ಕರ್ನಾಟಕ

karnataka

ETV Bharat / state

ತಾಂಡೇನಪುರದಲ್ಲಿ ಚಿರತೆಯ ಆರ್ಭಟ:  ಅಧಿಕಾರಿಗಳ ವಿರುದ್ದ ಸ್ಥಳೀಯರ ಆಕ್ರೋಶ - ತಾಂಡೇನಪುರದಲ್ಲಿ ಚಿರತೆಯ ಆರ್ಭಟ: ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಸ್ಥಳೀಯರ ಆಕ್ರೋಶ

ತಾಂಡೇನುಪುರ ಗ್ರಾಮದ ಪಕ್ಕದಲ್ಲಿರುವ ಬೆಟ್ಟ ಹಲವು ವರ್ಷಗಳಿಂದ  ಚಿರತೆಯ ವಾಸ ಸ್ಥಾನವಾಗಿದೆ. ಸಾರ್ವಜನಿಕರ ಪ್ರಕಾರ ಈ ಬೆಟ್ಟದಲ್ಲಿ 2 ಚಿರತೆಗಳಿದ್ದು, ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ, ಏನೂ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಕೇವಲ ಜಾಣಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Leopard appearing in Tandenapura
ತಾಂಡೇನಪುರದಲ್ಲಿ ಚಿರತೆಯ ಆರ್ಭಟ: ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಸ್ಥಳೀಯರ ಆಕ್ರೋಶ

By

Published : Apr 15, 2020, 5:50 PM IST

ನೆಲಮಂಗಲ: ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸೋಲೂರು ಹೋಬಳಿಯ ತಾಂಡೇನಪುರ ಗ್ರಾಮದಲ್ಲಿ ಚಿರತೆಯ ಆರ್ಭಟಕ್ಕೆ ರೈತರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.

ತಾಂಡೇನಪುರದಲ್ಲಿ ಚಿರತೆಯ ಆರ್ಭಟ
ತಾಂಡೇನುಪುರ ಗ್ರಾಮದ ಪಕ್ಕದಲ್ಲಿರುವ ಬೆಟ್ಟ ಹಲವು ವರ್ಷಗಳಿಂದ ಚಿರತೆಯ ವಾಸ ಸ್ಥಾನವಾಗಿದೆ. ಈಗಾಗಲೇ ಜಾನುವಾರುಗಳು. ಮೇಕೆಗಳನ್ನು ತಿಂದಿರುವ ಚಿರತೆ ಯಾವಾಗ ಜನರ ಮೆಲೆ ದಾಳಿ ಮಾಡುತ್ತದೆಯೋ ಎಂಬ ಆತಂಕದಲ್ಲಿ ಇಲ್ಲಿಯ ಜನರು ಜೀವನ ಸಾಗಿಸುತ್ತಿದ್ದಾರೆ. ಈ ಗ್ರಾಮ ನೆಲಮಂಗಲ ವಿಧಾನಸಭಾ ವ್ಯಾಪ್ತಿಗೆ ಒಳಪಟ್ಟಿದ್ದು, ಅರಣ್ಯ ಇಲಾಖೆ ಮಾಗಡಿ ತಾಲೂಕಿಗೆ ಬರುತ್ತದೆ. ಸಾರ್ವಜನಿಕರ ಪ್ರಕಾರ ಈ ಬೆಟ್ಟದಲ್ಲಿ 2 ಚಿರತೆಗಳಿದ್ದು, ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ, ಏನೂ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಕೇವಲ ಜಾಣಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೆಲ ದಿನಗಳ ಹಿಂದೆ ತುಮಕೂರು ಜಿಲ್ಲೆ ಹೆಬ್ಬುರಿನ ಬಳಿ ಮಗುವಿನ ಮೇಲೆ ಚಿರತೆ ದಾಳಿ ಮಾಡಿ ಮಗು ಸಾವಿಗೀಡಾಗಿದ್ದು, ಗೊತ್ತಿದ್ದರೂ ಮಾಗಡಿ ತಾಲೂಕಿನ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ನಾವು ಮನೆಯಿಂದ ಹೊರ ಬಂದು ಜಾನುವಾರುಗಳನ್ನು ಮೇಯಿಸಲು, ಹೊಲಗಳ ಕಡೆ ಹೋಗಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾದೆ. ಈಗಲಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ನಮ್ಮ ಗ್ರಾಮದಲ್ಲಿ ತೊಂದರೆ ಕೊಡುತ್ತಿರುವ ಚಿರತೆಯಿಂದ ನಮಗೆ ಮುಕ್ತಿ ನೀಡಿ ಎಂದು ಎಂದು ತಾಂಡೇನಪುರ ಗ್ರಾಮಸ್ಥರು ಮನವಿ ಮಾಡಿದ್ದಾರೆ.


ABOUT THE AUTHOR

...view details