ಕರ್ನಾಟಕ

karnataka

ETV Bharat / state

ಬಾಡಿಗೆಗೆ ಇದ್ದ ಮನೆಯನ್ನೇ ಲೀಸ್​ಗೆ ಕೊಟ್ಟ ಭೂಪ.. ವಿಷ್ಯ ತಿಳಿದು ಮನೆ ಮಾಲೀಕನಿಗೆ ಶಾಕ್​ - Bengaluru News

ಬಾಡಿಗೆಗೆ ಇದ್ದ ಮನೆಯನ್ನು ಬೇರೊಂದು ಕುಟುಂಬಕ್ಕೆ ಲೀಸ್​ ಕೊಟ್ಟು, ಅವರಿಂದ ಹಣದ ಪಡೆದಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಆರೋಪಿ ಮನೋಹರ್
ಆರೋಪಿ ಮನೋಹರ್

By

Published : Oct 9, 2020, 3:34 PM IST

Updated : Oct 9, 2020, 4:27 PM IST

ಬೆಂಗಳೂರು: ನಗರದಲ್ಲಿ ಮನೆ ಲೀಸ್​ಗೆ ಪಡೆಯುವವರು ಈ ಸುದ್ದಿ ಓದಲೇಬೇಕು. ಏಕೆಂದರೆ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 40ಕ್ಕೂ ಹೆಚ್ಚು ಮನೆ ಮಂದಿ ಲೀಸ್​ಗೆ ಪಡೆದವರು ಈಗ ಬೀದಿಗೆ ಬೀಳುವ ಫಜೀತಿಗೆ ಸಿಲುಕಿದ್ದಾರೆ.

ಬಾಣಸವಾಡಿಯ ನಾನ್ಸಿ ಕುಟುಂಬ ಮನೆಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಬ್ರೋಕರ್ ರಂಜನ್ ಎಂಬಾತನ ಮೂಲಕ ಮನೋಹರ್ ಎಂಬವರ ಪರಿಚಯವಾಗಿತ್ತು. ಆತ 2018ರಲ್ಲಿ ಹೊರಮಾವು ಬಳಿಯ ಜಯಂತಿ ನಗರದಲ್ಲಿರುವ ಮನೆಯನ್ನ ತೋರಿಸಿದ್ದ. ಆ ವೇಳೆ 36 ಲಕ್ಷದ 50 ಸಾವಿರ ರೂ.ಗೆ ಮನೆಯನ್ನ ನಾನ್ಸಿ ಹಾಗೂ ಸತೀಶ್ ದಂಪತಿ ಭೋಗ್ಯಕ್ಕೆ ಪಡೆದಿದ್ದರು. ಸದ್ಯ ಮನೆ ಮಾಲೀಕ ಇದೀಗ ಮನೆ ಖಾಲಿ ಮಾಡಿ ಅಂದಾಗ ದಂಪತಿಗೆ ಫುಲ್ ಶಾಕ್ ಆಗಿದೆ. ಯಾಕಂದ್ರೆ ಆರೋಪಿ ಮನೋಹರ್ ಅದೇ ಮನೆಯನ್ನ ಬಾಡಿಗೆಗೆ ಪಡೆದುಕೊಂಡಿದ್ದ ಎನ್ನಲಾಗ್ತಿದೆ.

ಆರೋಪಿ ಮನೋಹರ್ ಅಲ್ಲಿ ವಾಸವಿರದೇ ಆ ಮನೆಯನ್ನ ನಾನ್ಸಿ ದಂಪತಿಗೆ ಲೀಸ್​ಗೆ ಕೊಟ್ಟಿದ್ದ. ಇತ್ತ ಮನೋಹರ್ ದೂರದಲ್ಲಿರುವ ಮನೆ ಮಾಲೀಕರಿಗೆ ಬಾಡಿಗೆಯನ್ನ ಪಾವತಿಸುತ್ತಿದ್ದ. ಆದಕ್ಕೆ ಕಳೆದ 6 ತಿಂಗಳಿನಿಂದ ಬಾಡಿಗೆ ಕೊಡದ ಹಿನ್ನೆಲೆ, ಮಾಲೀಕರಿಗೆ ಅನುಮಾನ ಮೂಡಿತ್ತು. ಆ ಹಿನ್ನೆಲೆ ಮನೆ ಬಳಿ ಬಂದಿದ್ದ ಮಾಲೀಕರಿಗೆ ದಿಗಿಲು ಬಡಿದಂತಾಗಿದೆ. ತಾವು ಮನೆ ಬಾಡಿಗೆ ಕೊಟ್ಟಿದ್ದ ವ್ಯಕ್ತಿಯೇ ಬೇರೆ, ಈಗ ಇರುವವರೇ ಬೇರೆ ಅನ್ನುವುದು ಗೊತ್ತಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಮನೋಹರ್​ ಕೃತ್ಯ ಬಯಲಾಗಿದೆ. ಬಾಡಿಗೆ ಪಡೆದಿದ್ದ ಮನೆಯನ್ನು ಲೀಸ್​ಗೆ ಹಾಕಿ ಮನೋಹರ್ ಪರಾರಿಯಾಗಿದ್ದಾನೆ.

ಇತ್ತ ಮನೆ ಮಾಲೀಕರು ಲೀಸ್​ಗೆ ಇದ್ದ ದಂಪತಿಗೆ ಮನೆ ಖಾಲಿ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಲೀಸ್ ಹಣ ಕೇಳಿದ್ರೆ ಯಾರಿಗೆ ಕೊಟ್ಟಿದ್ದೀರಾ ಅವರನ್ನೇ ಕೇಳಿ ಅನ್ನುತ್ತಿದ್ದಾರೆ ಮನೆ ಮಾಲೀಕರು.

ಸದ್ಯ ಬ್ರೋಕರ್ ರಂಜನ್, ಮನೋಹರ್ ಹಾಗೂ ಪತ್ನಿ ಶೀತರ್ 40ಕ್ಕೂ ಹೆಚ್ಚು ಜನರಿಗೆ ಇದೇ ರೀತಿ ಮೋಸ ಮಾಡಿರುವ ಬಗ್ಗೆ ದೂರು ದಾಖಲಾಗಿದೆ. ಮೊದಲು ಮನೆ ಬಾಡಿಗೆಗೆ ಪಡೆದು, ಬೇರೆಯವರಿಗೆ ಲೀಸ್​ಗೆ ಕೊಡುವುದೇ ಆರೋಪಿಗಳ ಖಯಾಲಿ ಆಗಿದೆ ಎಂದು ತಿಳಿದು ಬಂದಿದೆ. ಸದ್ಯ ಈ ಕುರಿತು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Last Updated : Oct 9, 2020, 4:27 PM IST

ABOUT THE AUTHOR

...view details