ಕರ್ನಾಟಕ

karnataka

ETV Bharat / state

ಬೆಂಗಳೂರು ನಗರದ ಅಪಾರ್ಟ್​ಮೆಂಟ್​ಗಳ ಬಳಿ ಸುಳಿದಾಡುತ್ತಿರುವ ಚಿರತೆ! - ಬೆಂಗಳೂರಿನಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ

ಬೆಂಗಳೂರಿನ ಅಪಾರ್ಟ್​ಮೆಂಟ್​ಗಳ ಬಳಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.

leopard roaming near bengaluru apartments
ಚಿರತೆ ಭಯ

By

Published : Jan 30, 2021, 7:16 PM IST

ಆನೇಕಲ್: ತಮಿಳುನಾಡು-ಆನೇಕಲ್ ವ್ಯಾಪ್ತಿಯ ಕಾಡಿಂದ ಚಿರತೆಯೊಂದು ನಗರದ ಹುಳಿಮಾವು-ಬೇಗೂರು-ಬಿಳೇಕಳ್ಳಿ ಭಾಗದ ಅಪಾರ್ಟ್​ಮೆಂಟ್​ಗಳ ಬಳಿ ಸುಳಿದಾಡಿರುವುದು ಖಚಿತವಾಗಿರುವುದರಿಂದ ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

ಚಿರತೆ ಆತಂಕ

ಬೇಗೂರಿನ ಎಲೇನಹಳ್ಳಿ ಬಳಿ ಒಂದು ವಾರದಿಂದ ಕಾಣಿಸಿಕೊಳ್ಳುತ್ತಿರುವ ಚಿರತೆ ಓಡಾಡುವಿಕೆಯನ್ನು ಅಪಾರ್ಟ್​ಮೆಂಟ್​ನ ಸಿಸಿಟಿವಿ ಕ್ಯಾಮರಾದ ದೃಶ್ಯಗಳು ದೃಢಪಡಿಸಿವೆ. ಇದೀಗ ಸುತ್ತಮುತ್ತಲಿನ ನಿವಾಸಿಗಳ ಕಣ್ಣಿಗೆ ಸಹ ಚಿರತೆ ಕಾಣಿಸಿಕೊಂಡಿದೆ.

ಚಿರತೆ ಪ್ರತ್ಯಕ್ಷವಾದ ಜಾಗದಲ್ಲಿ ಹೆಜ್ಜೆ ಗುರುತುಗಳು ಹಾಗೂ ಕೂದಲು ಕಾಣಿಸಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಅರಣ್ಯ ಇಲಾಖೆಯ ಸಿಬ್ಬಂದಿಯಲ್ಲಿ ಅಪಾರ್ಟ್​ಮೆಂಟ್​ ನಿವಾಸಿಗಳು ಮನವಿ ಮಾಡಿದ್ದಾರೆ. ಎರಡು ದಿನಗಳ‌ ಹಿಂದಷ್ಟೇ ‌ಚಿರತೆ ಹಿಡಿಯಲು ಬೋನ್ ಇಟ್ಟು ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಇದೀಗ ಮತ್ತೊಂದು ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿಯಲು ಏಳು ಜನರ ತಂಡ ಹಗಲು - ರಾತ್ರಿ ಶಿಫ್ಟ್ ವೈಸ್ ಕಾರ್ಯಾಚರಣೆಗಿಳಿದಿವೆ. ಬೆಳಗಿನ ಜಾವ ಬೇಗೂರಿನ ಪ್ರೆಸ್ಟೀಜ್ ಗ್ರೂಪ್ ಬಳಿ ಕಾಣಿಸಿಕೊಂಡ ಚಿರತೆಗಾಗಿ ಅರಣ್ಯಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಶೋಧ ಕಾರ್ಯಾ ಮುಂದುವರೆಸಿದ್ದಾರೆ. ಅಪಾರ್ಟ್​ಮೆಂಟ್​​ನಲ್ಲಿ ವಾಸವಿರುವ ಜನರು ಸದ್ಯ ಹೊರ ಬರದಂತೆ ಪೊಲೀಸರು ಸೂಚಿಸಿದ್ದಾರೆ.

ABOUT THE AUTHOR

...view details