ಬೆಂಗಳೂರು : ಕೋವಿಡ್ ನಿರ್ವಹಣೆಗೆ ಸರ್ಕಾರ ನೇಮಕ ಮಾಡಿರುವ ನೋಡಲ್ ಅಧಿಕಾರಿಗಳಿಂದ ಪಾಲಿಕೆ ಸಿಬ್ಬಂದಿ ನೌಕರರಿಗೆ ಚಿತ್ರಹಿಂಸೆ ಆಗುತ್ತಿದೆ. ಹೀಗಾಗಿ ತಕ್ಷಣ ನೋಡಲ್ ಅಧಿಕಾರಿಗಳನ್ನು ಹಿಂಪಡೆಯಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಕೋವಿಡ್ ನೋಡಲ್ ಅಧಿಕಾರಿಗಳನ್ನು ಹಿಂಪಡೆಯುವಂತೆ ಪಾಲಿಕೆ ಅಧಿಕಾರಿಗಳ ಸಂಘ ಆಗ್ರಹ - Bangalore News
ನೋಡಲ್ ಅಧಿಕಾರಿಗಳು ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ ಆಡಿ ಕ್ರಮ ಜರುಗಿಸುವುದಾಗಿ ಬೆದರಿಸಿದ್ದಾರೆ. ಎರಡೆರಡು ಗಂಟೆ ಅವೈಜ್ಞಾನಿಕ ಸಭೆ ನಡೆಸಿ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಪತ್ರದಲ್ಲಿ ದೂರಿದ್ದಾರೆ.
ವಾರಕ್ಕೆ ಒಂದೂ ರಜೆ ಇಲ್ಲದೆ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು, ಸಹಾಯಕ ವೈದ್ಯರು, ಆರೋಗ್ಯ ಪರಿವೀಕ್ಷಕರು, ಹಾಗೂ ಕಂದಾಯ ಇಲಾಖೆ ಅಧಿಕಾರಿ ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ ನೋಡಲ್ ಅಧಿಕಾರಿಗಳು ಸ್ವಾಬ್ ಟೆಸ್ಟ್ ಮಾಡಿಸಲು ಗುರಿ ನಿಗದಿ ಮಾಡಿದ್ದಾರೆ. ಜನ ಟೆಸ್ಟ್ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ.
ಆದರೆ ನೋಡಲ್ ಅಧಿಕಾರಿಗಳು ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ ಆಡಿ ಕ್ರಮ ಜರುಗಿಸುವುದಾಗಿ ಬೆದರಿಸಿದ್ದಾರೆ. ಎರಡೆರಡು ಗಂಟೆ ಅವೈಜ್ಞಾನಿಕ ಸಭೆ ನಡೆಸಿ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ. ಹೀಗಾಗಿ ನೋಡಲ್ ಅಧಿಕಾರಿಗಳನ್ನು ವಾಪಸು ಪಡೆಯಬೇಕು. ಪಾಲಿಕೆ ಅಧಿಕಾರಿಗಳು ಹಾಗೂ ನೌಕರರಿಗೆ ವಾರಕ್ಕೆ ಒಂದು ದಿನವಾದರೂ ರಜೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.