ಕರ್ನಾಟಕ

karnataka

ETV Bharat / state

ವಿಧಾನ ಸೌಧದಲ್ಲಿ ಆತ್ಮಹತ್ಯೆ ಯತ್ನ: 3 ತಿಂಗಳು ತಡವಾಗಿತ್ತಂತೆ ರೇವಣ್ಣನ ಸಂಬಳ - undefined

ಕನಿಷ್ಠ ವೇತನಕ್ಕಾಗಿ ಒತ್ತಾಯಿಸಿ ವಿಧಾನಸೌಧದಲ್ಲಿ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಚಿಕಿತ್ಸೆ ಪಡೆಯುತ್ತಿರುವ ರೇವಣ್ಣ ಅವರ ಆರೋಗ್ಯ ವಿಚಾರಿಸಲು ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಹೊಸಮನಿ ಆಸ್ಪತ್ರೆಗೆ ದೌಡಾಯಿಸಿದ್ದರು. ಸಾರ್ವಜನಿಕ ಇಲಾಖೆಗಳ ಸ್ವಲ್ಪ ಗೊಂದಲಗಳಿಂದ ಸಂಬಳ ತಡವಾಗಿದೆ ಇದೀಗ ಸಮಸ್ಯೆ ಬಗೆಹರಿದಿದೆ ಎಂದು ಭರವಸೆ ನೀಡಿದರು.

ಗ್ರಂಥಾಲಯ

By

Published : Jun 24, 2019, 10:58 PM IST

ಬೆಂಗಳೂರು:ಕನಿಷ್ಠ ವೇತನಕ್ಕಾಗಿ ಒತ್ತಾಯಿಸಿ ವಿಧಾನಸೌಧದಲ್ಲಿ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಹೊಸಮನಿ ಚಿಕಿತ್ಸೆ ಪಡೆಯುತ್ತಿರುವ ರೇವಣ್ಣ ಅವರ ಆರೋಗ್ಯ ವಿಚಾರಿಸಲು ಬೌರಿಂಗ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಗ್ರಂಥಾಲಯ ಇಲಾಖೆ‌ ನಿರ್ದೇಶಕರ ಹೇಳಿಕೆ

ಕನಿಷ್ಠ ವೇತನ ಜಾರಿ ಆಗದಿರುವುದಕ್ಕೆ ನಿರ್ದೇಶಕ ಸತೀಶ್ ಹೊಸಮನಿ ಅವರೇ ಕಾರಣ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ರೇವಣ್ಣನ ಆರೋಗ್ಯ ವಿಚಾರಣೆ ನಡೆಸಲು ಬಂದಿದ್ದೆ. ಸದ್ಯ ರೇವಣ್ಣ ಐಸಿಯುನಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾತನಾಡಲು ವೈದ್ಯರು ಬಿಟ್ಟಿಲ್ಲ. ಕಳೆದ ಮೂರು ತಿಂಗಳ ಸಂಬಳ ಸ್ವಲ್ಪ ತಡವಾಗಿತ್ತು. ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಸಾರ್ವಜನಿಕ ಇಲಾಖೆಗಳ ಸ್ವಲ್ಪ ಗೊಂದಲಗಳಿಂದ ಸಂಬಳ ತಡವಾಗಿದೆ ಇದೀಗ ಸಮಸ್ಯೆ ಬಗೆಹರಿದಿದೆ ಎಂದರು.

ಲೈಬ್ರರಿಯನ್ಸ್ ಕಾಯಂ ನೇಮಕಾತಿ ಸರ್ಕಾರಕ್ಕೆ ಬಿಟ್ಟ ವಿಷಯ ಆ ಬಗ್ಗೆ ನನಗೇನು ಗೊತ್ತಿಲ್ಲ. ಖಾಯಂ ನೇಮಕಾತಿ ಬಗ್ಗೆ ನೀವು ಗ್ರಾಮೀಣಾಭಿವೃದ್ಧಿ ಇಲಾಖೆಯನ್ನ ಕೇಳಿ. ನಮ್ಮಿಂದ ಯಾವ ತೊಂದರೆ ಆಗಿಲ್ಲ ಎಂದು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details