ಬೆಂಗಳೂರು:ಆರಂಭದಿಂದಲೂ ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಬಂದಿದೆ. ಇದೀಗ ಮತ್ತೊಮ್ಮೆ ಮೇಯರ್, ಆಯುಕ್ತರಿಗೆ ಪತ್ರ ಬರೆದಿದ್ದು, ಯಾವುದೇ ಪ್ರಮುಖ ನಿರ್ಧಾರಗಳನ್ನು ಗಮನಕ್ಕೆ ತಾರದೇ ಮೇಯರ್ ಸ್ಥಾನಕ್ಕೆ ಅವಮಾನಿಸಲಾಗುತ್ತಿದೆ ಎಂಧು ಆರೋಪಿಸಿದ್ದಾರೆ.
ಬಿಬಿಎಂಪಿ ಆಯುಕ್ತರ ವಿರುದ್ಧ ಮೇಯರ್ ಅಸಮಾಧಾನ - ಆಯುಕ್ತ ಅನಿಲ್ ಕುಮಾರ್
ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ನೂತನ ಮೇಯರ್ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಕಳೆದ ಕೆಲ ತಿಂಗಳಿನಿಂದಲೂ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡಯುತ್ತಿದ್ದು, ಇದೀಗ ಪತ್ರ ಬರೆಯುವವರೆಗೆ ತಲುಪಿದೆ.

ಮಹಾನಗರ ಪಾಲಿಕೆಯಲ್ಲಿ ಮೇಯರ್-ಕಮಿಷನರ್ ಜಟಾಪಟಿ
ನಗರದಲ್ಲಿ ಕೊರೊನಾ ತುರ್ತು ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಪ್ರತಿನಿತ್ಯ ಕಚೇರಿಗೆ ಹಾಜರಾಗಿ ದೈನಂದಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ಆದರೆ, ಕೊರೊನಾಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಹಲವು ನಿರ್ಧಾರಗಳ ಬಗ್ಗೆ ನನ್ನೊಂದಿಗೆ ಆಯುಕ್ತರು ಚರ್ಚೆ ಮಾಡಿಲ್ಲ ಎಂದು ಮೇಯರ್ ಗೌತಮ್ ಕುಮಾರ್ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ದೂರಿದ್ದಾರೆ.