ಬೆಂಗಳೂರು:ವಿದ್ಯುತ್ ವ್ಯತ್ಯಯದಿಂದ ಲಿಫ್ಟ್ ಸ್ಥಗಿತಗೊಂಡು ಅದರಲ್ಲಿ ಅರ್ಧಗಂಟೆ ಕಾಲ ಸಿಲುಕಿದ್ದ ಸಂಸದ ಉಮೇಶ್ ಜಾಧವ್ ಸೇರಿ ಮೂವರನ್ನು ರಕ್ಷಿಸಲಾಗಿದೆ. ಇಂದು ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ್ ಭವನದಲ್ಲಿ ಈ ಘಟನೆ ಜರುಗಿದೆ. ಲಿಫ್ಟ್ ನಲ್ಲಿ ಸಿಲುಕಿ ಆತಂಕಗೊಂಡಿದ್ದ ಸಂಸದ ಉಮೇಶ್ ಜಾಧವ್ ಸೇರಿ ಮೂವರನ್ನು ತಾಂತ್ರಿಕ ಸಿಬ್ಬಂದಿ ಸಹಾಯದಿಂದ ಹೊರತೆಗೆಯಲಾಗಿದೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಗುರುವಾರ ಆಗಮಿಸಿದ್ದ ಕಲಬುರಗಿ ಸಂಸದ ಉಮೇಶ್ ಜಾಧವ್ ಅವರು, ಕಚೇರಿ ಎರಡನೇ ಮಹಡಿಗೆ ತೆರಳಲು ತಮ್ಮ ಇಬ್ಬರು ಆಪ್ತರ ಜೊತೆ ಲಿಫ್ಟ್ ಪ್ರವೇಶಿಸಿದರು. ಲಿಫ್ಟ್ ಮೇಲೆ ಹೋಗುವಾಗ ವಿದ್ಯುತ್ ಕಡಿತವಾಗಿ ಲಿಫ್ಟ್ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಲಿಫ್ಟ್ ಒಳಗಡೆಯೇ ಸಂಸದ ಉಮೇಶ್ ಜಾಧವ್ ಮತ್ತು ಅವರ ಇಬ್ಬರು ಆಪ್ತರು ಸಿಲುಕಿಕೊಂಡಿದ್ದರು. ಅವರೆಲ್ಲರೂ ರಕ್ಷಣೆಗೆ ಮೊರೆಯಿಟ್ಟಿದ್ದರು. ತಕ್ಷಣ ವಿದ್ಯುತ್ ಬಂದರೂ ತಾಂತ್ರಿಕ ತೊಂದರೆಯಿಂದ ಲಿಫ್ಟ್ ತೆರೆದಿರಲಿಲ. ಕೊನೆಗೆ ಟೆಕ್ನಿಷಿಯನ್ಗಳನ್ನು ಕರೆಸಿ ಲಿಫ್ಟ್ ಓಪನ್ ಮಾಡಿಲಾಯಿತು. ಅರ್ಧಗಂಟೆ ನಂತರ ಲಿಫ್ಟ್ ಒಳಗಿನಿಂದ ಸಂಸದ ಜಾಧವ್ ಹಾಗೂ ಅವರ ಆಪ್ತರು ಸೇರಿ ಮೂವರನ್ನು ಸಂರಕ್ಷಿಸಿ ಹೊರಗೆ ಕರೆತರಲಾಯಿತು.