ಕಲಬುರಗಿ: ಮರಾಠ ಸಮುದಾಯಕ್ಕೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಬಲ ತುಂಬಲು ರಾಜ್ಯ ಸರ್ಕಾರವು ಮರಾಠ ಅಭಿವೃದ್ಧಿ ಮಂಡಳಿ ರಚಿಸಿದೆ. ಇದು ಕನ್ನಡ ಹಾಗೂ ಮರಾಠಿ ಭಾಷೆಯ ನಡುವಿನ ಗೊಂದಲಕ್ಕೆ ಸಂಬಂಧಿಸಿದ್ದಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಮರಾಠ ಸಮುದಾಯವನ್ನು ಪ್ರೀತಿಯಿಂದ ಕಾಣಿ: ಕನ್ನಡಪರ ಸಂಘಟನೆಗಳಿಗೆ ಲಕ್ಷ್ಮಣ ಸವದಿ ಮನವಿ - Maratha Development Board
ಮರಾಠ ಅಭಿವೃದ್ಧಿ ಮಂಡಳಿಯ ರಚನೆಯು ಭಾಷೆಯ ನಡುವಿನ ಗೊಂದಲಕ್ಕೆ ಸಂಬಂಧಿಸಿದ್ದಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಲಕ್ಷ್ಮಣ ಸವದಿ
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಮರಾಠ ಸಮುದಾಯದ ಸಾವಿರಾರು ವರ್ಷದ ಇತಿಹಾಸ ಕರ್ನಾಟದಲ್ಲಿ ಇದೆ. ಎಲ್ಲಾ ಸಮುದಾಯದಂತೆ ಅವರಲ್ಲಿಯೂ ಬಡವರು ಹಾಗೂ ಹಿಂದುಳಿದವರಿದ್ದಾರೆ. ಅವರ ಏಳಿಗೆಗಾಗಿ ಅಭಿವೃದ್ಧಿ ಮಂಡಳಿ ರಚನೆ ಮಾಡಲು ಸಿಎಂ ಸೂಚಿಸಿದ್ದಾರೆ ಎಂದರು.
ಇತರೆ ಅಭಿವೃದ್ಧಿ ಮಂಡಳಿಯಂತೆ ಮರಾಠ ಜನಾಂಗದ ಅಭಿವೃದ್ಧಿಗಾಗಿ ಮಂಡಳಿ ರಚನೆ ಮಾಡಲಾಗುತ್ತಿದೆ. ಕನ್ನಡಪರ ಸಂಘಟನೆಗಳು ಈ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಳ್ಳಬಾರದು. ಇತರೆ ಸಮುದಾಯದಂತೆ ಅವರನ್ನೂ ಪ್ರೀತಿಯಿಂದ ಕಾಣುವಂತೆ ಮನವಿ ಮಾಡಿದರು.