ಕರ್ನಾಟಕ

karnataka

ETV Bharat / state

ಪೊಲೀಸ್ ಠಾಣೆಗಳು ಜ್ಞಾನಾರ್ಜನೆಯ ಕೇಂದ್ರಗಳಾಗಲಿ: ಡಿಸಿಪಿ ಬಾಬಾ - southeast police station bengaluru

ಪೊಲೀಸ್​​ ಠಾಣೆಗಳು ದೂರು-ದುಮ್ಮಾನಗಳಿಗಷ್ಟೇ ಅಲ್ಲದೆ ಜ್ಞಾನ ಕೇಂದ್ರಗಳಾಗಲಿ ಎಂದು ಬೆಂಗಳೂರಿನ ಆಗ್ನೇಯ ವಿಭಾಗದ 5 ಪೊಲೀಸ್​ ಠಾಣೆಗಳಿಗೆ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ.

libraries started in police station
ಪೊಲೀಸ್ ಠಾಣೆಗಳು ಜ್ಞಾನರ್ಜನೆಯ ಕೇಂದ್ರಗಳಾಗಲಿ: ಡಿಸಿಪಿ ಬಾಬಾ

By

Published : Nov 24, 2022, 3:55 PM IST

Updated : Nov 25, 2022, 9:22 PM IST

ಬೆಂಗಳೂರು: ಬೆಂಗಳೂರು ಆಗ್ನೇಯ ವಿಭಾಗದ 5 ಪೊಲೀಸ್ ಠಾಣೆಗಳಲ್ಲಿ ಅತ್ಯುತ್ತಮ ಗ್ರಂಥಾಲಯಗಳ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಠಾಣೆಗಳಲ್ಲೂ ಈ ವ್ಯವಸ್ಥೆಯನ್ನು ಮುಂದುವರೆಸಲಾಗುವುದು ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ತಿಳಿಸಿದರು.

ಅವರು ಇಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡುತ್ತ, ಠಾಣೆಗಳು ದೂರು-ದುಮ್ಮಾನಗಳಿಗಷ್ಟೇ ಅಲ್ಲ, ಜ್ಞಾನಾರ್ಜನೆಯ ಕೇಂದ್ರಗಳಾಗಬೇಕಿದೆ. ಅಲ್ಲದೆ ಸಾಮಾನ್ಯ ಜನರೂ ಇಲ್ಲಿನ ಪುಸ್ತಕಗಳನ್ನು ಓದುವುದರ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದ್ರು.

ಪೊಲೀಸ್ ಠಾಣೆ ಗ್ರಂಥಾಲಯ ಉದ್ಘಾಟನೆ

ಈವರೆಗೆ ಕೋರಮಂಗಲ, ಹುಳಿಮಾವು, ಎಲೆಕ್ಟ್ರಾನಿಕ್ ಸಿಟಿ, ಮೈಕೋಲೇಔಟ್ ಮತ್ತು ಪರಪ್ಪನ ಅಗ್ರಹಾರದಲ್ಲಿ ಇಂತಹ ವ್ಯವಸ್ಥೆ ಕಲ್ಪಿಸಲಾಗಿದೆ ಇಂತಹ ಗ್ರಂಥಾಲಯಗಳಿಗೆ ಸಮೂಹ ನೆರವಿನಿಂದ ಪುಸ್ತಕಗಳನ್ನು ಕಲೆ ಹಾಕಲಾಗುತ್ತಿದೆ ಪೊಲೀಸರು ಈ ಸೌಲಭ್ಯವನ್ನು ಬಳಸುವ ಮೂಲಕ ಮಾದರಿಯಾಗಬೇಕೆಂದು ತಿಳಿಸಿದರು. ಗ್ರಂಥಾಲಯವನ್ನು ಖ್ಯಾತ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಚಾಲನೆ ನೀಡಿದರು.

ಇದನ್ನೂ ಓದಿ:ಕೇಸ್​ ಕೈಬಿಡಲು ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್‌ ಕಾನ್ಸ್‌ಟೇಬಲ್‌

Last Updated : Nov 25, 2022, 9:22 PM IST

ABOUT THE AUTHOR

...view details