ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ) ಖಾಲಿ ಇರುವ ಹುದ್ದೆ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಕಾನೂನು ಸಲಹೆಗಾರರ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎರಡು ವರ್ಷಗಳ ಅವಧಿಗೆ ಈ ನೇಮಕಾತಿ ನಡೆಯಲಿದೆ. ಕಾನೂನು ಪದವೀಧರ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ, ಅರ್ಜಿ ಸಲ್ಲಿಕೆ ಸೇರಿದಂತೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಹುದ್ದೆ ವಿವರ: ಕೆಪಿಎಸ್ಸಿಯಲ್ಲಿನ ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗೆ ಕಾನೂನು ಸಲಹೆಗಾರರ ಹುದ್ದೆ
ಅರ್ಹತೆ:ಈ ಹುದ್ದೆಗೆ ಹೆಚ್ಚಿನ ಅನುಭವ ಇರುವ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ನೇಮಕ ಮಾಡಲಾಗವುದು.
ಈ ಹುದ್ದೆಯನ್ನು ಎರಡು ವರ್ಷದ ಅವಧಿಗೆ ಮಾತ್ರ ನೇಮಕಾತಿ ಮಾಡಲಾಗುವುದು. ಮೊದಲ ಒಂದು ವರ್ಷದ ಕಾರ್ಯದಕ್ಷತೆ ಆಧಾರದ ಮೇಲೆ ಮುಂದಿನ ಒಂದು ವರ್ಷದ ಸೇವಾ ಅವಧಿ ವಿಸ್ತರಣೆ ಆಗಲಿದೆ.
ವೇತನ: ಈ ಹುದ್ದೆಗೆ ಮಾಸಿಕ 1,15,000 ವೇತನ ಮತ್ತು ವಾಹನ ಭತ್ಯೆ 35,000 ರೂ. ನಿಗದಿಸಲಾಗಿದೆ.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 65 ವರ್ಷ ಆಗಿದೆ.