ಬೆಂಗಳೂರು:ಉದ್ದೇಶಪೂರ್ವಕವಾಗಿ ಎಸ್ಐಟಿ ಅಧಿಕಾರಿಗಳು ಹಾಗೂ ಪೊಲೀಸರು ಸಿಡಿ ಯುವತಿಯ ವಿಡಿಯೋವನ್ನು ಮಾಧ್ಯಮಗಳಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿ ತನಿಖಾಧಿಕಾರಿಗಳ ವಿರುದ್ಧ ದೂರು ನೀಡಲು ವಕೀಲ ಜಗದೀಶ್ ನಿರ್ಧರಿಸಿದ್ದಾರೆ.
ಎಸ್ಐಟಿ ಆರೋಪಿಯ ಪರವಾಗಿ ತನಿಖೆ ಮಾಡುತ್ತಿದೆ. ಸಂತ್ರಸ್ತೆಯ ವಿಡಿಯೋ ಮಾಡಬಾರದು ಎಂದು ಸುಪ್ರೀಂಕೋರ್ಟ್ನ ಆದೇಶವಿದೆ. ಆದರೆ, ನಿನ್ನೆ ನ್ಯಾಯಾಲಯದಿಂದ ಸಂತ್ರಸ್ತೆ ಹೊರಬರುವಾಗ ಎಸ್ಐಟಿ ಅಧಿಕಾರಿಗಳೇ ವಿಡಿಯೋ ಮಾಡಿದ್ದಾರೆ. ಆದರೂ ಪೊಲೀಸರೇ ವಿಡಿಯೋ ಮಾಡಿ ಮಾಧ್ಯಮಕ್ಕೆ ನೀಡಿದ್ದಾರೆ. ಹೀಗಾಗಿ ಮ್ಯಾಜಿಸ್ಟ್ರೇಟ್ಗೆ ದೂರು ನೀಡಲು ಯುವತಿ ಪರ ವಕೀಲರು ಮುಂದಾಗಿದ್ದಾರೆ.