ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ : ಅಪರಾಧಿಗೆ ಜೀವಾವಧಿ ಶಿಕ್ಷೆ - life imprisonment punishment to accused in Bengaluru

ಬೆಂಗಳೂರಿನ ಆಡುಗೋಡಿ ಸಮೀಪದ ಲಕ್ಷಣರಾವ್ ನಗರ ನಿವಾಸಿಗಳಾದ ಪರಮೇಶ್ (39) ಹಾಗೂ ಆರೋಪಿ ಅಬ್ದುಲ್ ವಾಸೀಂ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಿತ್ತು. ಇದೇ ವಿಚಾರವಾಗಿ 2020ರ ಜುಲೈ 20ರಂದು ಅಬ್ದುಲ್ ವಾಸೀಂ ಬೀಡಿ ಕೇಳುವ ನೆಪದಲ್ಲಿ ಪರಮೇಶ್​ ಮನೆ ಬಳಿ ಬಂದು ಜಗಳ ತೆಗೆದಿದ್ದ.

Court
ನ್ಯಾಯಾಲಯ

By

Published : Mar 30, 2022, 9:06 PM IST

ಬೆಂಗಳೂರು:ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದ ವ್ಯಕ್ತಿಗೆ ಬೆಂಗಳೂರಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಅಬ್ದುಲ್ ವಾಸೀಂ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತನ ಮೇಲಿನ ಆರೋಪ ರುಜುವಾತಾದ ಹಿನ್ನೆಲೆ ನಗರದ 60ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿದ್ಯಾಧರ್ ಶಿರಹಟ್ಟಿ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಬೆಂಗಳೂರಿನ ಆಡುಗೋಡಿ ಸಮೀಪದ ಲಕ್ಷಣರಾವ್ ನಗರ ನಿವಾಸಿಗಳಾದ ಪರಮೇಶ್ (39) ಹಾಗೂ ಆರೋಪಿ ಅಬ್ದುಲ್ ವಾಸೀಂ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಿತ್ತು. ಇದೇ ವಿಚಾರವಾಗಿ 2020ರ ಜುಲೈ 20ರಂದು ಅಬ್ದುಲ್ ವಾಸೀಂ ಬೀಡಿ ಕೇಳುವ ನೆಪದಲ್ಲಿ ಪರಮೇಶ್​ ಮನೆ ಬಳಿ ಬಂದು ಜಗಳ ತೆಗೆದಿದ್ದ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳವಾದಾಗ ಮನೆಯಿಂದ ಹೊರಗೆಳೆದು ತಂದು ಸ್ಕ್ರೂಡ್ರೈವರ್​ನಿಂದ ಪರಮೇಶ್ ಕಿವಿ ಬಳಿ ಹಾಗೂ ಕುತ್ತಿಗೆಗೆ ಇರಿದಿದ್ದ. ಘಟನೆಯಲ್ಲಿ ಪರಮೇಶ್ ಸಾವನ್ನಪ್ಪಿದ ಕುರಿತು ಆಡುಗೋಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.

ಓದಿ:ಸರ್ಕಾರ-ಕಾರ್ಪೊರೇಟ್ ಸಂಸ್ಥೆಗಳ ಮಧ್ಯೆ ಯಾವುದೇ ಕಾರಣಕ್ಕೂ ಮೈತ್ರಿ ಇರಬಾರದು: ಸಿದ್ದರಾಮಯ್ಯ

For All Latest Updates

TAGGED:

ABOUT THE AUTHOR

...view details