ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೊರೊನಾ ರೋಗದಿಂದ ಶೀಘ್ರ ಗುಣಮುಖವಾಗಲೆಂದು ಹಾಗೂ ರಾಜ್ಯ, ದೇಶ ಈ ಮಹಾಮಾರಿಯಿಂದ ಮುಕ್ತವಾಗಲೆಂದು ಶಾಸಕ ಜಮೀರ್ ಅಹಮದ್ ಖಾನ್ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯ ಗುಣಮುಖರಾಗಲು ಅಕ್ಕಿಪೇಟೆ ಮಸೀದಿಯಲ್ಲಿ ಜಮೀರ್ ಅಹ್ಮದ್ ಖಾನ್ ಪ್ರಾರ್ಥನೆ - Pray for healing from Siddaramaiah Corona
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೊರೊನಾ ರೋಗದಿಂದ ಶೀಘ್ರ ಗುಣಮುಖವಾಗಲೆಂದು ಶಾಸಕ ಜಮೀರ್ ಅಹಮದ್ ಖಾನ್ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಶಾಸಕ ಅಹಮದ್ ಖಾನ್ರಿಂದ ವಿಶೇಷ ಪ್ರಾರ್ಥನೆ
ಇಂದು ಬೆಂಗಳೂರಿನ ಕಾಟನ್ಪೇಟೆಯ ಅಕ್ಕಿಪೇಟೆ ಮುಖ್ಯ ರಸ್ತೆಯಲ್ಲಿರುವ ತವಕಲ್ ಮಸ್ತಾನ್ ದರ್ಗಾ (ಮಸ್ತಾನ್ ಸಾಬಿ ದರ್ಗಾ)ದಲ್ಲಿ ಜಮೀರ್ ಅಹಮದ್ ಖಾನ್ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದರ್ಗಾದ ಧರ್ಮ ಗುರುಗಳು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಗ ಗುಣಮುಖರಾಗಲಿ ಎಂದು ಜಮೀರ್ ಅಹಮ್ಮದ್ ಖಾನ್ ಅವರು ಇಂದು ಪ್ರಾರ್ಥನೆ ಸಲ್ಲಿಸಿದ ನಂತರ ಎಲ್ಲರಿಗೂ ಉಚಿತ ಮಧ್ಯಾಹ್ನದ ಭೋಜನ ವಿತರಣೆ ಮಾಡಿದರು. ರಾಜ್ಯ, ದೇಶ ಅತೀ ಶೀಘ್ರವೇ ಕೊರೊನಾ ಮುಕ್ತ ದೇಶವಾಗಲೆಂದು ಪ್ರಾರ್ಥನೆ ಸಲ್ಲಿಸಿದರು.