ಬೆಂಗಳೂರು:ಮಂಗಳವಾರ ವಿಧಾನ ಪರಿಷತ್ ಸಭೆಯನ್ನು ಕರೆಯುವಂತೆ ಕೋರಿ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ವಿಧಾನ ಪರಿಷತ್ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಈಗಾಗಲೇ ಸರ್ಕಾರವು ನಿಗದಿಪಡಿಸಿದ ಕಾರ್ಯಕಲಾಪಗಳ ಪಟ್ಟಿಯಂತೆ ಡಿಸೆಂಬರ್ 15ರವರೆಗೆ ವಿಧಾನ ಪರಿಷತ್ತಿನ ಸಭೆ ನಡೆಯಬೇಕಿದೆ. ವಿಧಾನ ಪರಿಷತ್ ಬಿಎಸಿಯಲ್ಲಿ ತೀರ್ಮಾನ ಆಗದ ಕಾರಣ, ಪರಿಷತ್ತಿನಲ್ಲಿ ಸಭಾಪತಿಗಳು ನಿರ್ಧಾರ ಕೈಗೊಳ್ಳಲು ಅಸಮ್ಮತಿ ಸೂಚಿಸಿದ್ದರಿಂದ ಸಭೆಯನ್ನು ಈ ಹಿಂದೆ ನಿಗದಿ ಮಾಡಿದಂತೆ ಡಿ.15ರವರೆಗೆ ಮುಂದುವರೆಸುವಂತೆ ಸರ್ಕಾರದಿಂದ ನಿರ್ದೇಶಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.