ಕರ್ನಾಟಕ

karnataka

ETV Bharat / state

ನಟಿ ಸಂಜನಾ ಗಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರ...ಮೌಲ್ವಿ ವಿರುದ್ದ ದೂರು ದಾಖಲಿಸಿದ ವಕೀಲ..! - Sanjana caught in Drug case

ನಟಿ ಸಂಜನಾ ಗಲ್ರಾನಿ ಅವರನ್ನು ಬಲವಂತವಾಗಿ ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಟ್ಯಾನರಿ ರಸ್ತೆಯ ದಾರುಲ್ ಉಲಮ್ ಶಾವಲಿಲುಲ್ಲಾ ಎಂಬ ಮೌಲ್ವಿ ವಿರುದ್ಧ ವಕೀಲ ಅಮೃತೇಶ್ ಎನ್ನುವವರು ದೂರು ದಾಖಲಿಸಿದ್ದಾರೆ.

Sanjana galrani conversion to Muslim religion
ಸಂಜನಾ ಗಲ್ರಾನಿ

By

Published : Dec 14, 2020, 7:00 AM IST

Updated : Dec 14, 2020, 12:41 PM IST

ಬೆಂಗಳೂರು: ಸ್ಯಾಂಡಲ್​ವುಡ್​​ ನಟಿ ಸಂಜನಾ ಗಲ್ರಾನಿ, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ವಾಸ ಅನುಭವಿಸಿ ಈಗ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಸಂಜನಾ ಅವರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಆರೋಪಿಸಿ ಮೌಲ್ವಿಯೊಬ್ಬರ ವಿರುದ್ಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗುತ್ತಿದೆ.

ದೂರು ಪ್ರತಿ
ದೂರು ಪ್ರತಿ

ಇದನ್ನೂ ಓದಿ:ನಶೆ ಲೋಕದಲ್ಲಿ ತೇಲಾಡಿದ ನಟಿಗೆ ಹೆಚ್ಚಾಯ್ತು ಚಿಂತೆ : ಒಂಟಿಯಾದ ರಾಗಿಣಿ

ವಕೀಲ ಅಮೃತೇಶ್ ಎನ್ನುವವರು ಬೆಂಗಳೂರಿನ ಟ್ಯಾನರಿ ರಸ್ತೆಯ ದಾರುಲ್ ಉಲಮ್ ಶಾವಲಿಲುಲ್ಲಾ ಎಂಬ ಮೌಲ್ವಿ ವಿರುದ್ಧ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಕಾಟನ್‌ಪೇಟೆ ಪೊಲೀಸರು ಕಾನೂನು ಸಲಹೆ ಪಡೆಯಲು ಮುಂದಾಗಿದ್ದಾಾರೆ. ನಟಿ ಸಂಜನಾ ಅವರನ್ನು 09 ಅಕ್ಟೋಬರ್ 2018 ರಂದು ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗಿದ್ದು ಮಹಿರಾ ಎಂದು ಮರುನಾಮಕರಣ ಮಾಡಲಾಗಿರುವ ಪ್ರಮಾಣಪತ್ರವನ್ನು ನೀಡಲಾಗಿದೆ. ಆದರೆ ನಟಿಯನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂಬ ದೂರಿನಡಿ ಎಫ್​​​ಐಆರ್ ದಾಖಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕಾರ್ಡಿಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿರುವ ಡಾ. ಅಜೀಜ್ ಎಂಬುವವರನ್ನು ಸಂಜನಾ ಮದುವೆಯಾಗಿದ್ದಾರೆ ಎನ್ನಲಾದ ಫೋಟೋ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಇದೀಗ ಸಂಜನಾ ಅವರನ್ನು ಬಲವಂತವಾಗಿ ಮತಾಂತರಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ದೂರು ಪ್ರತಿ
ಮತಾಂತರವಾಗಿರುವ ಬಗ್ಗೆ ಸಂಜನಾ ಗಲ್ರಾನಿ ನೀಡಿರುವ ಪ್ರಮಾಣ ಪತ್ರ
Last Updated : Dec 14, 2020, 12:41 PM IST

ABOUT THE AUTHOR

...view details