ಬೆಂಗಳೂರು: ಬಿಜೆಪಿ ಶಾಸಕರ ದುರ್ವರ್ತನೆಯಿಂದ ಅನೇಕ ಸಾವುಗಳು ಆಗುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಪ್ರದೀಪ್ ಆತ್ಮಹತ್ಯೆ ವಿಚಾರ ಮಾತನಾಡಿದ ಅವರು,ಇದನ್ನ ಕೊನೆ ಮಾಡಬೇಕು. ಇದಕ್ಕಾಗಿ ಜನರ ದ್ವನಿ, ಭಾವನೆ ತಿಳಿಸಬೇಕಾಗಿದೆ. ಕಾನೂನು ಬದ್ಧವಾಗಿ ಹೋರಾಟ ಮಾಡಬೇಕಿದೆ. ಕಾನೂನಿನ ಶಿಕ್ಷೆಗೆ ಒಳಗಾಗಲೇಬೇಕಿದೆ. ಲಿಂಬಾವಳಿ ಬೇರೆ ಅಲ್ಲ.. ಡಿಕೆಶಿ ಬೇರೆ ಅಲ್ಲ. ಈ ಸರ್ಕಾರ ಎಲ್ಲರನ್ನೂ ರಕ್ಷಣೆ ಮಾಡ್ಕೊಂಡು ಬಂದಿದೆ ಎಂದು ಹೇಳಿದರು.
ಸರ್ಕಾರ ಲಂಚಕ್ಕೆ, ಮಂಚಕ್ಕೆ, ಇಂತಹ ಸಾವಿಗೆ ರಕ್ಷಣೆ ಮಾಡಿಕೊಂಡು ಬಂದಿದೆ. ಇನ್ನೊಂದು 60 ದಿನ ತಡೆದುಕೊಳ್ಳಿ. ‘‘ಅವರ ಹುಡ್ಗ ಅವನು.. ನಾವೇನಾದರೂ ಬರೆಸಿದ್ದೀವಾ? ನಾವೇನಾದರೂ ಷಡ್ಯಂತ್ರದಲ್ಲಿ ಭಾಗಿಯಾಗಿದ್ದರೆ ಅಂತಾ ಹೇಳಲಿ. ಕಾಂಗ್ರೆನ್ನ ಸಿದ್ದರಾಮಯ್ಯ, ಡಿಕೆಶಿವಕುಮಾರ್ ಯಾರಾದರೂ ಇದ್ದರೆ ಹೇಳಲಿ. ನೋ ಪ್ರಾಬ್ಲಂ. ನಾವ್ಯಾರು ಇದರಲ್ಲಿ ಭಾಗಿಯಾಗಿಲ್ಲ. ಅವನು ಕಾಗದ ಬರೆದಿದ್ದಾನೆ ಎರಡು ಮೂರು ಪೇಜ್. ಎಲ್ಲರಿಗೂ ಏನು ಕಾನೂನು ಇದೆ ಅದರಂತೆ ತನಿಖೆಗೊಳಗಾಗಬೇಕು, ಶಿಕ್ಷೆ ಗೊಳಗಾಬೇಕು’’ ಎಂದು ಹೇಳಿದರು.
ಸಿದ್ದೇಶ್ವವರ ಶ್ರೀಗಳ ಅಂತಿಮ ದರ್ಶನ: ನಡೆದಾಡುವ ದೇವರು, ಜ್ಞಾನ ಯೋಗಿ ಎಂದೇ ಖ್ಯಾತರಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ಕಾಂಗ್ರೆಸ್ ಪಕ್ಷದ ಪರವಾಗಿ ನಾನು ಭಾಗಿಯಾಗುತ್ತಿದ್ದೇನೆ ಎಂದು ತಿಳಿಸಿದರು.