ಬೆಂಗಳೂರು: ಬೃಹತ್ ಬೆಂಗಳೂರು ಹೊಟೇಲ್ ಗಳ ಸಂಘ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪತ್ರ ಬರೆದು ಹಲವು ಮನವಿಗಳನ್ನು ಸಲ್ಲಿಸಿದೆ. ಕೋವಿಡ್ನಿಂದ ಮೊದಲೇ ಉದ್ಯಮ ನೆಲಕಚ್ಚಿದ್ದು, ಇದರ ಚೇತರಿಕೆಗೆ ಹಾಗೂ ಸರ್ಕಾರಕ್ಕೆ ಹೆಚ್ಚು ಆದಾಯ ಬರುವಂತಾಗಲು, ನಿರುದ್ಯೋಗ ಸಮಸ್ಯೆ ಬಗೆಹರಿಯಲು, ಉದ್ಯಮ ಬೆಳೆಯಲು ಕೆಲವು ಬೇಡಿಕೆಗಳನ್ನು ಮುಂದಿಟ್ಟಿವೆ.
ಬೆಂಗಳೂರು ಹೊಟೇಲುಗಳ ಸಂಘದಿಂದ ಕೇಂದ್ರ ಹಣಕಾಸು ಸಚಿವೆಗೆ ಪತ್ರ : GST ವಿನಾಯಿತಿಗೆ ಮನವಿ
ಕೋವಿಡ್ನಿಂದ ಮೊದಲೇ ಉದ್ಯಮ ನೆಲಕಚ್ಚಿದ್ದು, ಇದರ ಚೇತರಿಕೆಗೆ ಹಾಗೂ ಸರ್ಕಾರಕ್ಕೆ ಹೆಚ್ಚು ಆದಾಯ ಬರುವಂತಾಗಲು, ನಿರುದ್ಯೋಗ ಸಮಸ್ಯೆ ಬಗೆಹರಿಯಲು ಬೃಹತ್ ಬೆಂಗಳೂರು ಹೊಟೇಲ್ ಗಳ ಸಂಘ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪತ್ರ ಬರೆದಿದ್ದಾರೆ.
ಬೆಂಗಳೂರು ಹೊಟೇಲುಗಳ ಸಂಘದಿಂದ ಕೇಂದ್ರ ಹಣಕಾಸು ಸಚಿವೆಗೆ ಪತ್ರ
ಪ್ರಮುಖ ಬೇಡಿಕೆಗಳು ಹೀಗಿವೆ.
- 1) ಕಟ್ಟಡದ ಬಾಡಿಗೆ ಮೇಲಿನ ಜಿಎಸ್ ಟಿ ಯನ್ನು 18 ರಿಂದ 5% ಗೆ ಇಳಿಸಬೇಕು.
- 2) ವಾಣಿಜ್ಯ ಗ್ಯಾಸ್ ಜಿಎಸ್ ಟಿಯನ್ನು 18% ರಿಂದ 5% ಗೆ ಇಳಿಸಬೇಕು.
- 3) ಪೆಟ್ರೋಲ್, ಡೀಸೆಲ್ ಕೂಡಾ ಜಿಎಸ್ ಟಿ ಅಡಿಗೆ ತರಬೇಕು.
- 4) ನೀರಿನ ಟ್ಯಾಂಕರ್ ಮೇಲೆ ವಿಧಿಸುವ ಜಿಎಸ್ ಟಿ ಬಗ್ಗೆ ಗೊಂದಲಗಳಿರುವುದರಿಂದ ಇದನ್ನು ರದ್ದು ಮಾಡಬೇಕು.
- 5) ಪರವಾನಗಿ ಇರುವ ಬೆಲೆಗಳ ಮೇಲಿನ ಎಲ್ಲಾ ಜಿಎಸ್ ಟಿಯನ್ನು ಶೂನ್ಯಕ್ಕೆ ಇಳಿಸಬೇಕು.
- 6) ಜಿಎಸ್ ಟಿ ಪಾವತಿಸುವಲ್ಲಿ ತಪ್ಪುಗಳಾದರೆ, ಮೊದಲ ಎರಡು ವರ್ಷ ದಂಡ ಹಾಗೂ ಬಡ್ಡಿಯಲ್ಲಿ ವಿನಾಯಿತಿ ನೀಡಬೇಕು.
- 7) ಆಸ್ತಿತೆರಿಗೆ ಹೆಚ್ಚಳ ಹಿಂಪಡೆದು, ಮುಂದಿನ ೨ ವರ್ಷ ಯಾವುದೇ ಕಾರಣಕ್ಕೂ ಹೆಚ್ಚಳ ಮಾಡಬಾರದು.
- 8) ವೈದ್ಯಕೀಯ ಸೌಲಭ್ಯ, ಸರಿಯಾದ ರಸ್ತೆ ನಿರ್ಮಾಣ, ಜನಸಾಮಾನ್ಯರ ಸುರಕ್ಷತೆ ಕಡೆ, ಹಾಗೂ ಅನಗತ್ಯವಾಗಿ ಕೆಲವೊಂದು ಇಲಾಖೆಗಳಿಂದ ಆಗುವ ತೊಂದರೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಿವೆ.