ಕರ್ನಾಟಕ

karnataka

ETV Bharat / state

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ಶಾಸಕ ಅರವಿಂದ ಲಿಂಬಾವಳಿ - distributed charter

ಮಹದೇವಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗದಲ್ಲಿ ಸುಮಾರು 20 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಬಡ ಜನರಿಗೆ ಸರ್ಕಾರದ ವತಿಯಿಂದ ಶಾಸಕ‌ ಅರವಿಂದ ಲಿಂಬಾವಳಿಯವರು ಹಕ್ಕುಪತ್ರ ವಿತರಿಸಿದರು.

ಫಲಾನುಭವಿಗಳಿಗೆ ಹಕ್ಕುಪತ್ರ ವಿವರಿಸಿದ ಶಾಸಕ ಅರವಿಂದ ಲಿಂಬಾವಳಿ

By

Published : Oct 11, 2019, 5:22 AM IST

Updated : Oct 11, 2019, 6:14 AM IST

ಬೆಂಗಳೂರು/ಮಹದೇವಪುರ:ಶಾಸಕ ಅರವಿಂದ ಲಿಂಬಾವಳಿ ಅವರು ಮಹದೇವಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಸವಿದ್ದ ಸುಮಾರು 44 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿದರು.

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ಶಾಸಕ ಅರವಿಂದ ಲಿಂಬಾವಳಿ

ಬಳಿಕ ಮಾತನಾಡಿದ ಅವರು, ಅಂಬೇಡ್ಕರ್‌ ನಗರವಾಸಿಗಳಿಗೆ ದಸರಾ ಹಬ್ಬದ ಅಂಗವಾಗಿ 94 ಸಿಸಿ ಅಡಿಯಲ್ಲಿ 44 ಹಕ್ಕು ಪತ್ರ ವಿತರಿಸಲಾಯಿತು. ಇನ್ನೂ ಉಳಿದ 101 ಹಕ್ಕು ಪತ್ರಗಳನ್ನುಆದಷ್ಟು ಶೀಘ್ರದಲ್ಲಿ ವಿತರಿಸಲಾಗುವುದು. ಈ ಭಾಗದಲ್ಲಿ ವಾಸಿಸುವ ಬಡ ಜನರಿಗೆ ಮನೆಯಿಲ್ಲದವರಿಗೆ ಮನೆ ಹಾಗೂ ಮನೆ ಕಟ್ಟಿಕೊಂಡಿರುವ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೋಲಾರ ಸಂಸದ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರಾದ ಎಸ್.ಮುನಿಸ್ವಾಮಿ ಮಾತನಾಡಿ, ಅಂಬೇಡ್ಕರ್‌ನಗರ ಗುಡ್ಡದ ನಿವಾಸಿಗಳಿಗೆ ಸುಮಾರು ವರ್ಷಗಳಿಂದ ನೆನೆಗುಂದಿಗೆ ಬಿದ್ದಿದ್ದ ಹಕ್ಕು ಪತ್ರ ನಮ್ಮ ಬಿಜೆಪಿ ಸರ್ಕಾರದ ವತಿಯಿಂದ ನೀಡಲಾಯಿತೆಂದು ತಿಳಿಸಿದರು.

Last Updated : Oct 11, 2019, 6:14 AM IST

ABOUT THE AUTHOR

...view details