ಕರ್ನಾಟಕ

karnataka

ETV Bharat / state

ಪಕ್ಷದ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದೆ ಹೋಗೋಣ: ದೇವೇಗೌಡ - HD devegowda news

ನನ್ನಲ್ಲೇ ಗೊಂದಲಗಳಿವೆ, ತಪ್ಪು ಗ್ರಹಿಕೆ ಬೇಡ. ಮುಂದೆ ಹೋರಾಟ ಮಾಡೋಣ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೆಲವು ಕಡೆ ಮೊದಲ ಸ್ಥಾನ, ಕೆಲವು ಕಡೆ ಮೂರನೇ ಸ್ಥಾನದಲ್ಲಿದೆ. ಶಕ್ತಿ ಇಲ್ಲ, ಹಿಂದೆ ಬಿದ್ದಿದೆ ಎಂಬ ಭಾವನೆ ಬೇಡ. ವಾಸ್ತವಾಂಶ ಬೇರೆ ಇದೆ ಎಂದು ಹೆಚ್.ಡಿ.ದೇವೇಗೌಡರು ಕಾರ್ಯಕರ್ತರಿಗೆ ಶಕ್ತಿ ತುಂಬಿದರು.

H D Deveowda
ಹೆಚ್.ಡಿ. ದೇವೇಗೌಡ

By

Published : Jan 7, 2021, 3:01 PM IST

Updated : Jan 7, 2021, 4:04 PM IST

ಬೆಂಗಳೂರು: ಪಕ್ಷದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಿಕೊಂಡು ಮುಂದೆ ಹೋಗೋಣ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕರೆದಿರುವ ಸಂಘಟನಾ ಸಭೆಯಲ್ಲಿ ಇಂದು ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಮುಂಬರುವ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಬೇಕು. ಜೊತೆಗೆ 2023ಕ್ಕೆ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಅಧಿಕಾರ ಹಿಡಿಯಬೇಕು. ಅದಕ್ಕಾಗಿ ಪಕ್ಷ ಸಂಘಟನೆ, ಹೋರಾಟ ಮಾಡೋಣ ಎಂದು ಹೇಳಿದರು.

ಜೆಪಿ ಭವನದಲ್ಲಿ ಕರೆದಿರುವ ಸಂಘಟನಾ ಸಭೆ

ನನ್ನಲ್ಲೇ ಗೊಂದಲಗಳಿವೆ, ತಪ್ಪು ಗ್ರಹಿಕೆ ಬೇಡ. ಮುಂದೆ ಹೋರಾಟ ಮಾಡೋಣ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೆಲವು ಕಡೆ ಮೊದಲ ಸ್ಥಾನ, ಕೆಲವು ಕಡೆ ಮೂರನೇ ಸ್ಥಾನದಲ್ಲಿದೆ. ಶಕ್ತಿ ಇಲ್ಲ, ಹಿಂದೆ ಬಿದ್ದಿದೆ ಎಂಬ ಭಾವನೆ ಬೇಡ. ವಾಸ್ತವಾಂಶ ಬೇರೆ ಇದೆ ಎಂದರು.

ಸರ್ಕಾರ ಯಾರು ತಗೆದರು, ಯಾಕೆ ಹೋಯ್ತು ಎಂದು ಕಾಲಹರಣ ಮಾಡೋದು ಬೇಡ. ಯಡಿಯೂರಪ್ಪನವರ ಬಗ್ಗೆ ಚರ್ಚೆ ಅಪ್ರಸ್ತುತ. ನಮ್ಮ ಪಕ್ಷ ಸಂಘಟನೆ ನನಗೆ ಮುಖ್ಯ. ನಮ್ಮ ಪಕ್ಷವನ್ನು ಕಟ್ಟಬೇಕಿದೆ ಎಂದ ಅವರು, ಅರಮನೆ ಮೈದಾನದಲ್ಲಿ ಜೆಡಿಎಸ್ ಸಂಘಟನಾ ಸಭೆ ಮಾಡಬೇಕಿತ್ತು. ಬ್ರಿಟನ್ ವೈರಸ್ ಹರಡುತ್ತಿದೆ ಎಂಬ ಕಾರಣಕ್ಕೆ ಸರ್ಕಾರ ಅನುಮತಿ ಕೊಡುವುದಿಲ್ಲ ಎಂದು ಜೆಡಿಎಸ್ ಕಚೇರಿಯಲ್ಲಿ ಸಭೆ ಮಾಡಬೇಕಾಯಿತು. ಕೆಲವೊಂದು ಜಿಲ್ಲೆಗಳಲ್ಲಿ ನಾವು ಮೊದಲನೇ ಸ್ಥಾನದಲ್ಲಿದ್ದೇವೆ. ಬೇರೆ ಜಿಲ್ಲೆಗಳಲ್ಲಿ ಎರಡು, ಮೂರನೇ ಸ್ಥಾನದಲ್ಲಿ ನಾವು ಇದ್ದೇವೆ ಎಂದರು.

Last Updated : Jan 7, 2021, 4:04 PM IST

ABOUT THE AUTHOR

...view details