ಬೆಂಗಳೂರು: ಚಿಕ್ಕಪೇಟೆ ವ್ಯಾಪ್ತಿಯ ಹಾಳಾಗಿರುವ ರಸ್ತೆಗಳನ್ನು ತುರ್ತಾಗಿ ಸರಿಪಡಿಸುವಂತೆ ಸಂಸದ ಪಿ ಸಿ ಮೋಹನ್ ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರಿಗೆ ಪತ್ರ ಬರೆದಿದ್ದಾರೆ.
ಚಿಕ್ಕಪೇಟೆ ಸುತ್ತಲಿನ ರಸ್ತೆ ಸರಿಪಡಿಸಲು ಆಡಳಿತಾಧಿಕಾರಿಗೆ ಸಂಸದರ ಪತ್ರ - bangalore news
ಚಿಕ್ಕಪೇಟೆ ಪ್ರಮುಖ ರಸ್ತೆಗಳಲ್ಲಿ ಜಲಮಂಡಳಿ ಕಾಮಗಾರಿ ಪ್ರಾರಂಭಿಸಿದ್ದು, ರಸ್ತೆಗಳು ಹಾಳಾಗಿವೆ. ಈ ಹಿನ್ನೆಲೆ ರಸ್ತೆ ಸರಿಪಡಿಸಲು ಸಂಸದ ಪಿ ಸಿ ಮೋಹನ್ ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರಿಗೆ ಪತ್ರ ಬರೆದಿದ್ದಾರೆ.
ಚಿಕ್ಕಪೇಟೆ ಸುತ್ತಲಿನ ರಸ್ತೆ ಸರಿಪಡಿಸಲು ಆಡಳಿತಾಧಿಕಾರಿಗೆ ಸಂಸದರ ಪತ್ರ
ಚಿಕ್ಕಪೇಟೆ ಪ್ರಮುಖ ರಸ್ತೆಗಳಲ್ಲಿ ಜಲಮಂಡಳಿ ಕಾಮಗಾರಿ ಪ್ರಾರಂಭಿಸಿದ್ದು, ರಸ್ತೆಗಳು ಹಾಳಾಗಿವೆ. ಅಲ್ಲದೆ, ಈಗ ನಗರದಲ್ಲಿ ಮಳೆ ಆಗುತ್ತಿರುವುದರಿಂದ ರಸ್ತೆಗಳು ಕೆಸರುಮಯವಾಗಿದೆ. ವಾಹನ ಸವಾರರಿಗೆ ಪರದಾಡುವಂತಾಗಿದೆ. ಕೊರೊನಾದಿಂದ ಸಂಕಷ್ಟದಲ್ಲಿರುವ ವ್ಯಾಪಾರಿಗಳಿಗೂ,ಹಾಳಾದ ರಸ್ತೆಯಿಂದ ಗ್ರಾಹಕರು ಬಾರದೆ, ಇನ್ನಷ್ಟು ನಷ್ಟವಾಗಿದೆ.
ಚಿಕ್ಕಪೇಟೆಯ ಸುಲ್ತಾನ್ ಪೇಟೆ, ಹಳೆ ತರಗುಪೇಟೆ, ಬಳೇಪೇಟೆ, ಪೊಲೀಸ್ ರಸ್ತೆ, ಅಕ್ಕಿಪೇಟೆ ರಸ್ತೆಗಳನ್ನು ದುರಸ್ತಿ ಮಾಡಿ, ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು ಮನವಿ ಮಾಡಿದ್ದಾರೆ.