ಬೆಂಗಳೂರು:ಆ್ಯಂಬುಲೆನ್ಸ್ ಸಾಗಲು ಅನುವು ಮಾಡಿಕೊಡದೆ ನಿಂತಿದ್ದಾರೆ ಎಂದು ಆರೋಪಿಸಿ ವಕೀಲ ಜಗದೀಶ್ ಪೀಣ್ಯ ಟ್ರಾಫಿಕ್ ಪೊಲೀಸರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಆ್ಯಂಬುಲೆನ್ಸ್ಗೆ ಸಂಚರಿಸಲು ಅನುವು ಮಾಡಿಕೊಡದೆ ದಂಡ ವಸೂಲಿಯಲ್ಲೇ ಮಗ್ನ.. ಟ್ರಾಫಿಕ್ ಪೊಲೀಸರ ವಿರುದ್ಧ ವಕೀಲ ಜಗದೀಶ್ ಗರಂ - ಟ್ರಾಫಿಕ್ ಪೊಲೀಸರಿಗೆ ಅವಾಜ್ ಹಾಕಿದ ವಕೀಲ ಜಗದೀಶ್
ಬೆಂಗಳೂರು ನಗರ ಸಂಚಾರ ಪೊಲೀಸರು ಸಿಗ್ನಲ್ ಬಳಿ ದಂಡ ವಸೂಲಿ ಮಾಡುತ್ತಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ ವಕೀಲ ಜಗದೀಶ್, ಫ್ಲೈ ಒವರ್ ದುರಸ್ತಿ ಆಗಿದೆ. ಸಾಕಷ್ಟು ಟ್ರಾಫಿಕ್ ಸಮಸ್ಯೆಯಿದೆ, ಆಂಬ್ಯುಲೆನ್ಸ್ ತೆರಳಲು ಅನುವು ಮಾಡಿಕೊಡದೆ ದಂಡ ವಸೂಲಿ ಮಾಡುತ್ತಿರುವುದು ಸರಿಯಲ್ಲ ಎಂದು ಪೊಲೀಸರ ವಿರುದ್ಧ ಅವರು ಸಿಡಿಮಿಡಿಗೊಂಡರು.
![ಆ್ಯಂಬುಲೆನ್ಸ್ಗೆ ಸಂಚರಿಸಲು ಅನುವು ಮಾಡಿಕೊಡದೆ ದಂಡ ವಸೂಲಿಯಲ್ಲೇ ಮಗ್ನ.. ಟ್ರಾಫಿಕ್ ಪೊಲೀಸರ ವಿರುದ್ಧ ವಕೀಲ ಜಗದೀಶ್ ಗರಂ ಟ್ರಾಫಿಕ್ ಪೊಲೀಸರಿಗೆ ಅವಾಜ್ ಹಾಕಿದ ವಕೀಲ ಜಗದೀಶ್](https://etvbharatimages.akamaized.net/etvbharat/prod-images/768-512-14033523-thumbnail-3x2-top.jpg)
ಪೀಣ್ಯ ಮೇಲ್ಸೇತುವೆ ತಾತ್ಕಾಲಿಕ ಬಂದ್ ಹಿನ್ನೆಲೆಯಲ್ಲಿ ಪೀಣ್ಯ 8ನೇ ಮೈಲಿ ಬಳಿ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ಆ್ಯಂಬುಲೆನ್ಸ್ ಸಿಲುಕಿಕೊಂಡಿತ್ತು. ಮತ್ತೊಂದೆಡೆ ಸಂಚಾರ ಪೊಲೀಸರು ಸಿಗ್ನಲ್ ಬಳಿ ದಂಡ ವಸೂಲಿ ಮಾಡುತ್ತಿರುವುದನ್ನು ಕಂಡು ಸಿಡಿಮಿಡಿಗೊಂಡ ವಕೀಲ ಜಗದೀಶ್, ಫ್ಲೈ ಒವರ್ ದುರಸ್ತಿ ಆಗಿದೆ. ಆದ್ರೆ ಸಾಕಷ್ಟು ಟ್ರಾಫಿಕ್ ಸಮಸ್ಯೆಯಿದೆ, ಆ್ಯಂಬುಲೆನ್ಸ್ ತೆರಳಲು ಅನುವು ಮಾಡಿಕೊಡದೆ ದಂಡ ವಸೂಲಿ ಮಾಡುತ್ತಿರುವುದು ಸರಿಯಲ್ಲ ಎಂದರು.
ಸಂಚಾರ ದಟ್ಟಣೆ ಅವಧಿಯಲ್ಲಿಯೂ ದಂಡ ವಸೂಲಿ ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಟ್ರಾಫಿಕ್ ಕಮೀಷನರ್ ರವಿಕಾಂತೇಗೌಡ ಅವರ ಗಮನ ತನ್ನಿ ಎಂದು ಬುದ್ಧಿ ಹೇಳಿದ್ರು.