ಬೆಂಗಳೂರು: ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನ ರಾಜರಾಜೇಶ್ವರಿನಗರದ ಪೊಲೀಸರು ಬಂಧಿಸಿದ್ದಾರೆ.
ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿ ಬಂಧನ: ಆಟೋ ಸೇರಿದಂತೆ ಮಾರಕಾಸ್ತ್ರಗಳು ವಶಕ್ಕೆ - Lethal weapons Sale
ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನ ರಾಜರಾಜೇಶ್ವರಿನಗರದ ಪೊಲೀಸರು ಬಂಧಿಸಿದ್ದಾರೆ. ಈತನನ್ನ ವಿಚಾರಣೆಗೆ ಒಳಪಡಿಸಿದಾಗ ಮಾರಕ ವಸ್ತುಗಳಾದ ಚೂರಿ, ಲಾಂಗುಗಳು ಸಿಕ್ಕಿವೆ ಎನ್ನಲಾಗ್ತಿದೆ.
ವ್ಯಕ್ತಿಯ ಬಂಧನ: ಆಟೋ ಸೇರಿದಂತೆ ಮಾರಕಾಸ್ತ್ರಗಳು ವಶಕ್ಕೆ
ಜವರೇಗೌಡ ನಗರ ನಿವಾಸಿ ಮನು ಬಂಧಿತ ಆರೋಪಿ. ಈತನನ್ನ ವಿಚಾರಣೆಗೆ ಒಳಪಡಿಸಿದಾಗ ಮಾರಕ ವಸ್ತುಗಳಾದ ಚೂರಿ, ಲಾಂಗುಗಳು ಸಿಕ್ಕಿವೆ. ಅಲ್ಲದೇ ಆರೋಪಿ ರಾಜರಾಜೇಶ್ವರಿನಗರದಲ್ಲೆ ಕಳವು ಮಾಡಿದ್ದು, ಬೆಳಕಿಗೆ ಬಂದಿದೆ.
ಸದ್ಯ ಆರೋಪಿಯಿಂದ ಕಳವು ಮಾಡಿದ್ದ 4 ಲಕ್ಷ ರೂ. ಬೆಲೆ ಬಾಳುವ ಆಟೋ, ಮಾರಕ ವಸ್ತುಗಳು ಹಾಗೂ 8 ಮೊಬೈಲ್‌ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.