ಕರ್ನಾಟಕ

karnataka

By

Published : May 27, 2021, 9:10 PM IST

ETV Bharat / state

ಖರ್ಚು ಹೆಚ್ಚಾಗುತ್ತಿದೆ: ವ್ಯಾಕ್ಸಿನೇಷನ್‌ ಸೇವಾ ಶುಲ್ಕ ಹೆಚ್ಚಿಸುವಂತೆ ಫನಾ ಪತ್ರ

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್​ ವ್ಯಾಕ್ಸಿನೇಷನ್‌ ಸೇವಾ ಶುಲ್ಕ ರೂ 300 ಹೆಚ್ಚಿಸಬೇಕು. ಖರ್ಚು ಹೆಚ್ಚಾಗುತ್ತಿದೆ ಎಂದು ಕೋವಿಡ್ ಟಾಸ್ಕ್ ಫೋರ್ಸ್ ‌ಸಮಿತಿಗೆ ಫನಾ ಅಧ್ಯಕ್ಷ ಡಾ. ಪ್ರಸನ್ನ ಪತ್ರ ಬರೆದಿದ್ದಾರೆ.

ವ್ಯಾಕ್ಸಿನೇಷನ್‌ ಸೇವಾ ಶುಲ್ಕ ಹೆಚ್ಚಿಸುವಂತೆ ಫನಾ ಪತ್ರ
ವ್ಯಾಕ್ಸಿನೇಷನ್‌ ಸೇವಾ ಶುಲ್ಕ ಹೆಚ್ಚಿಸುವಂತೆ ಫನಾ ಪತ್ರ

ಬೆಂಗಳೂರು:ವ್ಯಾಕ್ಸಿನೇಷನ್‌ ಸೇವಾ ಶುಲ್ಕ ರೂ 300ಕ್ಕೆ ಹೆಚ್ಚಿಸಿ ಎಂದು ಕೋವಿಡ್ ಟಾಸ್ಕ್ ಫೋರ್ಸ್ ‌ಸಮಿತಿಗೆ ಫನಾ ಅಧ್ಯಕ್ಷ ಡಾ.ಪ್ರಸನ್ನ ಪತ್ರ ಬರೆದಿದ್ದಾರೆ.

ವ್ಯಾಕ್ಸಿನೇಷನ್‌ ಸೇವಾ ಶುಲ್ಕ ಹೆಚ್ಚಿಸುವಂತೆ ಫನಾ ಪತ್ರ

ವ್ಯಾಕ್ಸಿನ್ ಸೇವಾ ಶುಲ್ಕ ಸದ್ಯ 100 ರೂಪಾಯಿ ಮಾತ್ರ ನೀಡಲಾಗುತ್ತಿದೆ. ಈ ‌ಸೇವಾ ಶುಲ್ಕ ಸಾಕಾಗುತ್ತಿಲ್ಲ.ಪಿಪಿಇ ಕಿಟ್, ವೇಸ್ಟ್ ಮ್ಯಾನೇಜ್​ಮೆಂಟ್​​ ಖರ್ಚು ಮಾಡಬೇಕು. ವ್ಯಾಕ್ಸಿನೇಷನ್‌ ಲಾಜಿಸ್ಟಿಕ್ಸ್, ಕೋಲ್ಡ್ ಚೈ‌ನ್ ಮ್ಯಾನೇಜ್ಮೆಂಟ್ ಮಾಡಲು ಸಾಕಷ್ಟು ಹಣ ವ್ಯಯ ಮಾಡಲಾಗ್ತಿದೆ.

ವ್ಯಾಕ್ಸಿನೇಷನ್‌ ಕೇಂದ್ರದ ಸ್ಥಾಪನೆ ನಿರ್ವಹಣೆಗೆ ಖರ್ಚು ಮಾಡಲಾಗ್ತಿದೆ. ಇದೆಲ್ಲದರ ಕಾರಣದಿಂದಾಗಿ ಕನಿಷ್ಠ ರೂ 250 ರೂಪಾಯಿ ಖರ್ಚು ತಗುಲುತ್ತಿದೆ. ಹೀಗಾಗಿ ಸೇವಾ ಶುಲ್ಕವನ್ನ 300 ರೂಪಾಯಿಗೆ ಹೆಚ್ಚಿಸುವಂತೆ ಪತ್ರದ ಮುಖೇನಾ ಮನವಿ ಮಾಡಿದ್ದಾರೆ.

ಓದಿ:ವೆಬ್ ಸಿರೀಸ್ ರೂಪದಲ್ಲಿ ಯೂಟ್ಯೂಬ್​ನಲ್ಲಿ ಮಾಯಾಮೃಗ ಧಾರಾವಾಹಿ!

ABOUT THE AUTHOR

...view details