶೋಕ್ ಮೃತಪಟ್ಟ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಬಾರದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇನ್ನು ಮೃತದೇಹವನ್ನ ಜೈನ್ ಆಸ್ಪತ್ರೆಗೆ ರವಾನಿಸಲಾಗಿದೆ.