ಬೆಂಗಳೂರು: ಕೆಂಪೇಗೌಡರು ಒಂದೇ ಸಮುದಾಯಕ್ಕೆ ಸೇರಿದವರಲ್ಲ. ಅವರನ್ನು ಒಂದು ಜಾತಿಗೆ ಸೀಮಿತವಾಗಿಸುವುದು ತಪ್ಪು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕರೆಸಿ ಬಿಜೆಪಿ ಸರ್ಕಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಉದ್ಘಾಟಿಸಿದೆ.
ಇದಕ್ಕೆ ಪ್ರತಿಪಕ್ಷದ ನಾಯಕರನ್ನು ಶಿಷ್ಟಾಚಾರದ ಪ್ರಕಾರ ಕರೆಯಬೇಕು. ಅವರನ್ನು ಆ ರೀತಿ ಕರೆಯದೇ ಇದ್ದದ್ದು ತಪ್ಪು. ಪ್ರಜಾಪ್ರಭುತ್ವದಲ್ಲಿ ಕೆಲವೊಂದು ಹಕ್ಕು ಇವೆ. ಅವುಗಳ ಉಲ್ಲಂಘನೆ ಆಗಿದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಕೂಡ ಆಹ್ವಾನ ನೀಡಿಲ್ಲ. ಕೆಂಪೇಗೌಡ ಕಾರ್ಯಕ್ರಮ ಬಿಜೆಪಿ ಕಾರ್ಯಕ್ರಮ ಆಗಿತ್ತು. ಕೆಂಪೇಗೌಡ ಒಂದೇ ಸಮುದಾಯಕ್ಕೆ ಸೇರಿದವರಲ್ಲ. ಒಂದು ಜಾತಿಗೆ ಅವರನ್ನು ಸೇರಿಸುತ್ತಿರುವುದು ತಪ್ಪು ಎಂದರು.
ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಿಎಂ .ಎಸ್.ಎಂ ಕೃಷ್ಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗೋಕೆ ಪ್ರಮುಖ ಕಾರಣ, ಅವರಿಗೂ ಆಹ್ವಾನ ನೀಡಬೇಕಿತ್ತು. ಕೆಂಪೇಗೌಡ ಈ ನಾಡಿನ ಆಸ್ತಿ, ಎಲ್ಲರನ್ನೂ ಕರೆದು ಹಬ್ಬ ರೀತಿಯಲ್ಲಿ ಮಾಡಬೇಕಿತ್ತು ಎಂದರು. ಹಾಗೆ ಮಾತನಾಡಿದ ಅವರು ಮಹದಾಯಿ, ಕೃಷ್ಣ ಮೇಲ್ದಂಡೆ ಅನುಷ್ಠಾನಕ್ಕೆ ಪಾದಯಾತ್ರ ವಿಚಾರ ಮಾತನಾಡಿ, ಪಕ್ಷದ ಮುಂದೆ ಈ ಹೋರಾಟ ಮಾಡಬೇಕು ಅಂತ ಚರ್ಚೆ ಇದೆ.